ಭಾರತವನ್ನು ವಿಶ್ವಗುರು ಮಾಡುವುದೇ ಬಿಜೆಪಿ ಪಕ್ಷದ ಗುರಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಹುಬ್ಬಳ್ಳಿ: ರಾಷ್ಟ್ರೀಯ ಹಿತಚಿಂತನೆ ಹೊಂದಿರುವ ಬಿಜೆಪಿ ಇಂದು ಇಡೀ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು. ಪ್ರಲ್ಹಾದ ಜೋಶಿ ಅವರು ಇಂದು ಕುಂದಗೋಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜನೆ ಮಾಡಿದ್ದ, ಬಿಜೆಪಿ ಸದಸ್ಯತ್ವ ಅಭಿಯಾನ ಪೂರ್ವಭಾವಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಕೇಂದ್ರ ಸಚಿವರು, ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಅಂದಹಾಗೆ ಬಿಜೆಪಿ ಎಂದೆಂದಿಗೂ ಭಾರತದ ಪ್ರಗತಿ ಜೊತೆ ಜೊತೆಗೆ ದೇಶವಾಸಿಗಳ ಏಳಿಗೆಯನ್ನು ಕೂಡ ಗಮನದಲ್ಲಿ ಇಟ್ಟುಕೊಂಡು ಆಡಳಿತಾತ್ಮಕವಾಗಿ ಇದೀಗ ಹೆಜ್ಜೆಯ ಹಾಕುತ್ತಿದೆ ಎಂದರು. ರಾಷ್ಟ್ರೀಯ ಹಿತ ಚಿಂತನೆಯ ಜೊತೆಗೆ ಭಾರತವನ್ನು ಮುನ್ನಡೆಸುತ್ತಿದೆ. ಇದರ ಫಲವಾಗಿ ಬಿಜೆಪಿ ಇಂದು ವಿಶ್ವದಲ್ಲೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿದೆ ಎಂದು ಇದೇ ವೇಳೆ, ತಿಳಿಸಿದರು. ಇದರ ಜೊತೆಗೆ ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯುವ ಬಗ್ಗೆ ಕೂಡ ಮಾತನಾಡಿದರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು.

ರಾಷ್ಟ್ರೀಯತೆ & ಏಕತೆ ಬೆಂಬಲಿಸಲು ಕರೆ
ಅಷ್ಟಕ್ಕೂ ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಏರಿಸುವ ಧ್ಯೇಯದೊಂದಿಗೆ ಬಿಜೆಪಿ ದಾಪುಗಾಲು ಹಾಕುತ್ತಿದೆ. ಈ ಮಹತ್ವದ ಕಾರ್ಯದಲ್ಲಿ ಯುವ ಸಮುದಾಯ & ಸರ್ವರೂ ಭಾಗಿ ಆಗಬೇಕಿದೆ. ಈ ಹಿನ್ನೆಲೆ ಬಿಜೆಪಿ ಸದಸ್ಯತ್ವ ಅಭಿಯಾನವನ್ನ ಆರಂಭಿಸಿದೆ ಅಂತ ಕೇಂದ್ರ ಸಚಿವರಾದ ಜೋಶಿ ತಿಳಿಸಿದರು. ಅಲ್ಲದೆ ಬಿಜೆಪಿ ಸದಸ್ಯತ್ವ ಅಭಿಯಾನ ಇದೇ ಸೆಪ್ಟೆಂಬರ್ 2ಕ್ಕೆ ಆರಂಭ ಆಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದು ರಾಷ್ಟ್ರೀಯತೆ, ಏಕತೆಯನ್ನ ಬೆಂಬಲಿಸಿ ಎಂದು ಇದೇ ವೇಳೆ ಕೇಂದ್ರ ಸಚಿವರು ಕರೆ ನೀಡಿದರು.
ಸಭೆಯಲ್ಲಿ ಮಹತ್ವದ ಚರ್ಚೆ
ಕುಂದಗೋಳ ಕ್ಷೇತ್ರದಲ್ಲಿ ನಡೆದ ಪೂರ್ವಭಾವಿ ಕಾರ್ಯಾಗಾರದಲ್ಲಿ ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ಪಕ್ಷದ ಹಿರಿಯರು ಹಾಗೂ ಪ್ರಮುಖರು ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಹಾಗೂ ಸ್ಥಳೀಯ ಮಟ್ಟದಲ್ಲಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಲು ಬೇಕಾದ ಸಿದ್ಧತೆಗಳ ಕುರಿತು ಈ ಸಮಯದಲ್ಲಿ ಚರ್ಚೆ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರು ಈ ಮಹತ್ವದ ಸದಸ್ಯ ಕಾರ್ಯಾಗಾರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಈ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆಯು ನಡೆಯಿತು. ಈಗಾಗಲೇ ಬಿಜೆಪಿ ಇಡೀ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಕೀರ್ತಿ ಪಡೆದಿದೆ.












Click it and Unblock the Notifications