ಉಡುಪಿ ಮಠದಿಂದ ದುಶ್ಚಟ ನಿವಾರಣಾ ಹುಂಡಿ ಸ್ಥಾಪನೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಏಪ್ರಿಲ್ 21 : ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಉಡುಪಿ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿ ಮುಂದೆ ಶೀಘ್ರವೇ 'ದುಶ್ಚಟ ನಿವಾರಣಾ ಸಂಕಲ್ಪ ಹುಂಡಿ' ಸ್ಥಾಪನೆಯಾಗಲಿದೆ. ದುಶ್ಚಟ ನಿವಾರಣೆ ಆಂದೋಲನ ರೂಪ ಪಡೆಯಬೇಕು ಎಂದ ಉದ್ದೇಶದಿಂದ ಹುಂಡಿ ಸ್ಥಾಪನೆ ಮಾಡಲಾಗುತ್ತಿದೆ.

'2000-2002ರಲ್ಲಿ ಜಾರಿಗೆ ತಂದಿದ್ದ ದುಶ್ಚಟ ನಿವಾರಣಾ ಸಂಕಲ್ಪ ಹುಂಡಿ ಯೋಜನೆಯನ್ನು ಮುಂದುವರೆಸುವುದಾಗಿ' 2016 ಜನವರಿ 18ರಂದು ಪರ್ಯಾಯ ಪೀಠಾರೋಹಣ ಮಾಡಿದ ಬಳಿಕ ನಡೆದ ಪರ್ಯಾಯ ದರ್ಬಾರ್‌ನಲ್ಲಿ ಪೇಜಾವರ ಶ್ರೀವಿಶ್ವೇಶ ತೀರ್ಥರು ಘೋಷಿಸಿದ್ದರು. [ಉಡುಪಿ ಪರ್ಯಾಯದ ಸುಂದರ ಛಾಯಾಚಿತ್ರ]

pejawar mutt

4ನೇ ಪರ್ಯಾಯದಲ್ಲಿ 1386 ಸಂಕಲ್ಪ ಪತ್ರವನ್ನು ಭಕ್ತ ಜನತೆಗೆ ಹುಂಡಿಗೆ ಹಾಕಿ, ದುಶ್ಚಟ ತೊರೆದು ನವ ಬದುಕು ಕಟ್ಟಿಕೊಂಡಿದ್ದರು. ಪರೋಕ್ಷವಾಗಿ ಪೇಜಾವರ ಶ್ರೀಪಾದರು ಸಂತಸ್ತ್ರ ಕುಟುಂಬದ ಮಹಿಳೆಯರು , ಮಕ್ಕಳ ಕಣ್ಣೀರು ಒರೆಸಿದ್ದರು. [ಉಡುಪಿ ಮಠದಿಂದ ವೃಕ್ಷರಕ್ಷ-ವಿಶ್ವರಕ್ಷ ಆಂದೋಲನ]

ಮಾರ್ಗದರ್ಶನ ಅಗತ್ಯ : ಈಗ ತೊಟ್ಟೆ ಸಾರಾಯಿ, ಲಾಟರಿ ಹಾವಳಿಯಿಲ್ಲದಿದ್ದರೂ ಮದ್ಯ, ಗುಟ್ಕಾ, ಬೀಡಿ/ಸಿಗರೇಟು ಸಹಿತ ಅನೇಕ ದುಶ್ಚಟಗಳ ಸುಳಿಯಲ್ಲಿ ಜನತೆ ಸಿಲುಕಿದ್ದಾರೆ. ಹೀಗಾಗಿ ಹಿಂದಿಗಿಂತಲೂ ಹೆಚ್ಚು ಜನರನ್ನು ದುಶ್ಚಟದಿಂದ ಮುಕ್ತರನ್ನಾಗಿ ಮಾಡಿಹೊಸ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಬೇಕಾದ ಅಗತ್ಯವಿದೆ ಎಂಬುದು ಮಠದ ಅಭಿಪ್ರಾಯ. [ಉಡುಪಿ: ಕೆರೆ, ನದಿ ರಕ್ಷಣೆ ಸುಂದರ ಬದುಕಿನ ಮೊದಲ ಹೆಜ್ಜೆ]

ಪ್ರೇರಣೆ ಏನು? : 4 ನೇ ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿದ್ದಾಗ ಮಹಿಳೆಯರೊಬ್ಬರು ನನ್ನ ಗಂಡನ ಕುಡಿತದ ದೆಸೆಯಿಂದಾಗಿ ಸಂಸಾರ ಬೀದಿಗೆ ಬೀಳುವಂತಾಗಿದೆ ಎಂದು ಕಣ್ಣೀರು ಹಾಕಿ, ಕಾಲಿಗೆ ಬಿದ್ದಿದ್ದು ಶ್ರೀಗಳ ಮನ ಕಲುಕಿದೆ. [ಉಡುಪಿಯಲ್ಲಿ ಘರ್ಜನೆ ನಿಲ್ಲಿಸಿದ ಹೆಲಿ ಟೂರಿಸಂ?]

ಕೃಷ್ಣನಿಗಿಂತ ಕಲಿಯುಗದಲ್ಲಿ ನಾಗ ದೇವರ ಶಕ್ತಿ ಜಾಸ್ತಿ. ಆದ್ದರಿಂದ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿ ಮುಂದೆ ದುಶ್ಚಟ ನಿವಾರಣಾ ಹುಂಡಿ ಇಟ್ಟರೆ ಭಕ್ತ ಜನತೆ ಹೆದರಿಕೆಯಿಂದಲೂ ದುಶ್ಚಟ ನಿವಾರಣೆಗೆ ಸಂಕಲ್ಪ ಕೈಗೊಂಡು ಪಾಲಿಸಬಹುದು ಎಂಬುದು ಮಠದವರ ಅಭಿಪ್ರಾಯ. [ಉಡುಪಿ ಪರ್ಯಾಯದ ಚಿತ್ರಗಳು]

'ಸಮಾಜದ ಜನತೆ ಅದರಲ್ಲೂ ಯುವಜನರು ದುಶ್ಚಟಕ್ಕೆ ಬಲಿಯಾಗಿ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಶ್ರೀಕೃಷ್ಣ / ಸುಬ್ರಹ್ಮಣ್ಯ ದೇವರ ಸನ್ನಿಧಾನದಲ್ಲಿ ಕೈಗೊಳ್ಳುವ ದುಶ್ಚಟ ತ್ಯಜಿಸುವ ನಿರ್ಧಾರ ಬದುಕಿನಲ್ಲಿ ಪರಿವರ್ತನೆ ತರಬೇಕು. ಆದ್ದರಿಂದ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ' ಎಂದು ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Udupi Sri Krishna Mutt decided to establish a Duschata Nivarana Hundi to encourage people to avoid bad habits.
Please Wait while comments are loading...