'ಹಿಂದಿ ದಿವಸ್'ದಂದು ಕನ್ನಡ ಬಳಸುವ ಸಂಕಲ್ಪ ಮಾಡಿ

ಸೆಪ್ಟೆಂಬರ್ 14 - ಹಿಂದಿ ಭಾಷೆಯನ್ನು ರಾಜಭಾಷೆಯನ್ನಾಗಿಸಿದ ದಿನ, ಹಿಂದಿ ಭಾಷೆಯನ್ನು ಸಿಂಹಾಸನದ ಮೇಲೆ ಕೂರಿಸಿ ಉಳಿದೆಲ್ಲಾ ಭಾಷೆಗಳು ಹಿಂದಿ ಭಾಷೆಗಿಂತ ಕಡಿಮೆ ಸ್ಥಾನಕ್ಕೆ ಸೀಮಿತಗೊಳಿಸಿದ ದಿನ, ಹಿಂದಿ ಎಂದರೆ ಭಾರತ ಎನ್ನುವ ಸುಳ್ಳಿನ ಸೌಧವನ್ನು ರೂಪಿಸಲು ಅಡಿಪಾಯ ಹಾಕಿದ ದಿನ.

ಈ ದಿನವನ್ನು ಕೇಂದ್ರ ಸರಕಾರ 'ಹಿಂದಿ ದಿವಸ್' ಎಂದು ಆಚರಿಸುತ್ತೆ, ಹಿಂದಿಯೊಂದೇ ಭಾಷೆಗೆ ಪ್ರಾಮುಖ್ಯತೆ ದೊರೆಕಿಸಿಕೊಡಲು ಪ್ರಯತ್ನಿಸುತ್ತೆ. ಬನ್ನಿ, ಇದನ್ನು ವಿರೋಧಿಸೋಣ, ಕೇಂದ್ರ ಸರಕಾರ ನಡೆಸುತ್ತಿರೋ ಹಿಂದಿ ಹೇರಿಕೆಯನ್ನು ಎತ್ತಿಹಿಡಿಯೋಣ, ಭಾಷಾ ವೈವಿಧ್ಯತೆಯ ಭಾರತದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನ ಸಿಗಬೇಕೆಂದು ಒತ್ತಾಯಿಸೋಣ.

Use only Kannada on Hindi Diwas

ಇದಕ್ಕಾಗಿ ನಾವು ಮಾಡಬೇಕಾಗಿರುವುದು ಇಷ್ಟು.... ಟ್ವಿಟ್ಟರ್ ನಲ್ಲಿ Facebook ನಲ್ಲಿ #GOIStopHindiImposition Hashtag ಬಳಸಿ.

ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರು ಕನ್ನಡಿಗರೊಂದಿಗೆ ಕನ್ನಡದಲ್ಲೇ ಮಾತಾಡುವ ಅಗತ್ಯವಿದೆ. ಉದ್ಯೋಗ ಅರಸಿ ಬಂದ ಕನ್ನಡೇತರ ಕುಟುಂಬಗಳೊಂದಿಗೂ ಕನ್ನಡ ಮಾತಾಡುತ್ತ, ಅವರಿಗೆ ಸ್ಥಳೀಯ ಭಾಷೆಯಾದ ಕನ್ನಡದ ಮೇಲೆ ಪ್ರೀತಿ ಹುಟ್ಟುವಂತೆ ಮಾಡಬೇಕಾದ ಅಗತ್ಯವೂ ಇದೆ.

ಕನ್ನಡವನ್ನು ಕಡ್ಡಾಯವಾಗಿ ಬಳಸಿಯೇ ಬಳಸುತ್ತೇನೆ ಎಂದು ಕನ್ನಡಿಗರು ಸಂಕಲ್ಪ ಮಾಡಿ, ಕಡ್ಡಾಯವಾಗಿ ಜಾರಿಗೆ ತರುವವರೆಗೆ ಹಿಂದಿ ಹೇರಿಕೆಯನ್ನೂ ತಡೆಗಟ್ಟಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ, ವೆಬ್ ಸೈಟುಗಳಲ್ಲಿ ಅಭಿಪ್ರಾಯ ಮಂಡಿಸುವಾಗ ಕಡ್ಡಾಯವಾಗಿ ಕನ್ನಡದಲ್ಲಿಯೇ ನಿಮ್ಮ ಅನಿಸಿಕೆಗಳನ್ನು ತಿಳಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+