ಕರ್ನಾಟಕದಲ್ಲಿ ಅನ್‌ಲಾಕ್‌ 2.0 ಮಾರ್ಗಸೂಚಿ: ಜುಲೈ 1ರಿಂದ ಏನಿರುತ್ತೆ? ಏನಿರಲ್ಲ?

ಬೆಂಗಳೂರು, ಜೂನ್ 30: ದೇಶದಲ್ಲಿ ಬುಧವಾರದಿಂದ ಅನ್‌ಲಾಕ್‌ 2.0 ಜಾರಿಯಾಗಲಿದೆ. ಈ ಕುರಿತು ನಿನ್ನೆ ರಾತ್ರಿ ಗೃಹ ಸಚಿವಾಲಯ ಮಾರ್ಗಸೂಚಿ ಸಹ ಪ್ರಕಟ ಮಾಡಿತ್ತು. ಜುಲೈ 31ರವರೆಗೂ ಭಾರತದಲ್ಲಿ ಅನ್‌ಲಾಕ್‌ 2.0 ಅನ್ವಯವಾಗಲಿದ್ದು, ಯಥಾಸ್ಥಿತಿಯನ್ನು ಮುಂದುವರಿಸುವುದಾಗಿ ತಿಳಿಸಿದೆ.

Recommended Video

      Siddaramaiah questioned to CM BSY |ಸರಕಾರದ ಮುಂದೆ ಸಿದ್ದರಾಮಯ್ಯ ಇಟ್ಟ ಹೊಸ ಡಿಮಾಂಡ್ | Oneindia Kannada

      ಇದೀಗ, ಕರ್ನಾಟಕ ಸರ್ಕಾರವೂ ಅನ್‌ಲಾಕ್‌ 2.0 ಮಾರ್ಗಸೂಚಿ ಪ್ರಕಟ ಮಾಡಿದ್ದು, ಕೇಂದ್ರದ ನಿಯಮಗಳನ್ನು ಯಥಾವತ್ ಅನುಸರಿಸುತ್ತಿದೆ.

      ಜುಲೈ 31ರವರೆಗೂ ರಾಜ್ಯದಲ್ಲೂ ಶಾಲೆ, ಕಾಲೇಜುಗಳು ತೆರೆಯುವಂತಿಲ್ಲ. ಜಿಮ್ ಆರಂಭಿಸಲು ಅನುಮತಿ ಸಿಕ್ಕಿಲ್ಲ. ಸಿನಿಮಾ ಚಿತ್ರಮಂದಿರಗಳಿಗೂ ಅವಕಾಶ ಮಾಡಿಕೊಟ್ಟಿಲ್ಲ. ಇನ್ನುಳಿದಂತೆ ರಾಜ್ಯದಲ್ಲಿ ಜುಲೈ 1ರಿಂದ ಏನಿರುತ್ತೆ? ಏನಿರಲ್ಲ ಎಂದು ಸಂಪೂರ್ಣ ವಿವರ ಇಲ್ಲಿದೆ. ಓದಿ...

      ಯಾವುದಕ್ಕೆ ಅನುಮತಿ ಇಲ್ಲ

      ಯಾವುದಕ್ಕೆ ಅನುಮತಿ ಇಲ್ಲ

      ಕರ್ನಾಟಕ ಸರ್ಕಾರದ ಅನ್‌ಲಾಕ್‌ 2.0 ಮಾರ್ಗಸೂಚಿಯ ಪ್ರಕಾರ, ಯಥಾಸ್ಥಿತಿ ಮುಂದುವರಿಯಲಿದೆ. ಶಾಲಾ-ಕಾಲೇಜುಗಳು ತೆರೆಯುವಂತಿಲ್ಲ. ಜಿಮ್ ಆರಂಭಿಸಲು ಅನುಮತಿ ಸಿಕ್ಕಿಲ್ಲ. ಚಿತ್ರಮಂದಿರಗಳೂ ಬಂದ್ ಮುಂದುವರಿಯಲಿದೆ. ಮೆಟ್ರೋ ಸಂಚಾರವೂ ಇಲ್ಲ. ಕೇಂದ್ರದ ಅನುಮತಿ ಅಂತಾರಾಷ್ಟ್ರೀಯ ವಿಮಾನ ಸಂಚಾರವೂ ನಿಷೇಧಿತ. ಧಾರ್ಮಿಕ ಕೂಟಗಳು, ರಾಜಕೀಯ ಸಭೆಗಳು ನಿಷೇದ. ಮನೋರಂಜನಾ ಪಾರ್ಕ್ ತೆರೆಯುವಂತಿಲ್ಲ.

