ಉಡಾನ್ ಯೋಜನೆ : ಕರ್ನಾಟಕ 3 ಮಾರ್ಗದಲ್ಲಿ ವಿಮಾನ ಹಾರಾಟ
Recommended Video

ಕರ್ನಾಟಕದ 3 ಮಾರ್ಗದಲ್ಲಿ ಹೊಸ ವಿಮಾನ | Oneindia Kannada
ಬೆಂಗಳೂರು, ಫೆಬ್ರವರಿ 12 : ಉಡಾನ್ ಯೋಜನೆಯಡಿ ಕರ್ನಾಟಕದ ಮೂರು ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭವಾಗಲಿದೆ. ಮಾರ್ಚ್ ತಿಂಗಳಿನಲ್ಲಿ ವಿಮಾನ ಸೇವೆ ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಉಡೇ ದೇಶ್ ಕ ಆಮ್ ನಾಗರೀಕ್ (ಉಡಾನ್) ಯೋಜನೆಯಡಿ ಬಳ್ಳಾರಿಯ ವಿದ್ಯಾನಗರ-ಬೆಂಗಳೂರು, ಬೆಂಗಳೂರು-ಸೇಲಂ, ಮೈಸೂರು-ಚೆನ್ನೈ ನಡುವೆ ವಿಮಾನ ಸೇವೆ ಆರಂಭವಾಗಲಿದೆ.
ವಿದ್ಯಾನಗರ(ಬಳ್ಳಾರಿ)-ಬೆಂಗಳೂರು ನಡುವೆ ಟ್ರೂ ಜೆಟ್ ಕಂಪನಿ ವಿಮಾನ ಸೇವೆ ಒದಗಿಸಲಿದೆ. ಬೆಂಗಳೂರು-ಸೇಲಂ, ಮೈಸೂರು-ಚೆನ್ನೈ ಮಾರ್ಗದಲ್ಲಿ ಏರ್ ಒಡಿಶಾ ಸೇವೆಯನ್ನು ಒದಗಿಸಲಿದೆ.

ಉಡೇ ದೇಶ್ ಕ ಆಮ್ ನಾಗರೀಕ್ ಯೋಜನೆಯ ಮೊದಲ ಹಂತದಲ್ಲಿ ದೇಶದ 97 ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭವಾಗಲಿದೆ. ಅವುಗಳಲ್ಲಿ 51 ಮಾರ್ಗಗಳಲ್ಲಿ ಮಾರ್ಚ್‌ನಲ್ಲಿ ಸೇವೆ ಆರಂಭವಾಗಲಿದ್ದು, ಇವುಗಳಲ್ಲಿ ಕರ್ನಾಟಕದ 3 ಮಾರ್ಗ ಸೇರಿವೆ.
2 ನೇ ಹಂತದ ಮಾರ್ಗ : ಉಡಾನ್ 2ನೇ ಹಂತದ ಯೋಜನೆಯೂ ಅಂತಿಮಗೊಂಡಿದೆ. ಬೆಂಗಳೂರು-ಕೊಪ್ಪಳ, ಹುಬ್ಬಳ್ಳಿ-ಅಹಮದಾಬಾದ್ ನಡುವೆ ವಿಮಾನ ಸೇವೆ ಆರಂಭವಾಗುತ್ತಿದೆ.












Click it and Unblock the Notifications