ಶಿರಸಿ ಮಾರಿಕಾಂಬಾ ಜಾತ್ರೆಗೆ ಎಲ್ಲರೂ ಬನ್ನಿ

Subscribe to Oneindia Kannada

ಶಿರಸಿ, ಮಾರ್ಚ್, 18: ಗದ್ದುಗೆಯನ್ನು ಏರಿ ಕುಳಿತ ಮಾರಿಕಾಂಬೆ, ಎಲ್ಲ ಕಡೆ ಜನವೋ ಜನ, ಯಕ್ಷಗಾನ, ಚಂಡೆ ಸದ್ದು, ಸಾಮಾಜಿಕ ನಾಟಕ, ಬಗೆಬಗೆಯ ಆಟಗಳು... ಹೌದು ಈ ಎಲ್ಲ ಸಂಭ್ರಮ-ಸಂತಸಗಳನ್ನು ಕಟ್ಟಿಕೊಡುವ ಶಿರಸಿ ಜಾತ್ರೆಗೆ ದಿನಗಣನೆ ಆರಂಭವಾಗಿದೆ.

ಉತ್ತರಕನ್ನಡ ಜಿಲ್ಲೆ ಶಿರಸಿಯ ಮಾರಿಕಾಂಬೆಯ ಕೃಪೆಗೆ ಪಾತ್ರರಾಗುವ ಕಾಲ ಬಂದಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಶಿರಸಿಯಲ್ಲಿ ಭರದ ಸಿದ್ಧತೆಗಳು ಪೂರ್ಣಗೊಂಡಿವೆ.[ಅರೇಕಾ ಟೀ ಮಾರುಕಟ್ಟೆಗೆ, ನೀವು ಸ್ವಾದ ನೀಡಿದ್ರಾ!]

ಜ್ಯದ ಅತಿದೊಡ್ಡ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆ ಮಾ.22ರಿಂದ 30ರ ತನಕ ನಡೆಯಲಿದೆ. ಭದ್ರತಾ ವ್ಯವಸ್ಥೆಗೆ 1 ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲು ಪೊಲೀಸ್‌ ಇಲಾಖೆ ಕ್ರಮವಹಿಸಿದೆ ಎಂದು ಡಿವೈಎಸ್ಪಿ ಪ್ರಮೋದರಾವ್ ತಿಳಿಸಿದ್ದಾರೆ. ಜಾತ್ರೆ ಅಂಗವಾಗಿ ಶಾಂತಿ ಪಾಲನಾ ಸಭೆಯನ್ನು ನಡೆಸಲಾಗಿದೆ.[ವಾದಿರಾಜರ ತಪೋಭೂಮಿ ಸೋಂದಾ ಕ್ಷೇತ್ರಕ್ಕೆ ನೂತನ ಬ್ರಹ್ಮರಥ]

ಇಡೀ ರಾಜ್ಯದ ಮೂಲೆ ಮಮೂಲೆಯಿಂದ ಪ್ರವಾಸಿಗರು ಆಗಮಿಸಲಿದ್ದಾರೆ. ಜಾತ್ರಾ ಗದ್ದುಗೆ ಬಿಡ್ಕಿಬಯಲಿನಲ್ಲಿ ಮಾರಿಕಾಂಬಾ ದೇವಿಯ ಗದ್ದುಗೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಸುತ್ತಮುತ್ತಿಲನ ಅಂಗಡಿಗಳನ್ನು ತಾತ್ಕಾಲಿಕವಾಗಿ ತೆರವು ಮಾಡಲಾಗಿದ್ದು ಜಾತ್ರಾ ಸಂಭ್ರಮ ನಿಧಾನವಾಗಿ ಮನೆ ಮಾಡುತ್ತಿದೆ.

