ಪ್ರಧಾನಿ ಮೋದಿ ಗಿಣಿಪಾಠ ಮಾಡಿದ್ದರೂ ತಿದ್ದಿಕೊಳ್ಳದ ಸಂಸದ ಹೆಗಡೆ

Posted By:
Subscribe to Oneindia Kannada

ನಾವೆಲ್ಲಾ ಜನಪ್ರತಿನಿಧಿಗಳು, ಜನಸೇವೆಯೇ ಜನಾರ್ಧನನ ಸೇವೆ ಎಂದು ಕೆಲವು ತಿಂಗಳ ಹಿಂದೆ ರಾಜ್ಯದ ಎಂಪಿಗಳೂ ಸೇರಿದಂತೆ ಸಂಸದರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಠ ಮಾಡಿದ್ದರು.

ಹೀಗೆ ಮೋದಿಯವರಿಂದ ಪಾಠ ಮಾಡಿಸಿಕೊಂಡವರಲ್ಲಿ ಉತ್ತರಕನ್ನಡದ ಬಿಜೆಪಿ ಲೋಕಸಭಾ ಸದಸ್ಯ ಅನಂತ್ ಕುಮಾರ್ ಹೆಗಡೆ ಕೂಡಾ ಒಬ್ಬರು. ಆದರೆ ಪ್ರಧಾನಿಯವರ ಶಿಸ್ತಿನ ಪಾಠವನ್ನು ನೀರಿನಲ್ಲಿ ಹೋಮ ಮಾಡಿದಂತೆ ವ್ಯರ್ಥ ಮಾಡಿಕೊಂಡಿದ್ದಾರೆ ಸಂಸದ ಹೆಗಡೆ. (ವೈದ್ಯರಿಗೆ ಗೂಸಾ ಕೊಟ್ಟ ಬಿಜೆಪಿ ಸಂಸದ, ವಿಡಿಯೋ)

ಅಸಲಿಗೆ, ಹೆಗಡೆಯವರ ಈ ರೀತಿಯ ವರ್ತನೆ ಹೊಸದೇನಲ್ಲ. ಅಭಿವೃದ್ದಿ ಕೆಲಸಕ್ಕಿಂತ ಹೆಚ್ಚಾಗಿ ಪ್ರಚೋದನಕಾರಿ ಕಾರ್ಯವೈಖರಿ ಮತ್ತು ಉದ್ದಟತನದಿಂದಲೇ ಹೆಸರುವಾಸಿಯಾಗಿರುವ ಹೆಗಡೆ ತಮ್ಮ ರಾಜಕೀಯ ಜೀವನದಲ್ಲಿ ಮಾಡಿಕೊಂಡಿರುವ ಎಡವಟ್ಟುಗಳು ಒಂದಲ್ಲ ಎರಡಲ್ಲ..

ವೈದ್ಯೋ ಹರಿ: ನಾರಾಯಾಣ ಎನ್ನುವ ಮಾತಿದೆ. ಆದರೆ ಅನಂತ್ ಕುಮಾರ್ ಹೆಗಡೆ ವೈದ್ಯರನ್ನೇ ಥಳಿಸಿ ಶಿಸ್ತಿನ ಪಕ್ಷದ ಮುಖಂಡರಿಗೆ ಮತ್ತೆ ತಲೆನೋವಾಗಿ ಪರಿಣಮಿಸಿದ್ದಾರೆ.

ತಾಯಿಗೆ ಸೂಕ್ತ ರೀತಿಯಲಿ ಚಿಕಿತ್ಸೆ ನೀಡಲಿಲ್ಲ ಎನ್ನುವ ಕಾರಣಕ್ಕಾಗಿ ಶಿರಸಿಯ ಟಿಎಸ್ಎಸ್ ಆಸ್ಪತ್ರೆಯ ಡಾಕ್ಟರುಗಳು ಮತ್ತು ಸಿಬ್ಬಂದಿಗಳನ್ನು ಮನಬಂದಂತೇ ಥಳಿಸಿ ಮತ್ತೆ ತಮ್ಮ ಗೂಂಡಾವರ್ತನೆವನ್ನು ಸಂಸದ ಹೆಗಡೆ ಮುಂದುವರಿಸಿದ್ದಾರೆ. (ವೈದ್ಯರಿಗೆ ಬಿಜೆಪಿ ಎಂಪಿ ಹೆಗಡೆ ಗೂಸಾ)

ಸತತವಾಗಿ ಲೋಕಸಭೆಗೆ ಆಯ್ಕೆಯಾಗುತ್ತಿದ್ದರೂ, ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕೆಂದು ಇನ್ನೂ ಅರ್ಥಮಾಡಿಕೊಳ್ಳದ ಹೆಗಡೆಯವರ ವರ್ತನೆ ವ್ಯಾಪಕ ಟೀಕೆಗೆಗೊಳಗಾಗಿದೆ. ಮುಂದೆ ಓದಿ..

