ಸಿಇಟಿ ಪರೀಕ್ಷೆ ದಿನದಂದೇ ಪ್ರಮಾಣ ವಚನ ಎಂದ ಬಿ.ಎಲ್.ಸಂತೋಷ್: ಟ್ವಿಟ್ಟಿಗರ ಪ್ರತಿಕ್ರಿಯೆ ಹೀಗಿತ್ತು!
ಬೆಂಗಳೂರು, ಮೇ 19: ಐತಿಹಾಸಿಕ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಗೆ ಸಿದ್ದತೆಯನ್ನ ನಡೆಸಿದೆ. ಶನಿವಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Not many days has passed after our designate CM tweeted this . Tomorrow is CET exams across state & Bengaluru. What would have happened Sri @siddaramaiah & Sri @DKShivakumar if your oath taking was deferred by a day or two so that students will not be troubled . https://t.co/IXqrvAaGjp
— B L Santhosh (@blsanthosh) May 19, 2023
ಇನ್ನು ಪ್ರಮಾಣ ವಚನ ಸಮಾರಂಭಕ್ಕೆ ರಾಜ್ಯದ ಮೂಲೆಮೂಲೆಯಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸುವುದರಿಂದ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ಇದರಿಂದ ಬೆಂಗಳೂರಿನಲ್ಲಿ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಟ್ರಾಫಿಕ್ ಸಮಸ್ಯೆಯ ಆತಂಕ ಎದುರಾಗಿದೆ. ಇತ್ತ ಇದೇ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಪ್ರಮಾಣ ವಚನ ಮುಂದೂಡಬಹುದಲ್ಲವೇ ಎಂದು ಟ್ವೀಟ್ ಮೂಲಕ ಕಾಲೆಳೆದಿದ್ದಾರೆ.

ಇನ್ನೂ ಬಿ ಎಲ್ ಸಂತೋಷ್ ಅವರ ಮಾತಿಗೆ ಟ್ವಿಟ್ಟಿಗರು ತಿರುಗೇಟು ನೀಡಿದ್ದಾರೆ. NEET ಪರೀಕ್ಷೆಯ ಸಮಯದಲ್ಲಿ ಮೋದಿಜಿಯವರ ಮೆಗಾ ರೋಡ್ ಶೋ ಅನ್ನು ನಿಮ್ಮ ಪಕ್ಷವು ಹೇಗೆ ಸಮರ್ಥಿಸಿಕೊಂಡಿತು ಎಂಬುದನ್ನ ನೋಡಿದ್ದೇವೆ ಎಂದಿದ್ದಾರೆ. ಇನ್ನೂ ಈ ರೀತಿಯ ಬೂಟಾಟಿಕೆಯನ್ನು ಜನರು ದ್ವೇಷಿಸುತ್ತಾರೆ! ನೀಟ್ ಪರೀಕ್ಷೆಯ ದಿನದಂದು ಮೋದಿ ರೋಡ್ ಶೋ ಮಾಡಿದಾಗ ಅದು ಸರಿ ಆದರೆ, ಸಿದ್ದರಾಮಯ್ಯ ಅವರು ಸಿಇಟಿ ಪರೀಕ್ಷೆಯ ದಿನದಂದು ಪ್ರಮಾಣ ವಚನ ಸ್ವೀಕರಿಸುವುದು ತಪ್ಪು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಸಾರ್, ಪಕ್ಷ ಬೆಳೆಯುವುದಕ್ಕಿಂತ ಹೆಚ್ಚು ಹಾನಿ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರ ಪ್ರಮಾಣ ವಚನ. ಇದು ಸುದೀರ್ಘ ರೋಡ್ ಶೋ ಅಲ್ಲ... ಇದು ರಸ್ತೆಗಳಲ್ಲಿ ನಡೆಯಲ್ಲ.. ಇದು ಕ್ರೀಡಾಂಗಣದಲ್ಲಿ ಕೇವಲ ಒಂದು ಗಂಟೆ ನಡೆಯುತ್ತದೆ... ನಿಮ್ಮ ನಾಯರ ರೀಡ್ ಶೋ ಗೆ 4 ರಿಂದ 5 ಗಂಟೆಗಳ ರೋಡ್‌ಶೋ ನಿಂದ ನಗರವನ್ನು ಸ್ತಬ್ಧಗೊಳಿಸಿತು!! ಎಂದು ಟೀಕಿಸಿದ್ದಾರೆ.
ಇನ್ನೂ ಮತ್ತೊಬ್ಬ ಟ್ವಿಟ್ವಿಗರು, ಮೊದಲು ಈ ಬಿಜೆಪಿ ಆಫೀಸಿ ನ ಸ್ಟ್ರಾಟಜಿ ಟೀಂ ನಾಲಯಕಗಳು, ರಾಜ್ಯದ ಬಿಜೆಪಿ ನಾಲಯಕಗಳು ಮತ್ತು ಸೋಶಿಯಲ್ ಮೀಡಿಯಾ ನಾಲಯಕಗಳನ್ನು ಹೊರಗೆ ಹಾಕಿ. ಗ್ರೌಂಡ್ ರಿಪೋರ್ಟ್ ಏನು ಅಂತ ಗೊತ್ತಿಲ್ಲಿದೆ. ನಿಮ್ಮ ದಡ್ಡತನಕ್ಕೆ ಏನು ಹೇಳಬೇಕೋ ಗೊತ್ತಿಲ್ಲ. ನಮ್ಮಂಥ ಸಾಮಾನ್ಯ ಕಾರ್ಯಕರ್ತರು ಮುಖ ತೋರಿಸೋ ಆಗಿಲ್ಲ ನಿಮ್ಮಿಂದ. ಬರೀ ಮೋದಿ ಹೆಸರಲ್ಲಿ ಗೆಲ್ಲೋ ಪ್ರಯತ್ನ ಅಷ್ಟೇ ಎಂದು ಟ್ವೀಟ್ ನಲ್ಲಿ ಕಿಡಿಕಾರಿದ್ದಾರೆ.