      ನೈಟ್‌ ಕರ್ಫ್ಯೂ ಜಾರಿ

      ನೈಟ್‌ ಕರ್ಫ್ಯೂ ಜಾರಿ

      ಕೇಂದ್ರ ಸರ್ಕಾರ ರಾತ್ರಿ 10:00 ರಿಂದ ಬೆಳಿಗ್ಗೆ 5:00 ರವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ. ಆದರೆ, ಕರ್ನಾಟಕದಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 5:00 ರವರೆಗೆ ಕರ್ಫ್ಯೂ ಜಾರಿಯಾಗಿದೆ. ಅಗತ್ಯ ವಸ್ತುಗಳು ಪೂರೈಕೆ, ತುರ್ತು ಸೇವೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ, ಸರಕು ಸರಬರಾಜು ಮಾಡುವ ವಾಹನಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

      ಭಾನುವಾರ ಲಾಕ್‌ಡೌನ್

      ಭಾನುವಾರ ಲಾಕ್‌ಡೌನ್

      ಜುಲೈ 4ರಿಂದ ಪ್ರತಿ ಭಾನುವಾರ ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರಲಿದೆ. ಆಗಸ್ಟ್ 2ರವರೆಗೂ ನಾಲ್ಕು ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಇರಲಿದೆ. ಅಗತ್ಯ ವಸ್ತುಗಳು ಪೂರೈಕೆ ಹಾಗೂ ತುರ್ತು ಸೇವೆಗೆ ವಿನಾಯಿತಿ ಇದೆ. ಭಾನುವಾರವೂ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಭಾನುವಾರ ಮದುವೆ ನಿಗದಿಯಾಗಿದ್ದರೆ ಅದಕ್ಕೆ ಷರತ್ತಿನ ಅನ್ವಯ ಅನುಮತಿ ನೀಡಲಾಗುತ್ತೆ.

      ಸರ್ಕಾರಿ ನೌಕರರಿಗೆ ಶನಿವಾರವೂ ರಜೆ

      ಸರ್ಕಾರಿ ನೌಕರರಿಗೆ ಶನಿವಾರವೂ ರಜೆ

      ಅನ್‌ಲಾಕ್‌2 ಮಾರ್ಗಸೂಚಿ ಪ್ರಕಾರ, ಸರ್ಕಾರಿ ನೌಕಕರಿಗೆ ಆಗಸ್ಟ್ 2ನೇ ವಾರದವರೆಗೂ ಶನಿವಾರವೂ ರಜೆ ನೀಡಲಾಗಿದೆ. ಅಂದ್ರೆ, ವಾರಕ್ಕೆ ಐದು ದಿನಗಳು ಮಾತ್ರ ಕೆಲಸ ಮಾಡಲಿದ್ದಾರೆ. ಇದು ಜುಲೈ 10ರಿಂದ ಜಾರಿಗೆ ಬರಲಿದೆ. ಇದರಲ್ಲಿ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಸಂಪ್ರದಾಯಿಕ ರಜೆಯಾಗಿದೆ.

      ಕಂಟೈನ್‌ಮೆಂಟ್‌ ಜೋನ್‌ನಲ್ಲಿ ಯಥಾಸ್ಥಿತಿ

      ಕಂಟೈನ್‌ಮೆಂಟ್‌ ಜೋನ್‌ನಲ್ಲಿ ಯಥಾಸ್ಥಿತಿ

      ಕಂಟೈನ್‌ ಮೆಂಟ್‌ ಜೋನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೆಚ್ಚು ಸೋಂಕು ಹೊಂದಿರುವ ಈ ಪ್ರದೇಶಗಳಲ್ಲಿ ಈ ಹಿಂದಿನ ಲಾಕ್‌ಡೌನ್‌ ನಿಯಮಗಳು ಮುಂದುವರಿಯಲಿದೆ. ಬಿಬಿಎಂಪಿ ಹಾಗೂ ಜಿಲ್ಲಾಧಿಕಾರಿಗಳು ಈ ಕುರಿತು ನಿರ್ಣಯ ಮಾಡಿರುವ ನಿಯಮಗಳು ಪಾಲನೆ ಮಾಡಬೇಕಾಗಿದೆ. ಇನ್ನುಳಿದಂತೆ ಕಂಟೈನ್‌ ಮೆಂಟ್‌ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಚಲನವಲನ ಇರಲಿದೆ. ಅಗತ್ಯ ಸೇವೆ ಮತ್ತು ತುರ್ತುಸೇವೆಗೆ ಮಾತ್ರ ಅವಕಾಶ ಇರುತ್ತದೆ.

      ಹಿರಿಯರಿಗೆ, ಮಕ್ಕಳು ಮನೆಯಲ್ಲಿರಬೇಕು

      ಹಿರಿಯರಿಗೆ, ಮಕ್ಕಳು ಮನೆಯಲ್ಲಿರಬೇಕು

      ಇನ್ನುಳಿದಂತೆ 65 ವರ್ಷಕ್ಕಿಂತ ಮೇಲ್ಪಟ್ಟವರು, ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿ ಮಹಿಳೆ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿ ಇರಬೇಕು. ವೈದ್ಯಕೀಯ ಸೇವೆಗಳಿಗೆ ಮಾತ್ರ ಹೊರಗೆ ಬರುವಂತೆ ಸರ್ಕಾರ ಆದೇಶಿಸಿದೆ. ಜೊತೆಗೆ ಆರೋಗ್ಯ ಸೇತು ಆಪ್ ಬಳಕೆ ಮಾಡಲು ಸಲಹೆ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+