ಜನದಟ್ಟಣೆ ಪ್ರದೇಶದಲ್ಲಿ ಸಿಸಿ ಕ್ಯಾಮರಾ

ಜನದಟ್ಟಣೆ ಪ್ರದೇಶದಲ್ಲಿ ಸಿಸಿ ಕ್ಯಾಮರಾ

ಮಾರಿಕಾಂಬಾ ದೇವಿಯ ಗದ್ದುಗೆ, ಮತ್ತಿತರ ಜನದಟ್ಟಣಿಯ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ, ಸರ್ಚ್ ಪಾಯಿಂಟ್‌ಗಳನ್ನು ಅಳವಡಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

 ವಿಶೇಷ ಬಲ್ಬ್ ಅಳವಡಿಕೆ

ವಿಶೇಷ ಬಲ್ಬ್ ಅಳವಡಿಕೆ

ಜಾತ್ರಾ ಪ್ರದೇಶದಲ್ಲಿ ಬೆಳಕಿನ ಕೊರತೆ ಉಂಟಾಗದಂತೆ ವಿಶೇಷ ಬಲ್ಬ್ ಅಳವಡಿಕೆಗೆ ಪ್ರಯತ್ನಿಸಲಾಗುತ್ತಿದೆ. ವಾಹನ ದಟ್ಟಣೆ ನಿಯಂತ್ರಣ, ವಾಹನ ನಿಲುಗಡೆ ವ್ಯವಸ್ಥೆ ಬಗ್ಗೆ ವಿಶೇಷ ನಿಗಾವಹಿಸಲಾಗುವುದು.

 ವಾಹನ ನಿಲುಗಡೆಗೆ ಅವಕಾಶವಿಲ್ಲ

ವಾಹನ ನಿಲುಗಡೆಗೆ ಅವಕಾಶವಿಲ್ಲ

ಟ್ರಾಫಿಕ್ ಸಮಸ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಐದು ರಸ್ತೆ ವೃತ್ತದಿಂದ 50 ಮೀಟರ್‌ ಸುತ್ತಳತೆಯಲ್ಲಿ ಯಾವುದೇ ವಾಹನ ನಿಲುಗಡೆ ಅವಕಾಶ ನೀಡಲಾಗುವುದಿಲ್ಲ. ಹನುಮಾನ ವ್ಯಾಯಾಮ ಶಾಲೆಯ ಮೈದಾನದಲ್ಲಿ ಹುಲೇಕಲ್ ಮತ್ತು ಯಲ್ಲಾಪುರ ಕಡೆ ಹೋಗುವ ಬಸ್‌ಗಳ ತಾತ್ಕಾಲಿಕ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು.

ಬಸ್ ನಿಲುಗಡೆ

ಬಸ್ ನಿಲುಗಡೆ

ಸಿದ್ದಾಪುರ ಹಾಗೂ ಕುಮಟಾ ರಸ್ತೆಯ ಬಸ್‌ಗಳಿಗೆ ರಾಯಪ್ಪ ಹುಲೇಕಲ್ ಆವರಣದಲ್ಲಿ, ಹುಬ್ಬಳ್ಳಿ ರಸ್ತೆಯ ಬಸ್ ಪ್ರಯಾಣಿಕರಿಗೆ ಎಪಿಎಂಸಿ ಗೇಟ್‌ ಬಳಿ ಬಸ್‌ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.

 ಬನವಾಸಿ ಕಡೆ

ಬನವಾಸಿ ಕಡೆ

ಬನವಾಸಿ ಭಾಗದ ವಾಹನಗಳಿಗೆ ಬನವಾಸಿ ರಸ್ತೆಯ ಗೊಲಗೇರಿ ಕ್ರಾಸ್, ಹುಲೇಕಲ್ ಭಾಗದಲ್ಲಿ ಓಡಾಡುವ ಟೆಂಪೊಗಳಿಗೆ ವ್ಯಾಯಾಮ ಶಾಲೆ ಪಕ್ಕದ ಚರ್ಚ್ ಎದುರು ನಿಲುಗಡೆಗೆ ತಿಳಿಸಲಾಗಿದೆ ಎಂದು ಜಾತ್ರಾ ಆಡಳಿತ ಮಂಡಳಿ ಮತ್ತು ನಗರಸಭೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Uttara Kannada District Sirsi is gearing up for the famous Marikamba Jatra. The religious festival will starts on 22 March 2016.
Please Wait while comments are loading...