• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಚನ ಭ್ರಷ್ಟನಲ್ಲ, ವಚನ ಭ್ರಷ್ಟನಲ್ಲ, ವಚನ ಭ್ರಷ್ಟನಲ್ಲ : ಎಚ್ಡಿ ಕುಮಾರಸ್ವಾಮಿ

|
   ವಚನ ಭ್ರಷ್ಟನಲ್ಲ, ವಚನ ಭ್ರಷ್ಟನಲ್ಲ, ವಚನ ಭ್ರಷ್ಟನಲ್ಲ : ಎಚ್ಡಿ ಕುಮಾರಸ್ವಾಮಿ | H D kumaraswamy

   ಬೆಂಗಳೂರು, ಜುಲೈ 23: ಕಾಂಗ್ರೆಸ್- ಜೆಡಿಎಸ್ ಸರ್ಕಾರವು ಇಂದು 15ನೇ ವಿಧಾನಸಭೆಯಲ್ಲಿ ವಿಶ್ವಾಸಮತ ಕಳೆದುಕೊಂಡಿದೆ. 14 ತಿಂಗಳುಗಳ ಕಾಲ ಸರ್ಕಾರ ನಡೆಸಲು ಸಹಕಾರ ನೀಡಿದ ಎಲ್ಲರಿಗೂ ಸದನದ ಒಳಗೆ-ಹೊರಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಪಾಲ ವಜುಭಾಯಿವಾಲ ಅವರಿಗೆ ರಾಜೀನಾಮೆ ಸಲ್ಲಿಸಿರುವ ಕುಮಾರಸ್ವಾಮಿ ಈಗ ಹಂಗಾಮಿ ಸಿಎಂ.

   20 ತಿಂಗಳು ಹಾಗೂ 14 ತಿಂಗಳುಗಳ ಕಾಲ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಇಂದು ತಮ್ಮ ವಿದಾಯ ಭಾಷಣದಲ್ಲಿ ಆಕಸ್ಮಿಕವಾಗಿ ರಾಜಕೀಯ ಪ್ರವೇಶ, ಸಾಂದರ್ಭಿಕ ಶಿಶುವಾಗಿದ್ದು, ನಿರಂತರ ನಿಂದನೆಯ ನಡುವೆ ಕಲಿತ ಪಾಠ, ಅನುಭವವನ್ನು ಸದನದ ಮುಂದಿಟ್ಟರು. ಪ್ರಮುಖವಾಗಿ, "ನಾನು ವಚನ ಭ್ರಷ್ಟನಲ್ಲ" ಎಂದು ಮೂರು ಬಾರಿ ಒತ್ತಿ ಹೇಳಿದರು.

   ಸಿಎಂ ಕುಮಾರಸ್ವಾಮಿ ಭಾಷಣದ ಮುಖ್ಯಾಂಶಗಳು:
   "2018 ಮೇ 23 ರಂದು ಬಂದ ಮೈತ್ರಿ ಸರ್ಕಾರವನ್ನು ಕೆಳಗಿಳಿಸಲು ವಿಪಕ್ಷವು ಆತುರದಲ್ಲಿದೆ, ನಾನು ಹಲವಾರು ತಪ್ಪು ಕೆಲಸಗಳನ್ನು ಮಾಡಿದ್ದೇನೆ, ಒಳ್ಳೆ ಕೆಲಸಗಳನ್ನು ಮಾಡಿದ್ದೇನೆ" ಎಂದು ಹೇಳಿದರು.

   ವಿಶ್ವಾಸಮತದಲ್ಲಿ ಸೋಲು; ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಪತನವಿಶ್ವಾಸಮತದಲ್ಲಿ ಸೋಲು; ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಪತನ

   "2004ರಲ್ಲಿ ಅನಿವಾರ್ಯವಾಗಿ ನಾನು ರಾಜಕೀಯವಾಗಿ ಬಂದವನು ನಾನು, ನನಗೇನೂ ಸಿಎಂ ಆಗುವ ಆಸೆಯಿರಲಿಲ್ಲ. ಅಂದು ಬಿಜೆಪಿ ಜೊತೆ ಹೋದದ್ದು ದೊಡ್ಡ ತಪ್ಪು, ನನ್ನ ರಾಜಕೀಯ ಜೀವನದ ದೊಡ್ಡ ತಪ್ಪು" ಎಂದರು.

