ಕರ್ನಾಟಕಕ್ಕೆ ರಾಹುಲ್ ಗಾಂಧಿ: ಸ್ವಾಗತವೂ... ಕಾಲೆಳೆತವೂ..!

Posted By:
Subscribe to Oneindia Kannada
   ಕರ್ನಾಟಕಕ್ಕೆ ರಾಹುಲ್ ಗಾಂಧಿ: ಸ್ವಾಗತವೂ... ಕಾಲೆಳೆತವೂ | Oneindia Kannada

   ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿ ಕರ್ನಾಟಕ ಕಾಂಗ್ರೆಸ್ಸಿಗರಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

   ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿರುವ ರಾಹುಲ್ ಗಾಂಧಿ ಎಲ್ಲ ಜಿಲ್ಲೆಗಳಲ್ಲೂ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

   In Pics : ಹೊಸಪೇಟೆಯಲ್ಲಿ ರಾಹುಲ್ ಭಾಷಣ ಕೇಳಲು ಬರುತ್ತಿರುವ ಜನಸ್ತೋಮ

   ಇಂದಿನಿಂದ(ಫೆ.10) ರಾಹುಲ್ ಗಾಂಧಿ ಪ್ರವಾಸ ಆರಂಭವಾಗಿದ್ದು, ಫೆ.13 ರಕ್ಕೆ ಅಂತ್ಯಗೊಳ್ಳಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಅತೀದೊಡ್ಡ ರಾಜ್ಯವೆಂಬ ಹೆಗ್ಗಳಿಕೆ ಪಡೆದಿರುವ ಕಾರಣಕ್ಕೆ ಕಾಂಗ್ರೆಸ್ ಗೆ ಕರ್ನಾಟಕದಲ್ಲಿ ಮತ್ತೆ ಅಧಿಕಾರ ಹಿಡಿಯವುದು ಪ್ರತಿಷ್ಟೆಯ ಪ್ರಶ್ನೆ ಎನ್ನಿಸಿದೆ. ಈ ಹಿನ್ನೆಲೆಯಲ್ಲಿ, ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಘಟಾನುಘಟಿ ನಾಯಕರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

   'ರಾಹುಲ್ ಗಾಂಧಿ ದೇಗುಲ ದರ್ಶನ ಹಿಂದೆ ರಾಜಕೀಯ ಇಲ್ಲ'!

   ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಯವರೂ ಬೆಂಗಳೂರಿಗೆ ಆಗಮಿಸಿ ಪ್ರಚಾರ ಕಾರ್ಯ ಕೈಗೊಂಡಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ರಾಹುಲಾ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಟ್ವಿಟ್ಟರ್ ನಲ್ಲಿ ಹಲವರು ರಾಹುಲ್ ಅವರನ್ನು ಹಾರ್ದಿಕವಾಗಿ ಕರ್ನಾಟಕಕ್ಕೆ ಸ್ವಾಗತಿಸಿದ್ದಾರೆ. ಕೆಲವರು ಕಾಲೆಳೆದಿದ್ದಾರೆ ಕೂಡ.

   ನಂ.1 ರಾಜ್ಯಕ್ಕೆ ಸ್ವಾಗತ

   ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ನಂ.1 ರಾಜ್ಯ ಕರ್ನಾಟಕಕ್ಕೆ ಸ್ವಾಗತ. ಅವರು ತಮ್ಮ ನಾಲ್ಕು ದಿನಗಳ ಪ್ರವಾಸದಲ್ಲಿ ಹುಲಿಗಮ್ಮ ದೇವಾಲಯ, ಗವಿ ಸಿದ್ದೇಶ್ವರ ಮಠ, ಖ್ವಾಜಾ ಬಂದೆ ನವಾಜ್ ದರ್ಗಾ, ಅನುಭವ ಮಂಟಪಗಳಿಗೆ ಭೇಟಿ ನೀಡಲಿದ್ದು, ಹಲವು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದಿದ್ದಾರೆ ಸಚಿವ ಯು ಟಿ ಖಾದರ್.

   ಇದೆಂಥ ಆಶಾಢಭೂತಿತನ?

   ಕರ್ನಾಟಕ ಕಾಂಗ್ರೆಸ್ ಅಮಿತ್ ಶಾ, ನರೇಂದ್ರ ಮೋದಿಯವರನ್ನು ಸ್ವಾಗತಿಸುವಾಗ ಅವರು ಹೊರಗಿವರು ಎನ್ನುತ್ತದೆ, ಆದರೆ ರಾಹುಲ್ ಗಾಂಧಿಯವರನ್ನು ಸ್ವಾಗತಿಸುವಾಗ ಆ ಮಾತು ಅನ್ವಯವಾಗುವುದಿಲ್ಲವೇ? ಇದೆಂಥ ಆಶಾಢಭೂತಿತನ ಎಂದು ಪ್ರಶ್ನಿಸಿದ್ದಾರೆ ಅವಿನಾಶ್ ರಂಗನಾಥ್.

