• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಚನಗಳ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣ

By ಮಲೆನಾಡಿಗ
|

ಇಂಥದ್ದೊಂದು ವೆಬ್ ತಾಣ ಕನ್ನಡದಲ್ಲಿ ಅಗತ್ಯವಿದೆ ಎಂದುಕೊಳ್ಳುವ ವೇಳೆಗೆ ವಚನಗಳ ಬೃಹತ್ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣವೊಂದು ನಿಮ್ಮ ಮುಂದೆ ಪ್ರಕಟಗೊಂಡಿದೆ. ಕನ್ನಡದ ಪ್ರಸಿದ್ಧ ಭಾಷಾತಜ್ಞ ಮತ್ತು ವಿಮರ್ಶಕರಾದ ಪ್ರೊ.ಓ.ಎಲ್ ನಾಗಭೂಷಣ, ತಂತ್ರಜ್ಞ, ಸಾಹಿತಿ ವಸುಧೇಂದ್ರ ಅವರ ಮಾರ್ಗದರ್ಶನದಲ್ಲಿ ದೇವರಾಜ್ ಕೆ, ಓಂ ಶಿವಪ್ರಕಾಶ್ ಹಾಗೂ ಪವಿತ್ರ ಹಂಚಗಯ್ಯ ಅವರು ಈ ಮುಕ್ತ ವಚನ ತಾಣ ನಿರ್ಮಿಸಿದ್ದಾರೆ.

ಆಸಕ್ತರು, ವಿದ್ಯಾರ್ಥಿಗಳು, ಸಾಹಿತಿಗಳು, ಭಾಷಾತಜ್ಞರು, ಸಂಶೋಧಕರು, ತಂತ್ರಜ್ಞರು ಬಳಸಲು ನೆರವಾಗುವಂತೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಮತ್ತು ತಂತ್ರಜ್ಞಾನಗಳ ನೆರವಿನಿಂದ ನಿರ್ಮಿಸಿರುವ "ವಚನ ಸಂಚಯ" ವೆಬ್ ತಾಣ ಎಲ್ಲರೂ ಅವಶ್ಯವಾಗಿ ಭೇಟಿ ಕೊಡಬೇಕಾಗಿರುವ ತಾಣ.

11 ಮತ್ತು 12ನೇ ಶತಮಾನದ ಕನ್ನಡ ಸಾಹಿತ್ಯ ಪರಂಪರೆಯ ಬಹುಮುಖ್ಯ ರೂಪ 'ವಚನ ಸಾಹಿತ್ಯ' ಎಲ್ಲ ವಚನಗಳನ್ನು ಆಸಕ್ತರು, ವಿದ್ಯಾರ್ಥಿಗಳು, ಸಾಹಿತಿಗಳು, ಭಾಷಾತಜ್ಞರು, ಸಂಶೋಧಕರು, ತಂತ್ರಜ್ಞರು ಬಳಸಲು ನೆರವಾಗುವಂತೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಮತ್ತು ತಂತ್ರಜ್ಞಾನಗಳ ನೆರವಿನಿಂದ ನಿರ್ಮಿಸಿರುವ "ವಚನ ಸಂಚಯ" ತಾಣ ಈಗ ನಿಮ್ಮ ಮುಂದಿದೆ.

ಇದನ್ನು ಬಳಸಿ, ಇತರರೊಡನೆ ಹಂಚಿಕೊಳ್ಳಿ. ನಿಮ್ಮೆಲ್ಲ ಪ್ರತಿಕ್ರಿಯೆಗಳಿಗೆ, ಸಲಹೆ ಸೂಚನೆಗಳಿಗೆ ನಾವು ಕಾತುರದಿಂದ ಕಾಯುತ್ತಿದ್ದೇವೆ. ಇದು ಪರೀಕ್ಷಾರ್ಥ (beta) ಆವೃತ್ತಿಯಾಗಿದ್ದು, ಇದರಲ್ಲಿ ಕಂಡು ಬರುವ ನ್ಯೂನ್ಯತೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ವೆಬ್ ತಾಣ ಅಭಿವೃದ್ಧಿ ಪಡಿಸಿದ ತಂತ್ರಜ್ಞರದಲ್ಲಿ ಒಬ್ಬರಾದ ಓಂ ಶಿವಪ್ರಕಾಶ್ ಹೇಳಿದ್ದಾರೆ.