   "ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ನಾನು ಚಂದ್ರಶೇಖರಮೂರ್ತಿಗಳ ವಿರುದ್ಧ ನಿಲ್ಲಲು ಯಾರು ತಯಾರಿರಲಿಲ್ಲ. ನಮ್ಮ ಪಕ್ಷದವರು ಎಸೆದ ಬಿ ಫಾರಂ ಆಯ್ದುಕೊಂಡು ಲೋಕಸಭೆಗೆ ಸ್ಪರ್ಧಿಸಿದ್ದೆ'

   "ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲ ತಾಣಗಳಲ್ಲಿ ಬಳಸುವ ಪದಗಳು, ಟ್ರಾಲ್, ಮೀಮ್ ಗಳಿಂದ ಸಂಸ್ಕೃತಿ ಹಾಳಾಗುತ್ತಿದೆ. ನಾನು ಸಂತೋಷದಿಂದ ಅಧಿಕಾರ ತೊರೆಯಲು ಸಿದ್ಧನಿದ್ದೇನೆ, ಅವತ್ತು ನಿಮಗೆ ಅಧಿಕಾರ ಹಸ್ತಾಂತರ ಮಾಡಲಾಗಲಿಲ್ಲ ಎಂದು ಕಣ್ಣೀರಿಟ್ಟಿದ್ದೇನೆ, ಆದರೆ, ವಚನಭ್ರಷ್ಟನಲ್ಲ " ಎಂದು ಬಿಜೆಪಿಗೆ ಹೇಳಿದ ಮುಖ್ಯಮಂತ್ರಿ, ಇನ್ನು ಮುಂದೆ ಹಾಗೆ ಕರೆಯದಿರಿ ಎಂದು ಮಾಧ್ಯಮಗಳಿಗೂ ಮನವಿ ಮಾಡಿಕೊಂಡರು.

   ಸ್ಪೀಕರ್‌ ಮೇಲೆ ವಿಶ್ವಾಸ, ಮಧ್ಯ ಪ್ರವೇಶಿಸಲು ಒಪ್ಪದ ಸುಪ್ರಿಂಸ್ಪೀಕರ್‌ ಮೇಲೆ ವಿಶ್ವಾಸ, ಮಧ್ಯ ಪ್ರವೇಶಿಸಲು ಒಪ್ಪದ ಸುಪ್ರಿಂ

   "ರೈತರ ಸಾಲಮನ್ನಾ ನಮ್ಮ ಸರ್ಕಾರದ ಮಹತ್ವದ ನಿರ್ಧಾರ, ರೈತರಿಗೆ ನಾವು ಮೋಸ ಮಾಡಿಲ್ಲ, ನಾಡಿನ ಜನತೆಗೆ ಸುಳ್ಳು ಹೇಳುವ ಅವಶ್ಯಕತೆ ಇಲ್ಲ, ನಾನು ವಚನಭ್ರಷ್ಟನಲ್ಲ, ಇದನ್ನು ಮಾಧ್ಯಮ ಮಿತ್ರರು ಗಮನಿಸಬೇಕು' ಎಂದರು.

   "ಸರ್ಕಾರದಿಂದ ದೂರಾಗಿ ಶಾಸಕರು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗ, ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದೆ, ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸಲ್ಲ, ಪ್ರಕ್ರಿಯೆ ವಿಳಂಬ ಮಾಡುತ್ತಾರೆ, ಕೊಟ್ಟ ಗಡುವು ಮೀರುತ್ತಾರೆ, ವಚನಭ್ರಷ್ಟ ಎಂದು ಟ್ವೀಟ್ ಮಾಡಲಾಗಿತ್ತು. ಮಾಧ್ಯಮಗಳಲ್ಲೂ ಬಂದಿದೆ, ಆದರೆ, ನಾನು ಪಲಾಯನ ಮಾಡಲಿಲ್ಲ, ನಾನು ವಚನ ಭ್ರಷ್ಟನಲ್ಲ"

   English summary
   Trust Vote : CM HD Kumaraswamy seeks apology from public in his final speech on Judgement Day. Later he couldn't prove majority in the lower house and submitted resignation to Governor Vajubhai Vala
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X