   ಶಿವಭಕ್ತ ರಾಹುಲ್ ಗಾಂಧಿ

   ನಮ್ಮ ರಾಜ್ಯಕ್ಕೆ ನಾಯಕರನ್ನು ಸ್ವಾಗತಿಸುವುದನ್ನು ಸಿದ್ದರಾಮಯ್ಯನವರನ್ನು ನೋಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸಹ ಕಲಿತಿದ್ದಾರೆ ಎಂದು ಸಂತೋಷವಾಗುತ್ತಿದೆ! ರಾಹುಲ್ ಗಾಂಧಿ ಶಿವ ಭಕ್ತರು, ಇಂದಿರಾ ಗಾಂಧಿಯವರು ಸಹ. ಅವರನ್ನು ಸ್ವಾಗತಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ ಯಶ್ ಎನ್ನುವವರು.

   ಬ್ರಮರೇಶ್

   ಹಿಂದು ವಿರೋಧಿ ರಾಹುಲ್ ಗಾಂಧಿ ಅವರ ಕರ್ನಾಟಕ ಪ್ರವಾಸವನ್ನು ನಾವು ಖಂಡಿಸುತ್ತೇವೆ ಎಂದು ಗುಡುಗಿದ್ದಾರೆ ಬರಮೇಶ್ ಎಂಬುವವರು.

   ಯುವ, ಉತ್ಸಾಹಿ ನಾಯಕನಿಗೆ ಸ್ವಾಗತ

   ಯುವ, ಕ್ರಿಯಾಶೀಲ, ಉತ್ಸಾಹಿ ನಾಯಕ , ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ನಂ.1 ರಾಜ್ಯ ಕರ್ನಾಟಕಕ್ಕೆ ಆತ್ಮೀಯ ಸ್ವಾಗತ. ಎಂದಿದ್ದಾರೆ ಮೊಹ್ಮದ್ ಫಯಾಜ್.

   ಮಂದಿರದ ಮಹತ್ವ ಈಗ ಅರಿವಾಗುತ್ತಿದೆ!

   ಗುಜರಾತಿನ ನಂತರ ಫಿರೋಜ್ ಖಾನ್ ರ ಮೊಮ್ಮಗ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದಿದ್ದಾರೆ. ಅವರಿಗೆ ಈಗ ದೇಗುಲಗಳ ಮಹತ್ವ ಅರಿವಾಗುತ್ತಿದೆ. ಮೂರ್ಖ ಹಿಂದುಗಳನ್ನು ಮತ್ತಷ್ಟು ಮೂರ್ಖರನ್ನಾಗಿ ಮಾಡಲು ಅವರು ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ.

   ಇದು ಯಶಸ್ವೀ ಯಾತ್ರೆಯಾಗಲಿದೆ

   ಈ ಜನ ಆಶೀರ್ವಾದ ಯಾತ್ರೆ ಗುಜರಾತ್ ನಂತೆ ಅತ್ಯಂತ ಯಶಸ್ವೀ ಯಾತ್ರೆಯಾಗಲಿದೆ. ಜನರು ಅತ್ಯಂತ ಪ್ರೀತಿ, ವಿಶ್ವಾಸದಿಂದ ರಾಹುಲ್ ಗಾಂಧಿಯವರನ್ನು ಸ್ವಾಗತಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂದು ಕಿಲಾ ಫತೇಹ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

   ಮೃದು ಹಿಂದುತ್ವ ಫಲಕೊಟ್ಟೀತೇ?

   ರಾಹುಲ್ ಗಾಂಧಿಯವರ ಮೃದು ಹಿಂದುತ್ವ ಕರ್ನಾಟಕದಲ್ಲಿ ಫಲ ಕೊಟ್ಟೀತೆ ಎಂದು ಪ್ರಶ್ನಿಸಿದ್ದಾರೆ ಧನ್ಯಾ ರಾಜೇಂದ್ರನ್.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   AICC President Rahul Gandhi has started his 4 days Karnataka tour from today(Feb 10th). Specially Rahul Gandhi will visit North Karnataka districts. Here is twitter statements on Rahul Gandhi's Karnataka visit.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