ಆಕ್ಸಿಜನ್ ಪೂರೈಕೆ; ಕರ್ನಾಟಕಕ್ಕೆ ಕೊಡುಗೆ ಕೊಟ್ಟ ಕೇಂದ್ರ
ನವದೆಹಲಿ, ಮೇ 10; ಕರ್ನಾಟಕದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಅಗತ್ಯವಿದೆ. ಆದರೆ ಆಕ್ಸಿಜನ್ ಸಾಗಾಟ ಮಾಡುವುದು ರಾಜ್ಯದ ಪಾಲಿಗೆ ಸವಾಲಾಗಿದೆ. ಆಮ್ಲಜನಕ ತುರ್ತು ಸಾಗಾಟ ವ್ಯವಸ್ಥೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮತ್ತಷ್ಟು ಸಹಾಯವನ್ನು ಮಾಡಿದೆ.
ಕರ್ನಾಟಕದಲ್ಲಿ ಆಕ್ಸಿಜನ್ ಪೂರೈಕೆ ಜವಾಬ್ದಾರಿ ಹೊತ್ತಿರುವ ಸಚಿವ ಜಗದೀಶ್ ಶೆಟ್ಟರ್ ಸೋಮವಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಆಕ್ಸಿಜನ್ ಸಾಗಾಟಕ್ಕಾಗಿಯೇ ಕೇಂದ್ರ ಸರ್ಕಾರ ರಾಜ್ಯಕ್ಕೆ 4 ಟ್ಯಾಂಕರ್‌ಗಳನ್ನು ನೀಡಿದೆ.
ಫೇಸ್ ಬುಕ್‌ನಲ್ಲಿ ಜಗದೀಶ್ ಶೆಟ್ಟರ್, "ಕೇಂದ್ರ ಸರ್ಕಾರವು ಐ. ಒ. ಸಿ. ಎಲ್ ಕಂಪನಿಯ 20 ಎಮ್. ಟಿ. ಸಾಮರ್ಥ್ಯದ 4 ಟ್ಯಾಂಕರ್ ಗಳನ್ನು ನೀಡಿದ್ದು, ಇವು ಜೆ. ಎಸ್. ಡಬ್ಲ್ಯೂ ಘಟಕದಿಂದ ಪ್ರತಿನಿತ್ಯ ಅನೀಲಿಕೃತ ಆಮ್ಲಜನಕವನ್ನು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲು ನೆರವಾಗಲಿವೆ" ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಕರ್ನಾಟಕಕ್ಕೆ 4, ಪಂಜಾಬ್‌ಗೆ 2, ಆಂಧ್ರ ಪ್ರದೇಶಕ್ಕೆ 2, ಉತ್ತರಾಖಂಡ್‌ಗೆ 2 ಮತ್ತು ಹರ್ಯಾಣ ರಾಜ್ಯಕ್ಕೆ 2 ಟ್ಯಾಂಕರ್‌ಗಳನ್ನು ನೀಡಿದೆ. ಮೇ 15ರಂದು ಈ ಟ್ಯಾಂಕರ್‌ಗಳು ನಿಗದಿಪಡಿಸಿದ ರಾಜ್ಯಕ್ಕೆ ಆಗಮಿಸಲಿವೆ.
ಈ ಟ್ಯಾಂಕರ್‌ಗಳ ಮೂಲಕ ಆಸ್ಪತ್ರೆಗಳಿಗೆ ಸಕಾಲಕ್ಕೆ ಆಕ್ಸಿಜನ್ ಪೂರೈಸಲು ಅನುಕೂಲವಾಗಲಿದೆ. ಕೋವಿಡ್ ಪರಿಸ್ಥಿತಿ ನಿಭಾಯಿಸಲು ಸೂಕ್ತ ಮಾರ್ಗದರ್ಶನ ಹಾಗೂ ಸಹಕಾರ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನ್ನಡಿಗರ ಪರವಾಗಿ ಜಗದೀಶ್ ಶೆಟ್ಟರ್ ಧನ್ಯವಾದಗಳನ್ನು ತಿಳಿಸಿದ್ದಾರೆ.
ವಿವಿಧ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ. ಸುಮಾರು 120 ಟನ್ ಆಕ್ಸಿಜನ್ ಹೊತ್ತ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು ಜೆಮ್‌ಶೆಡ್‌ಪುರ್‌ನಿಂದ ಸೋಮವಾರ ಹೊರಟಿದ್ದು, ಮಂಗಳವಾರ ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಬರಲಿದೆ. ರಾಜ್ಯಕ್ಕೆ ಬರುತ್ತಿರುವ ಮೊದಲ ರೈಲು ಇದಾಗಿದೆ.












Click it and Unblock the Notifications