ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಣಿಜ್ಯ ವಿಭಾಗದ ಸಾಧಕಿಗೆ ಐಎಎಸ್ ಅಧಿಕಾರಿ ಆಗುವ ಆಸೆ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 26 : ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸಿರುವ ದಕ್ಷಾ ಜೈನ್ ಅವರು ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದಾರೆ. ಯಾವುದೇ ಕೋಚಿಂಗ್ ತೆಗೆದುಕೊಳ್ಳದೇ ಜೈನ್ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಮೂಡಬಿದಿರೆಯ ಆಳ್ವಾಸ್ ಪಿಯುಸಿ ಕಾಲೇಜಿನ ದಕ್ಷಾ ಜೈನ್ ಅವರು 593 ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸಿದ್ದಾರೆ. ದಕ್ಷಾ ಮೂಡಬಿದಿರೆಯ ಪ್ರವೀಣ್ ಚಂದ್ರ ಮತ್ತು ಮಲ್ಲಿಕಾ ದಂಪತಿಯ ಪುತ್ರಿ. [2ನೇ ಪಿಯುಸಿ ಫೇಲಾದವರಿಗೆ ಭರವಸೆ ಬೆಳಕು]

daksha jain

ದಕ್ಷಾ ಜೈನ್ ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 100, ಅಕೌಂಟೆನ್ಸಿಯಲ್ಲಿ 100, ಸ್ಟಾಟಿಟಿಕ್ಸ್‌ನಲ್ಲಿ 100, ಬೇಸಿಕ್ ಮ್ಯಾಥಮ್ಯಾಟಿಕ್ಸ್‌ನಲ್ಲಿ 100, ಇಂಗ್ಲೀಷ್‌ನಲ್ಲಿ 94 ಮತ್ತು ಸಂಸ್ಕೃತದಲ್ಲಿ 99 ಅಂಕಗಳನ್ನು ಪಡೆದಿದ್ದಾರೆ. [ಕಲಾ ಪ್ರವೀಣೆಗೆ ಐಎಎಸ್ ಕನಸು]

ಫಲಿತಾಂಶದ ಬಗ್ಗೆ ಸಂತಸ ಹಂಚಿಕೊಂಡಿರುವ ದಕ್ಷಾ ಜೈನ್ ಅವರು, 'ನನಗೆ ಐಎಎಸ್ ಅಧಿಕಾರಿಯಾಗುವ ಕನಸಿದೆ. ಕಾಲೇಜಿನಲ್ಲಿ ಮಾಡಿದ ಪಾಠಗಳನ್ನು ಮಾತ್ರ ಓದುತ್ತಿದ್ದೆ. ಎಲ್ಲಿಯೂ ಕೋಚಿಂಗ್ ಪಡೆದುಕೊಂಡಿಲ್ಲ' ಎಂದು ಹೇಳಿದ್ದಾರೆ. [ಫಲಿತಾಂಶ: ಯಾವ ಜಿಲ್ಲೆ ಯಾವ ಸ್ಥಾನದಲ್ಲಿದೆ?]

ವೈಷ್ಣವಿಗೆ ವೈದ್ಯೆಯಾಗುವ ಕನಸು : ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಪಿಸಿಎಂಬಿ ವಿದ್ಯಾರ್ಥಿನಿ ವೈಷ್ಣವಿ ಬಲ್ಲಾಳ್ ಅವರಿಗೆ ವೈದ್ಯೆಯಾಗುವ ಕನಸಿದೆ. ಇಂಗ್ಲೀಷ್ ವಿಷಯದಲ್ಲಿ ವೈಷ್ಣವಿ ಅವರಿಗೆ 90 ಅಂಕ ಬಂದಿದೆ. ಆದರೆ, ಅವರು 96 ಅಂಕಗಳ ನಿರೀಕ್ಷೆಯಲ್ಲಿದ್ದರು. ಆದ್ದರಿಂದ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

English summary
Daksha Jain has bagged the 2nd rank in state in second PUC commerce. Daksha Jain student of Alvas pu college Moodbidri, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X