ಈರುಳ್ಳಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸಚಿವರು!
ಹುಬ್ಬಳ್ಳಿ: ಈರುಳ್ಳಿ ಇಲ್ಲದೆ ಬಹುತೇಕ ಅಡುಗೆಗಳು ಸಂಪೂರ್ಣ ಆಗುವುದೇ ಇಲ್ಲ. ಅದರಲ್ಲೂ ಭಾರತೀಯರ ಬಹುತೇಕ ಅಡುಗೆಗಳಿಗೆ ಈರುಳ್ಳಿ ಬೆಕೇ ಬೇಕು. ಹೀಗಿದ್ದಾಗ ಈರುಳ್ಳಿ ಬೆಲೆಯ ಏರಿಕೆ ಮಧ್ಯಮ & ಬಡ ವರ್ಗದ ಜನರನ್ನು ಪ್ರತಿನಿತ್ಯವು ಕಣ್ಣೀರು ಹಾಕುವಂತೆ ಮಾಡಿತ್ತು. ಹೀಗಿದ್ದಾಗ ಭಾರತದ ಮಾರುಕಟ್ಟೆಯಲ್ಲಿ ಕಣ್ಣೀರು ತರಿಸುತ್ತಿರುವ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಗ್ರಾಹಕರ ಕೈಗೆಟುಕುವಂತೆ ಕೇವಲ 35 ರೂ. ಕೆಜಿ ದರದಲ್ಲಿ ವಿತರಣೆ ಆರಂಭಿಸಿದೆ!
ಹೌದು, ಈರುಳ್ಳಿ ಇಲ್ಲದೆ ಬಹುತೇಕ ಅಡುಗೆಗಳು ಆಗುವುದೇ ಇಲ್ಲ ಬಿಡಿ. ಹೀಗಿದ್ದಾಗ ಇದೇ ಈರುಳ್ಳಿ ಬಗ್ಗೆ ಜನ ಕೂಡ ಸಾಕಷ್ಟು ಭರವಸೆ ಇಟ್ಟುಕೊಂಡಿರುತ್ತಾರೆ, ಬೆಲೆ ಹೆಚ್ಚಳ ಆಗಲ್ಲ ಬಿಡು ಅಂತಾ ಮಾರುಕಟ್ಟೆಗೆ ಹೋಗುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕೇಳಿದ ನಂತರ ನಿಜವಾದ ಆಘಾತ ಎದುರಾಗುತ್ತದೆ. ಯಾಕಂದ್ರೆ ಈರುಳ್ಳಿ ಆ ಮಟ್ಟಿಗೆ ಏರಿಕೆ ಕಂಡಿರುತ್ತದೆ. ಈಗಲು ಕೂಡ ಇಂತಹದ್ದೇ ಪರಿಸ್ಥಿತಿ ಎದುರಾಗಿದೆ. ಹೀಗೆ ಹೆಚ್ಚಳ ಕಾಣುತ್ತಿರುವ ಈರುಳ್ಳಿಯ ಬೆಲೆ ನಿಯಂತ್ರಣಕ್ಕೆ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಹಾರ & ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಅವರು 35 ರೂಪಾಯಿ ಪ್ರತಿ ಕೆಜಿ ಬೆಲೆಯಲ್ಲಿ ಮಾರಾಟ ಮಾಡುವ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ ತೋರಿದ್ದಾರೆ.

35 ರೂಪಾಯಿ ದರದಲ್ಲಿ ವಿತರಣೆ
ಇದೇ ವೇಳೆ ಮಾತನಾಡಿದ ಸಚಿವ ಪ್ರಲ್ಹಾದ ಜೋಶಿ ಅವರು, ದೇಶದಲ್ಲಿ ಆಹಾರ ಹಣದುಬ್ಬರ ನಿಯಂತ್ರಣದಲ್ಲಿ ಇಡಲು ಕೇಂದ್ರ ಸರ್ಕಾರ ಪ್ರಥಮ ಆದ್ಯತೆ ನೀಡುತ್ತದೆ. ಹೀಗಾಗಿ ಇದೀಗ ತೀವ್ರ ಏರಿಕೆ ಕಂಡ ಈರುಳ್ಳಿ ದರ ಇಳಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಹಾಗೇ ದೇಶಾದ್ಯಂತ 35 ರೂಪಾಯಿ ದರದಲ್ಲಿ ವಿತರಣೆಗೆ ಕ್ರಮ ಕೈಗೊಂಡಿದ್ದೆವೆ ಎಂಬ ಮಾಹಿತಿ ತಿಳಿಸಿದರು. ಹಾಗೇ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮುಂದಿನ ವಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯಾವ ಯಾವ ನಗರದಲ್ಲಿ ಮಾರಾಟ?
ಈರುಳ್ಳಿ ಬೆಲೆ ಏರಿಕೆ ನಂತರ ಜನರು ಕೂಡ ಕಂಗಾಲಾಗಿದ್ದು, ಮತ್ತಷ್ಟು ಆತಂಕ ಎದುರಾಗಿತ್ತು. ದೆಹಲಿಯ ಎನ್‌ಸಿಆರ್ & ಮುಂಬೈನಲ್ಲಿ ಈರುಳ್ಳಿ ಚಿಲ್ಲರೆ ವಿತರಣೆ ಆರಂಭವಾಗಿದೆ. ಮುಂದಿನ ವಾರದಲ್ಲಿ ಬೆಂಗಳೂರು, ಕೋಲ್ಕತ್ತಾ, ಗುವಾಹಟಿ, ಹೈದ್ರಾಬಾದ್, ಚೆನ್ನೈ, ಅಹಮದಾಬಾದ್ ಹಾಗೂ ರಾಯಪುರ & ಭುವನೇಶ್ವರದಲ್ಲಿ ಕಡಿಮೆ ಬೆಲೆಯಲ್ಲಿ ಈರುಳ್ಳಿ ವಿತರಣೆ ಶುರುವಾಗಲಿದೆ.
ಸೆಪ್ಟೆಂಬರ್ 3ನೇ ವಾರದಲ್ಲಿ ದೇಶಾದ್ಯಂತ ವಿತರಣೆ ಅಗಲಿದೆ ಎಂದು ಕೇಂದ್ರ ಆಹಾರ & ಗ್ರಾಹಕ ವ್ಯವಹಾರ ಸಚಿವರಾದ ಪ್ರಲ್ಹಾದ ಜೋಶಿ ಅವ್ರು ಮಾಹಿತಿ ನೀಡಿದ್ರು. ಹಿಂಗಾರು ಹಂಗಾಮಿನಲ್ಲಿ ಬೆಳೆದ 4.7 ಲಕ್ಷ ಟನ್ ಈರುಳ್ಳಿ ಸದ್ಯ ನಮ್ಮಲ್ಲಿ ಸಂಗ್ರಹವಿದ್ದು, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್ ಸಿಸಿಎಫ್) ಮತ್ತು ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ (ಎನ್ ಎಎಫ್ ಇಡಿ) ಮಳಿಗೆಗಳು ಮತ್ತು ಸಂಚಾರಿ ವಾಹನಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮತ್ತು ಕೇಂದ್ರೀಯ ಭಂಡಾರ ಮತ್ತು ಸಫಲ್ ಮಳಿಗೆಗಳ ಮೂಲಕ ಚಿಲ್ಲರೆ ಮಾರಾಟಕ್ಕೆ ಈಗ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.












Click it and Unblock the Notifications