ಚುನಾವಣೆ ಸೋಲಿಗೆ ಬಿಜೆಪಿ ಕಾರ್ಯಕರ್ತರೇ ಉಗಿದು ಉಪ್ಪಿನಕಾಯಿ ಹಾಕ್ತಾ ಇದ್ರು, ಇನ್ನೂ ಯಾವುದೋ AC room ಅಲ್ಲಿ ಕೂತು ಟ್ವೀಟ್ ಮಾಡ್ತಾ,ಚಿಕ್ಕ ಮಕ್ಕಳ ತರಹ ಜನರಿಗೆ ಕಂಪ್ಲೇಂಟ್ ಮಾಡೋ ಬುದ್ಧಿ ಇನ್ನಾದರೂ ಬಿಡೋ ಪುಣ್ಯಾತ್ಮ ಎಂದು ಟ್ವಿಟ್ವಿಗರು ವಾಗ್ದಾಳಿ ನಡೆಸಿದ್ದಾರೆ.
ಇದು ಎರಡು ದಿನಗಳಲ್ಲಿ ನಾಲ್ಕು ಗಂಟೆಗಳ ರೋಡ್ ಶೋನಂತೆ ಅಲ್ಲ, ರಸ್ತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು, ಅಂಗಡಿಗಳು ಮತ್ತು ಕಚೇರಿಗಳನ್ನು ಮುಚ್ಚುವುದು ಮತ್ತು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಹೊರಗೆ ಹೋಗುವುದನ್ನು ನಿರ್ಬಂಧಿಸುವುದು. ಇದು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕ್ರೀಡಾಂಗಣದ ಒಳಗೆ ಸರ್ ಜಿ. ವಿದ್ಯಾರ್ಥಿಗಳ ಬಗ್ಗೆ ಚಿಂತಿಸಬೇಡಿ ಸರ್ ಎಂದಿದ್ದಾರೆ. ಇಡೀ ಸಿಟಿಯ ರಸ್ತೆಗಳನ್ನು ಬ್ಲಾಕ್ ಮಾಡಿಸೋ ರೋಡ್ ಶೋಗೂ ಎಲ್ಲೋ ಒಂದು ಕಡೆ ನಡೆಸೋ ಸಮಾರಂಭಕ್ಕೂ ವ್ಯತ್ಯಾಸ ಇಲ್ವೇನಯ್ಯ !? ಎಂದು ಟುಕುಕಿದ್ದಾರೆ.












Click it and Unblock the Notifications