ಪ್ರಜಾಕೀಯಕ್ಕೆ ಡಿಜಿಟಲ್ ಟಚ್, ಸಲಹೆ ನೀಡಲು ಉಪ್ಪಿಗೆ ಕರೆ ಮಾಡಿ
ಬೆಂಗಳೂರು, ಅಕ್ಟೋಬರ್ 06: ರಾಜಕೀಯದ ಭವಿಷ್ಯವನ್ನು ಬದಲಾಯಿಸುತ್ತೇನೆಂದು ಹುಮ್ಮಸ್ಸಿನಿಂದ ಕೆಪಿಜೆಪಿ ಕಟ್ಟಿ ಚುನಾವಣೆಗೆ ಮುನ್ನವೇ ಪಕ್ಷದಿಂದ ಹೊರಬಂದಿದ್ದ ಆ ನಂತರ ಉತ್ತಮ ಪ್ರಜಾಕೀಯ ಪಾರ್ಟಿ ಕಟ್ಟಿದ್ದು ಎಲ್ಲರಿಗೂ ತಿಳಿದಿದ್ದೆ.
ಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷವು ಸ್ಪರ್ಧಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು. ಪಕ್ಷವು ಜನರನ್ನು ತಲುಪಲು ಸಾಮಾಜಿಕ ಮಾಧ್ಯಮ ಮೊರೆ ಹೋಗಿದೆ.
ತಮ್ಮ ಹೊಸ ಪಕ್ಷದ ಫೇಸ್‌ಬುಕ್ ಪೇಜ್, ಮೊಬೈಲ್ ಅಪ್ಲಿಕೇಶನ್, ವೆಬ್‌ಸೈಟ್‌ಗಳನ್ನು ಬಿಡುಗಡೆ ಮಾಡಿರುವ ಉಪೇಂದ್ರ ಅವರು, ಏನೇ ಸಲಹೆಗಳಿದ್ದರೂ ಕರೆ ಮಾಡಿ ಮಾಹಿತಿ ನೀಡಿ ಎಂದು ಮೊಬೈಲ್ ಸಂಖ್ಯೆಗಳನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.

ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಂಡು ಅದರ ಮೂಲಕವೇ ಪಕ್ಷಕ್ಕೆ ನೊಂದಣಿ ಆಗುವ ಅವಕಾಶವನ್ನು ಆಪ್‌ನಲ್ಲಿ ನೀಡಲಾಗಿದೆ. ಇದು ಮಾತ್ರವಲ್ಲದೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ದೂರು ನೀಡಲು ಸಹ ಆಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೂ ಪರೀಕ್ಷೆ ಮಾಡುವ ಹೊಸ ಆಲೋಚನೆಯನ್ನು ಮುಂದಿಟ್ಟಿದ್ದ ಉಪೇಂದ್ರ ಅವರು ಈಗಲೂ ಅದೇ ಆಲೋಚನೆಯಲ್ಲಿಯೇ ಇದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಉಪೇಂದ್ರ ಅವರು ತಯಾರಾಗುತ್ತಿದ್ದು, ಈಗಾಗಲೇ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.












Click it and Unblock the Notifications