Get Updates
Get notified of breaking news, exclusive insights, and must-see stories!

ನೂತನ ಅಡ್ವೊಕೇಟ್ ಜನರಲ್ ಆಗಿ ಉದಯ್ ಹೊಳ್ಳ ಅಧಿಕಾರ ಸ್ವೀಕಾರ

ಬೆಂಗಳೂರು, ಜೂನ್ 1: ಕರ್ನಾಟಕ ಸರಕಾರದ ನೂತನ ಅಡ್ವೊಕೇಟ್ ಜನರಲ್ ಆಗಿ ಹಿರಿಯ ವಕೀಲ ಉದಯ್ ಹೊಳ್ಳ ಅಧಿಕಾರ ಸ್ವೀಕರಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ನ ಎಜಿ ಕಚೇರಿಯಲ್ಲಿ ಉದಯ್ ಹೊಳ್ಳ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಮೂರು ದಿನಗಳ ಕಾಲ ಮುಖ್ಯಮಂತ್ರಿಯಾಗಿ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಪ್ರಭುಲಿಂಗ ನಾವಡಗಿಯವರನ್ನು ಎಜಿ ಸ್ಥಾನಕ್ಕೆ ನೇಮಿಸಿದ್ದರು. ಇದೀಗ ಅವರ ಸ್ಥಾನಕ್ಕೆ ಉದಯ್ ಹೊಳ್ಳ ಬಂದಿದ್ದಾರೆ.

ಉಡುಪಿಯ ಬೈಂದೂರು ಮೂಲದವರಾದ ಉದಯ್ ಹೊಳ್ಳ ಈ ಹಿಂದೆ 2006-2009ರ ವರೆಗೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿಯೂ ಅಡ್ವೊಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು.

 Udaya Holla takes charge as Advocate General of Karnataka

ಈ ಹಿಂದೆ ಮೂರು ಬಾರಿ ಉದಯ್ ಹೊಳ್ಳ ಅಡ್ವೊಕೇಟ್ ಜನರಲ್ ಆಗಿದ್ದರು. ಇದೀಗ ನಾಲ್ಕನೇ ಬಾರಿಗೆ ಎಜಿಯಾಗಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.

1973ರಲ್ಲಿ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜ್ ಆಫ್ ಲಾ ದಿಂದ ಕಾನೂನು ಪದವಿ ಪಡೆದಿರುವ ಅವರು ಕಳೆದ 4 ದಶಕಗಳಿಂದ ವಕೀಲಿ ವೃತ್ತಿಯಲ್ಲಿದ್ದಾರೆ. ಅವರನ್ನು ಅಡ್ವೋಕೇಟ್ ಜನರಲ್ ಆಗಿ ಮೇ 28ರಂದು ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+