 ನರೇಂದ್ರ ಮೋದಿ

ನರೇಂದ್ರ ಮೋದಿ

ಒಂದು ಕಡೆ ಸುರಕ್ಷಿತ, ಸ್ವಚ್ಚ ಭಾರತ್ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಮೋದಿಯವರ ರಾಜ್ಯಭಾರದಲ್ಲಿ ತಮ್ಮ ಪಕ್ಷದ ಸದಸ್ಯನ ಈ ಅತಿರೇಕದ ವರ್ತನೆ ಪ್ರಧಾನಿಗೆ ಮುಂದೊಂದು ದಿನ ದುಬಾರಿಯಾಗಿ ಪರಿಣಮಿಸದೇ ಇರದು. ಹಾಗಾಗಿ ರಾಜ್ಯ ಬಿಜೆಪಿ ಹಿರಿಯರು ಮತ್ತು ಕೇಂದ್ರದ ಮುಖಂಡರು ಸಂಸದ ಅನಂತ್ ಕುಮಾರ್ ಹೆಗಡೆಯವರಿಗೆ ಫೈನಲ್ ವಾರ್ನಿಂಗ್ ನೀಡುವುದು ಸೂಕ್ತ ಎನ್ನುವುದು ಅಲ್ಲಲ್ಲಿ ಕೇಳಿ ಬರುತ್ತಿರುವ ಮಾತು.

 ಸಂಸದರ ಸಭೆ

ಸಂಸದರ ಸಭೆ

ಜನಪ್ರತಿನಿಧಿಗಳು ಹೇಗಿರಬೇಕು, ಹೇಗೆ ಇತರರಿಗೆ ಮಾದರಿಯಾಗಬೇಕು, ಹೇಗೆ ಶಿಸ್ತನ್ನು ಬೆಳೆಸಿಕೊಳ್ಳಬೇಕೆಂದು ಕೆಲವು ತಿಂಗಳ ಹಿಂದೆ ಸಂಸದರ ಸಭೆಯಲ್ಲಿ ಪ್ರಧಾನಮಂತ್ರಿ ಪಾಠ ಮಾಡಿದ್ದರು. ಆದರೆ ಪ್ರಧಾನಿಯ ಶಿಸ್ತಿನ ಪಾಠವನ್ನು ಸಂಸದ ಹೆಗಡೆ ಮೈಗೂಡಿಸಿಕೊಂಡಂತೇ ಕಾಣುವುದಿಲ್ಲ.

 ಪ್ರಚೋದನಾಕಾರಿ ಹೇಳಿಕೆ

ಪ್ರಚೋದನಾಕಾರಿ ಹೇಳಿಕೆ

ಪ್ರಚೋದನಕಾರಿ ಹೇಳಿಕೆಗೆ ಹೆಸರುವಾಸಿಯಾಗಿರುವ ಹೆಗಡೆ, ಇಸ್ಲಾಂ ಇರುವವರೆಗೆ ಭಯೋತ್ಪದಾನೆ ನಿರ್ಮೂಲನೆ ಸಾಧ್ಯವಿಲ್ಲ, ತಾಕತ್ತಿದ್ದರೆ ಮಾಧ್ಯಮದವರು ನನ್ನ ಹೇಳಿಕೆಯನ್ನು ಪ್ರಸಾರ ಮಾಡಲಿ ನೋಡೋಣ ಎಂದು ಹೇಳಿಕೆ ನೀಡಿ ರಾಜ್ಯಾದ್ಯಂತ ಮುಸ್ಲಿಂ ಬಾಂಧವರ ಆಕ್ರೋಶಕ್ಕೆ ಒಳಗಾಗಿದ್ದರು. ರಾಜ್ಯದೆಲ್ಲಡೆ ಇವರ ವಿರುದ್ದ ದೂರು ದಾಖಲಾಗಿತ್ತು.

ಮುಸ್ಲಿಮರ ಮತ

ಮುಸ್ಲಿಮರ ಮತ

ಕಳೆದ ಲೋಕಸಭಾ ಚುನಾವಣೆಯ ವೇಳೆ, ಮುಸ್ಲಿಮರ ಮತ ನನಗೆ ಬೇಕಾಗಿಲ್ಲ. ನಾನು ಹಾಗೇ ಜಯ ಸಾಧಿಸುತ್ತೇನೆಂದು ಅನಂತ್ ಕುಮಾರ್ ಹೆಗಡೆ ದ್ವೇಷ ಭಾಷಣ ಮಾಡಿದ್ದರು. ಇವರ ಹೇಳಿಕೆ ಮತ್ತೆ ಉತ್ತರಕನ್ನಡದಲ್ಲಿ ವ್ಯಾಪಕ ಚರ್ಚೆಗೊಳಗಾಗಿತ್ತು.

ಬುದ್ದಿಜೀವಿಗಳು, ಮಾಧ್ಯಮದವರು

ಬುದ್ದಿಜೀವಿಗಳು, ಮಾಧ್ಯಮದವರು

ದೇಶದಲ್ಲಿ ಕೆಲ ಬುದ್ದಿಜೀವಿಗಳು ಮತ್ತು ಮಾಧ್ಯಮದವರು ಉಗ್ರರಿಗೆ ಬೆಂಬಲ ನೀಡುತ್ತಿದ್ದಾರೆ. ದೇಶದ್ರೋಹದ ಕೆಲಸವನ್ನು ಬುದ್ದಿಜೀವಿಗಳು ಮತ್ತು ಕೆಲವು ಮಾಧ್ಯಮದವರು ವೈಭವೀಕರಿಸುತ್ತಿದ್ದಾರೆಂದು JNU ಘಟನೆಯನ್ನು ಉಲ್ಲೇಖಿಸಿ ಅನಂತ್ ಕುಮಾರ್ ಹೆಗಡೆ ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Anant Kumar Hegde, MP from Uttara Kannada (Karnataka) always will be in news for his controversial statement and acts.
Please Wait while comments are loading...