'ರಾಘವೇಶ್ವರ ಶ್ರೀಗಳ ಅತ್ಯಾಚಾರ ಆರೋಪ ಸತ್ಯಕ್ಕೆ ದೂರ'
ವೇಣೂರು, ಅಕ್ಟೋಬರ್, 26 : ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಗಳ ವಿರುದ್ಧ ಮಾಡುತ್ತಿರುವ ಅತ್ಯಾಚಾರ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಉಪ್ಪಿನಂಗಡಿ ಹವ್ಯಕ ಮಂಡಲ ಅಧ್ಯಕ್ಷ ಬಾಲ್ಯಶಂಕರಭಟ್ ಮತ್ತು ಕಾರ್ಯದರ್ಶಿ ಅಶೋಕ್ ಕೆದ್ಲ ಅಕ್ಟೋಬರ್ 25ರಂದು ನಡೆದ ಕಾರ್ಯಕ್ರಮದಲ್ಲಿ ಕಿಡಿಕಾರಿದ್ದಾರೆ.
ಶ್ರೀಗಳ ಪರವಾಗಿದ್ದ ಶಿಷ್ಯ ಭಕ್ತಸಮೂಹದವರಿಗೆ ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಪ್ರಯತ್ನವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಶ್ರೀಗಳ ಪರವಾಗಿ ಸಿಐಡಿ ತನಿಖಾ ವೇಳೆ ಸಾಕ್ಷಿ ನುಡಿದ ವ್ಯಕ್ತಿಗಳು ಈಗ ಶ್ರೀಗಳ ವಿರುದ್ಧ ತಿರುಗಿ ಬಿದ್ದಿರುವುದು ವಿಚಿತ್ರವಾಗಿದೆ. ಮಠದ ಮುಖವನ್ನೇ ನೋಡದ ಮಂದಿ ತಾವು ಹವ್ಯಕ ಸಮಾಜದ ಮುಖಂಡರೆಂದು ಮಾಧ್ಯಮಗಳ ಮುಂದೆ ಹೇಳಿಕೊಳ್ಳುತ್ತಾರೆ ರಾಘವೇಶ್ವರ ಸ್ವಾಮೀಜಿಗಳ ಪರ ಮಾತನಾಡಿದರು.['169 ಬಾರಿ ರೇಪ್ ಆಗುವವರೆಗೆ ಯಾರಾದ್ರೂ ಸುಮ್ಮನಿರ್ತಾರಾ?']

'ಮಠದ ಆಡಳಿತ ವ್ಯವಸ್ಥೆಯ ಬಗ್ಗೆ, ಶ್ರೀಗಳ ಬಗ್ಗೆ ಅವಹೇಳನಕಾರೀ ಹೇಳಿಕೆ ನೀಡುತ್ತಿರುವುದು, ಫೇಸ್ ಬುಕ್, ವಾಟ್ಸ್ ಆಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ತೀರಾ ಕೀಳು ಅಭಿರುಚಿಯ ಬರಹಗಳನ್ನು ಪ್ರಕಟಿಸುತ್ತಿರುವುದು, ವಿಷಾದನೀಯ.
ಉಪ್ಪಿನಂಗಡಿ ಹವ್ಯಕ ಮಂಡಲದಲ್ಲಿ ಹನ್ನೆರಡು ಹವ್ಯಕ ವಲಯಗಳಿದ್ದು, ಸುಮಾರು 3150ರಷ್ಟು ಹವ್ಯಕ ಮನೆಗಳು ಇರುತ್ತದೆ. 134 ಗುರುಕಾರರು, 600ಮಂದಿ ಶ್ರೀ ಕಾರ್ಯಕರ್ತರೂ ಶ್ರೀ ಮಠಕ್ಕೆ ನಿಷ್ಠರಾಗಿದ್ದು, ಸಂಘಟನೆಯಲ್ಲಿದ್ದುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ' ಎಂದು ಹವ್ಯಕ ಕಾರ್ಯಕರ್ತರು ಹರಿಹಾಯ್ದಿದ್ದಾರೆ.[ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ರಾಮಚಂದ್ರಾಪುರ ಮಠದ 12 ಪ್ರಶ್ನೆಗಳು]
ಬೆರಳೆಣಿಕೆಯ ಮಂದಿ ತಾವು ಹವ್ಯಕ ಮುಖಂಡರೆಂಬ ಸುಳ್ಳು ಹೇಳಿಕೆ ನೀಡುತ್ತಾ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶ್ರೀಗಳಿಗೆ, ಶ್ರೀಮಠದ ವಿರುದ್ಧ ಹೇಳಿಕೆ ನೀಡುವ ಇಂತಹವರ ಕೃತ್ಯವನ್ನು ಉಪ್ಪಿನಂಗಡಿ ಹವ್ಯಕ ಮಂಡಲವು ತೀವ್ರವಾಗಿ ಖಂಡಿಸುತ್ತದೆ. ಶ್ರೀಗಳ ವಿರುದ್ಧ ಬರುವ ಯಾವುದೇ ಸುಳ್ಳು ಹೇಳಿಕೆಗಳನ್ನು ನಂಬಬಾರದೆಂದು ಹವ್ಯಕ ಸಂಘದ ಕಾರ್ಯದರ್ಶಿಗಳು ಸಲಹೆ ನೀಡಿದ್ದಾರೆ.












Click it and Unblock the Notifications