ಗೊರವನಹಳ್ಳಿಯಲ್ಲಿ ದುರಂತ: ಕಾಲ್ತುಳಿತಕ್ಕೆ ಮಗು ಬಲಿ

ತುಮಕೂರು, ನ.27: ಕಾರ್ತೀಕ ಮಾಸದಲ್ಲಿ ಭಕ್ತರು ದೇವಸ್ಥಾನಗಳಿಗೆ ಭೇಟಿ ಕೊಡುವುದು ತುಸು ಹೆಚ್ಚೇ. ಅದರಲ್ಲೂ ಸುಪ್ರಸಿದ್ಧ ಗೊರವನಹಳ್ಳಿಯಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭಕ್ತಾದಿಗಳು ಹೆಚ್ಚಾಗಿ ಬರುತ್ತಾರೆ.

ಹೀಗಿರುವಾಗ ಇಂದು ಬುಧವಾರ ಬೆಳಗ್ಗೆ ಗೊರವನಹಳ್ಳಿಯಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭಕ್ತರು ಜಾಸ್ತಿ ಸಂಖ್ಯೆಯಲ್ಲಿ ಬಂದಿದ್ದು ದುರಂತ ಸಂಭವಿಸಿದೆ. ಭಕ್ತಾದಿಗಳ ಕಾಲ್ತುಳಿತಕ್ಕೆ ಮಗುವೊಂದು ಬಲಿಯಾಗಿದೆ. ಮತ್ತೊಂದು ಮಗು ಸ್ಥಿತಿ ಚಿಂತಾಜನಕವಾಗಿದೆ. ಇನ್ನೂ ಅನೇಕ ಮಂದಿ ಗಾಯಗೊಂಡಿದ್ದಾರೆ. ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನವು ತುಮಕೂರಿನಿಂದ ಸುಮಾರು 30 ಕಿಮೀ ದೂರದಲ್ಲಿದೆ.

Tumkur Goravanahalli Maha Lakshmi temple stampede kid dead
ಬಳ್ಳಾರಿ ವರದಿ: ಮಂಗಳವಾರ ರಾತ್ರಿ 11 ಗಂಟೆಯಲ್ಲಿ ಕಾರೊಂದು ಸುಟ್ಟು ಭಸ್ಮವಾಗಿ ಅದರಲ್ಲಿದ್ದ ಇಬ್ಬರು ಸಜೀವ ದಹನಗೊಂಡ ಘಟನೆ ಜೋಳದರಾಶಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಆಂಧ್ರದ ಅನಂತಪುರ ನೋಂದಣಿ ಸಂಖ್ಯೆ ಹೊಂದಿರುವ (ಎಪಿ 02 - ಪಿ 924) ಟಾಟಾ ಇಂಡಿಕಾ ಕಾರು ಆಂಧ್ರದ ಕಡೆಯಿಂದ ಬಳ್ಳಾರಿಗೆ ಬರುತ್ತಿತ್ತು. ಬಳ್ಳಾರಿಯಿಂದ ಆಂಧ್ರದತ್ತ ಹೊರಟಿದ್ದ ಲಾರಿಯು ಎದುರುಗಡೆಯಿಂದ ಬಂದು ಢಿಕ್ಕಿ ಹೊಡೆದ ಪರಿಣಾಮ ಕಾರು ಸ್ಪೋಟಗೊಂಡಿದೆ.

ಮೃತರ ಗುರುತು ಪತ್ತೆಯಾಗಿಲ್ಲ: ಮೃತರ ಶವಗಳು ಸುಟ್ಟು ಕರಕರಾಗಿದ್ದು, ಗುರುತು ಹಿಡಿಯಲೂ ಸಾಧ್ಯವಾಗುತ್ತಿಲ್ಲ. ಶವಗಳು ಕಾರಲ್ಲಿಯೇ ಇವೆ. ಕಾರಿನ ಮಾಹಿತಿ ಪಡೆಯಲು ಬುಧವಾರ ಬೆಳಗ್ಗೆ ಆಂಧ್ರದ ಅನಂತಪುರ ಆರ್‌ಟಿಓ ಕಚೇರಿಯನ್ನು ಪೊಲೀಸರು ಸಂಪರ್ಕ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಾರಿಯ ಚಾಲಕ ಕೆ ಮನೋಹರ್ (42) ನನ್ನು ಪೊಲೀಸರು ಬಂಧಿಸಿದ್ದಾರೆ. ಪರಮದೇವನಹಳ್ಳಿ (ಹಗರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+