Vachana Sanchaya website is a unique collection of Vachanas

ಅಧ್ಯಯನ, ಸಂಶೋಧನೆ, ಕುತೂಹಲಗಳಿಗೆ ವಚನ ಸಂಚಯದ ಭಂಡಾರ ತಾಂತ್ರಿಕ ಅನುಕೂಲತೆಗಳನ್ನೂ ಕಲ್ಪಿಸಿದೆ. ಈ ಪರಿಕಲ್ಪನೆಯ ಉದ್ದೇಶವೂ ಅದೇ. ಸದ್ಯ vachana.sanchaya.net ನಲ್ಲಿ ವಚನಗಳು ಮತ್ತು ಅದರಲ್ಲಿನ ಪದಗಳನ್ನು ಹುಡುಕುವ ಸೌಲಭ್ಯಗಳಿವೆ. ಅದನ್ನು ಇನ್ನಷ್ಟು ಸುಧಾರಿಸುವ ಮೂಲಕ ಹೊಸ ಆಯ್ಕೆಯ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಪದಗಳನ್ನು ಹುಡುಕುವಂತೆಯೇ ನಿರ್ದಿಷ್ಟ ಸಾಲುಗಳನ್ನು ಹುಡುಕುವ, ಜನಪ್ರಿಯ ವಚನಗಳನ್ನು ಒಂದೆಡೆ ಲಭ್ಯವಾಗುವಂತೆ ಮಾಡುವ, ಪದಗಳ ವ್ಯಾಕರಣಬದ್ಧ ಮಾಹಿತಿ ನೀಡುವ ಅಂಶಗಳು ಭವಿಷ್ಯದಲ್ಲಿ ಸೇರ್ಪಡೆಯಾಗುತ್ತಿವೆ. ಇದನ್ನು ಮುಖ್ಯವಾಗಿ ವಿಶ್ವವಿದ್ಯಾನಿಲಯಗಳಿಗೆ ಕೊಂಡೊಯ್ಯುವುದು ಈ ತಂಡದ ಆಶಯ.

ಮೊಬೈಲ್ ಫೋನ್ ಬಳಕೆದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ಮಾದರಿಯ ಫೋನ್ ಗಳಿಗೂ ಹೊಂದಿಕೊಳ್ಳುವ ಸರಳ ಅಪ್ಲಿಕೇಷನ್ ಅನ್ನು ತಯಾರಿಸಲಾಗುತ್ತಿದೆ. ದಾಸ ಸಾಹಿತ್ಯ, ಕುಮಾರವ್ಯಾಸ, ಪಂಪ, ರನ್ನ, ಪೊನ್ನ ಹೀಗೆ ಹಳಗನ್ನಡದ ಎಲ್ಲಾ ಪ್ರಮುಖ ಕಾವ್ಯಗಳೂ ಇಲ್ಲಿ ಸಮಾಗಮಗೊಳ್ಳಲಿವೆ ಎಂದು ತಮ್ಮ ತಂಡ ಮುಂದಿನ ಯೋಜನೆ ಬಗ್ಗೆ ಶಿವಪ್ರಕಾಶ್ ಅವರು ಮಾಹಿತಿ ನೀಡಿದ್ದಾರೆ.

ವಚನ ಸಾಹಿತ್ಯದ ಬಗ್ಗೆ: ಇದು ಕನ್ನಡದ ಸಾಹಿತ್ಯದ ಬಹು ಪ್ರಮುಖ ರೂಪಗಳಲ್ಲಿ ಒಂದು. 11ನೇ ಶತಮಾನದಲ್ಲಿ ಉದಯಿಸಿ 12ನೇ ಶತಮಾನದವರೆಗೂ ಲಿಂಗಾಯತರ ಆಂದೋಲನ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯಾಗಿ ಒಂದು ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶಿಷ್ಟ ಕಾವ್ಯ ಪ್ರಕಾರ. ವಚನ ಸಾಹಿತ್ಯವು ತನ್ನ ಕಾಲದಲ್ಲಿ ಅಭಿವ್ಯಕ್ತಿಗೆ ಸಂಗಾತಿಯಾಯಿತು.

ವಚನ ಎಂದರೆ 'ಪ್ರಮಾಣ' ಎಂದರ್ಥ. ಮಾದರ ಚೆನ್ನಯ್ಯ ಎಂಬ 11ನೇ ಶತಮಾನದಲ್ಲಿ ದಕ್ಷಿಣದ ಚಾಲುಕ್ಯರ ಕಾಲದ ಸಂತ, ಈ ಸಾಹಿತ್ಯ ಸಂಸ್ಕೃತಿಯ ಮೊದಲ ಕವಿಯಾಗಿದ್ದು, ನಂತರ ಉತ್ತರದ ಕಲಾಚುರಿಯ ರಾಜ ಬಲ್ಲಾಳ 2 ನ ಆಸ್ಥಾನದಲ್ಲಿ ಪ್ರಧಾನಮಂತ್ರಿಯಾಗಿದ್ದ ಬಸವಣ್ಣ (1160) ಇದರ ಪಿತಾಮಹನೆಂದು ಕರೆಸಿಕೊಳ್ಳುತ್ತಾರೆ.

ಈ ವಚನ ಸಂಗ್ರಹದಲ್ಲಿ 259 ವಚನಕಾರರ, 20,930ಕ್ಕೂ ಹೆಚ್ಚು ವಚನಗಳಿವೆ. ವಚನಗಳಲ್ಲಿರುವ ಒಟ್ಟು ಪದಗಳ ಸಂಖ್ಯೆ 20,9876 ಕೂ ಹೆಚ್ಚು. ಈ ತಂತ್ರಾಂಶ ವಚನದಲ್ಲಿನ ಪದಗಳನ್ನು ಆಯಾ ವಚನ ಮತ್ತು ವಚನಕಾರರಿಗೆ ಸಂಪರ್ಕವೇರ್ಪಡಿಸಿ ನಿಮ್ಮ ಸಂಶೋಧನೆಗೆ ಸಹಕರಿಸುತ್ತದೆ.

English summary
Vachana Sanchaya website is a unique collection of Vachanas developed by Omshivaprakash, Pavithra Hanchagaiah and Devaraj K with the guidence of Vasudhendra and OLN Swamy. The website has collection over 20930 Vachanas from 259 different authors or Vachanakaras.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X