ಯುಪಿಎಸ್‌ಸಿ ಐಎಫ್ಎಸ್ ಫಲಿತಾಂಶ ಪ್ರಕಟ: ರಾಜ್ಯದ 10 ಅಭ್ಯರ್ಥಿಗಳು ಆಯ್ಕೆ
ಬೆಂಗಳೂರು ಜೂ. 29: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಬುಧವಾರ 2021ರ ಆವೃತ್ತಿಯ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ನೇಮಕಾತಿ ಪರೀಕ್ಷೆ ಅಂತಿಮ ಫಲಿತಾಂಶ ಪ್ರಕಟಗೊಳಿಸಿದೆ.
ಆಯೋಗವು ಒಟ್ಟು 110 ಸ್ಥಾನಗಳ ಪೈಕಿ 108 ಮಂದಿಯನ್ನು ಶಿಫಾರಸ್ಸು ಮಾಡಿದ್ದು, ಇದರಲ್ಲಿ ಕರ್ನಾಟಕ ರಾಜ್ಯದ ಹತ್ತಕ್ಕೂ ಅಧಿಕ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಯುಪಿಎಸ್‌ಸಿ ಐಎಫ್ ಎಸ್ ನೇಮಕಾತಿ ಪರೀಕ್ಷೆಯಲ್ಲಿ ಕರ್ನಾಟಕದ ಶೃತಿ ಎಂಬುವವರು ಟಾಪರ್ ಆಗಿ ಹೊರ ಹೊಮ್ಮಿದ್ದರೆ, ಅಭ್ಯರ್ಥಿ ವರದರಾಜ್ ಗಾಂವ್ಕರ್ ಅವರು ದೇಶಕ್ಕೆ ಎರಡನೇ ಟಾಪರ್ ಆಗಿದ್ದಾರೆ. 110ಸ್ಥಾನಗಳ ಆಯ್ಕೆಗಾಗಿ ಪರೀಕ್ಷೆ ನಡೆಸಲಾಗಿತ್ತು. ಆಯೋಗ ಶಿಫಾರಸ್ಸು ಮಾಡಿರುವ 108 ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು 30, ಆರ್ಥಿಕವಾಗಿ ಹಿಂದುಳಿದ ಮೀಸಲಾತಿಯಲ್ಲಿ 14, ಎಸ್.ಸಿ 16, ಎಸ್.ಟಿ 88, ಇತರೆ ಕೋಟಾದಡಿ 40 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ.

ಕರ್ನಾಟಕದ ಅಭ್ಯರ್ಥಿಗಳು ದೇಶಕ್ಕೆ ಎರಡನೇ ರ್‍ಯಾಂಕ್:
ರಾಜ್ಯದ ಶೃತಿ ಎಂಬುವವರು ಯುಪಿಎಸ್ ಯಲ್ಲಿ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ತೊರ್ಕೆ ಗ್ರಾಮದ ವರದರಾಜ್ ಗಾಂವ್ಕರ್ ಯುಪಿಎಸ್ ಸಿಯ ಐಎಫ್ ಸಿಯಲ್ಲಿ ದೇಶಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ನಾನು ಈ ಮೊದಲು ಎರಡು ಬಾರಿ ಪರೀಕ್ಷೆ ಎದುರಿಸಿದ್ದೆ. ಮೂರನೇ ಪ್ರಯತ್ನದಲ್ಲಿ ಎರಡನೇ ರ್ಯಾಂಕ್ ಪಡೆದಿದ್ದೇನೆ. ಅರಣ್ಯ, ಪರಿಸರಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಈ ವೃತ್ತಿ ಆಯ್ಕೆ ಮಾಡಿಕೊಂಡಿರುವುದಾಗಿ ವರದರಾಜ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಬಳ್ಳಾರಿ ಮೂಲದ ಬೆಂಗಳೂರಿನಲ್ಲಿ ಶೈಕ್ಷಣಿಕ ವ್ಯಾಸಂಗ ಮುಗಿಸಿ ಮೈಸೂರಿನಲ್ಲಿ ನಲೆಸಿರುವ ಡಿ.ಕೆ.ಭರತ್ ಕುಮಾರ್ (88ನೇ ಸ್ಥಾನ), ಕೋಲಾರ ಜಿಲ್ಲೆಯ ಕೃಷಿ ಕುಟುಂಬ ಹಿನ್ನೆಲೆವುಳ್ಳ ಎಂ.ಜಿ.ವೆಂಕಟೇಶ್ (82ನೇ ಸ್ಥಾನ), ಸರ್ಕಾರಿ ನೌಕರರ ಪುತ್ರನಾದ ಚೇತನ್ ಕುಮಾರ್ (49ನೇ ರ್ಯಾಂಕ್), ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ಉತ್ತರ ಕನ್ನಡದ ಎಸ್. ನವೀನ್ ಕುಮಾರ್ (62ನೇ ಸ್ಥಾನ), ಇನ್ನು ಎಸ್. ತರುಣ್ (19ನೇ ರ್ಯಾಂಕ್), ಚಿನ್ನ ವಿಶ್ವನಾಥ್ ಬುಸರಡ್ಡಿ (14ನೇ ಸ್ಥಾನ), ತಶೀನ್ ಬಾನು ದಾವದಿ (8ನೇ ಸ್ಥಾನ) ಅವರು ಆಯೋಗ ಮಾಡಿರುವ ಶಿಫಾರಸು ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.
Recommended Video
ಕೋಲಾರ ಜಿಲ್ಲೆಯ ಕೃಷಿ ಕುಟುಂಬ ಹಿನ್ನೆಲೆವುಳ್ಳ ಎಂ.ಜಿ.ವೆಂಕಟೇಶ್ (82ನೇ ಸ್ಥಾನ), ಸರ್ಕಾರಿ ನೌಕರರ ಪುತ್ರನಾದ ಚೇತನ್ ಕುಮಾರ್ (49ನೇ ರ್ಯಾಂಕ್), ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ಉತ್ತರ ಕನ್ನಡದ ಎಸ್. ನವೀನ್ ಕುಮಾರ್ (62ನೇ ಸ್ಥಾನ), ಇನ್ನು ಎಸ್. ತರುಣ್ (19ನೇ ರ್ಯಾಂಕ್), ಚಿನ್ನ ವಿಶ್ವನಾಥ್ ಬುಸರಡ್ಡಿ (14ನೇ ಸ್ಥಾನ), ತಶೀನ್ ಬಾನು ದಾವದಿ (8ನೇ ಸ್ಥಾನ) ಅವರು ಆಯೋಗ ಮಾಡಿರುವ ಶಿಫಾರಸು ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications