Sowjanya Murder Case: ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಯಾಗುತ್ತಾ? : ಗೃಹ ಸಚಿವರು ಹೇಳಿದ್ದೇನು?

ಬೆಂಗಳೂರು, ಆಗಸ್ಟ್‌ 01: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮರು ತನಿಖೆಯಾಗಲಿ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು, ಸೌಜನ್ಯ ಕೊಲೆ ಕೇಸ್ ಮತ್ತೆ ತನಿಖೆ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಸದ್ಯಕ್ಕೆ ಅಂತಹ ಯೋಚನೆ ನಮ್ಮ ಮುಂದೆ ಇಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್‌ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನನಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಹೇಳಿದ ಅವರು, ಕರ್ನಾಟಕದಲ್ಲಿ ಅತಿ ಹೆಚ್ಚು ಹೆಣ್ಣು ಮಕ್ಕಳ ಕಳವು ಪ್ರಕರಣದ ಕುರಿತು ಮಾತನಾಡಿ, ನಮಗೆ ಈ ವರದಿ ಬಂದಿದೆ. ಬಹಳ ಗಂಭೀರವಾಗಿ ಆಗಿ ಇದನ್ನ ನಾವು ತೆಗೆದುಕೊಂಡಿದ್ದೇವೆ.

Udupi College Case No Question Of Handing It Over To SIT Said Home Minister Dr G Parameshwar

ಮಕ್ಕಳ ಕಳವು ಪ್ರಕರಣದಲ್ಲಿ ದೂರ ಬಂದ ಕೂಡಲೇ ನಾವು ಅಲರ್ಟ್ ಆಗಬೇಕು. ಮಕ್ಕಳನ್ನ ಹುಡುಕಿರೋ‌ ಸಾವಿರಾರು ಪ್ರಕರಣಗಳು ಇವೆ, ಎಲ್ಲಾ ಜಿಲ್ಲಾ‌ ಎಸ್ಪಿಗಳಿಗೆ ಸೂಚನೆ ನೀಡಿದ್ದೇವೆ. ನಾನು ಜಿಲ್ಲಾ‌ ರಿವ್ಯೂ ಮೀಟಿಂಗ್ ಮಾಡಿದಾಗಲೂ ಎಲ್ಲಾ ಅಧಿಕಾರಿಗಳಿಗೆ ಈ‌ ಬಗ್ಗೆ ಕ್ರಮವಹಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಇಲಾಖೆಯಲ್ಲಿ ವರ್ಗಾವಣೆ ನಡೆಯುತ್ತಿದೆ. ನಮ್ಮ ಇಲಾಖೆಯಲ್ಲಿ ನಾವು ತುಂಬಾ ಎಚ್ಚರಿಕೆಯಿಂದ ನೋಡಿಕೊಂಡು ವರ್ಗಾವಣೆ ಮಾಡ್ತಿದ್ದೇವೆ, ಕೆಲವರು KATಗೆ ಹೋಗಬಹುದು. ಅದು ಆಗದಂತೆ ಎಚ್ಚರವಹಿಸಿ ವರ್ಗಾವಣೆ ಮಾಡ್ತಿದ್ದೇವೆ, ಪೊಲೀಸ್ ಇಲಾಖೆಯಲ್ಲಿ ಎಲ್ಲಾ ಇಲಾಖೆಯಂತೆ ವರ್ಗಾವಣೆ ಮಾಡಲು ಆಗಲ್ಲ. ಕೆಲವು ಪ್ರಕರಣ ತನಿಖೆ ಆಗುತ್ತಿವೆ, ಈಗ ವರ್ಗಾವಣೆ ಆದರೆ ತನಿಖೆಗೆ ಸಮಸ್ಯೆ ಆಗಬಹುದು. ಇದೆಲ್ಲವನ್ನೂ ನೋಡಿಯೇ ವರ್ಗಾವಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಸಿಎಂ ಜೊತೆ ರಹಸ್ಯ ಸಭೆ ಮಾಡಿ ವರ್ಗಾವಣೆ ಮಾಡ್ತಿದ್ದಾರೆ ಎಂಬ ಬಿಜೆಪಿ ಆರೋಪದ ಕುರಿತು ಮಾತನಾಡಿ, ಹೌದು, ನಾನು ಸಿಎಂ ರಹಸ್ಯವಾಗಿಯೇ ಮಾತಾಡಿಕೊಂಡು ವರ್ಗಾವಣೆ ಮಾಡ್ತಿದ್ದೇವೆ
ರಹಸ್ಯವಾಗಿ ಮಾತಾಡಿ ಮಾಡಿದ್ರೆ ದಂಧೆ ಮಾಡ್ತೀವಿ ಅಂತಾನಾ? ಎಂದು ಪ್ರಶ್ನಿಸಿದ ಅವರು, ನಾನು ಮತ್ತು ಸಿಎಂ ರಹಸ್ಯವಾಗಿ ಕುಳಿತೇ ಚರ್ಚೆ ಮಾಡಿ ವರ್ಗಾವಣೆ ‌ಮಾಡಿದ್ದೇವೆ, ರಹಸ್ಯವಾಗಿ ಮಾಡದೇ ವಿಧಾನಸೌಧದಲ್ಲಿ,ಬೀದಿಯಲ್ಲಿ ಕುಳಿತು ವರ್ಗಾವಣೆ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲ. ಮುಂದೆಯೂ ಹೀಗೆ ರಹಸ್ಯವಾಗಿ ಮಾಡುತ್ತೇವೆ ಎಂದು ಹೇಳಿದರು.

ಮಂಗಳೂರು ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ಕುರಿತು ಮಾತನಾಡಿ, ನೈತಿಕ ಪೊಲೀಸ್ ಗಿರಿ ನಿಯಂತ್ರಣಕ್ಕೆ ಕಠಿಣ ಕ್ರಮ‌ ತೆಗೆದುಕೊಂಡಿದ್ದೇವೆ. ನೈತಿಕ ಪೊಲೀಸ್ ನಿಯಂತ್ರಣ ಮಾಡಲು ಪ್ರತ್ಯೇಕ ವಿಂಗ್ ಸ್ಥಾಪನೆ ಮಾಡಿದ್ದೇವೆ, ಆ ವಿಂಗ್ ಎಫೆಕ್ಟ್ ಆಗಿ ಕೆಲಸ ಮಾಡುತ್ತಿದೆ. ಅದು ಮಾಡಿದ ಕೂಡಲೇ ತಕ್ಷಣ ನಿಲ್ಲುತ್ತದೆ ಅಂತ ಅಲ್ಲ, ನಾವು ಕಠಿಣವಾಗಿ ಇಂತಹ ಪ್ರಕರಣ ಆಗಬಾರದು ಅಂತ ಸೂಚನೆ ನೀಡಿದ್ದೇವೆ. ಯಾವುದೇ ಧರ್ಮದವರು ಇದ್ದರು ಅವರ ಕ್ರಮ ಆಗಬೇಕು ಕಾನೂನು ಕೈಗೆ ಎತ್ತಿಕೊಳ್ಳೋ ಕೆಲಸ ಮಾಡಬಾರದು ಅಂತ ಸೂಚನೆ ನೀಡಿದ್ದೇವೆ. ಇನ್ನೂ ಯಾರೇ ಇದರಲ್ಲಿ ಭಾಗಿಯಾಗಿದ್ದರು ಕಾನೂನಿನ ಪ್ರಕಾರ ಕ್ರಮ ಆಗಲಿದೆ ಎಂದು ತಿಳಿಸಿದರು.

ಉಡುಪಿ ಕಾಲೇಜು ಪ್ರಕರಣ ನ್ಯಾಯಾಂಗ ತನಿಖೆಗೆ ಬಿಜೆಪಿ ಆಗ್ರಹ ವಿಚಾರವಾಗಿ ಮಾತನಾಡಿ, ಬಿಜೆಪಿ ಅವರು ವಿರೋಧ ಪಕ್ಷದಲ್ಲಿ ಇದ್ದಾರೆ. ಅವರು ಒತ್ತಾಯ ಮಾಡಲೇಬೇಕು. ಅವರು ಹೇಳಿದ್ರು ಅಂತ ನಾವು ಅದನ್ನ ಕೇಳಬೇಕು ಅಂತ ಏನು ಇಲ್ಲ, ಅವರು ಬೇಕಾದ್ರೆ ರಚನಾತ್ಮಕವಾಗಿ ಸಲಹೆ ಕೊಟ್ಟರೆ ಪರವಾಗಿಲ್ಲ. ಅದು ಬಿಟ್ಟು ಪ್ರತಿಭಟನೆ ಮಾಡಿದ್ರೆ ಅವರು ಪ್ರತಿಭಟನೆ ಮಾಡಲಿ, ಅವರ ಪಕ್ಷದ ಕಷ್ಟ ಅವರೇ ಹೇಳಿದ ಮೇಲೂ ಅವರು ನಂಬಲಿಲ್ಲ ಅಂದ್ರೆ ಹೇಗೆ? ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+