ಅಂತರರಾಜ್ಯ ಪಾಸು; ಸಂಚಾರಕ್ಕೂ ಮುನ್ನ ಸೂಚನೆಗಳು

ಬೆಂಗಳೂರು, ಮೇ 11 : ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಪೊಲೀಸರು ನೀಡುವ ಪಾಸು ಪಡೆದು ಅಂತರರಾಜ್ಯ ಪ್ರಯಾಣವನ್ನು ಮಾಡಬಹುದಾಗಿದೆ.

ಆದರೆ, ಅಂತರರಾಜ್ಯ ಪ್ರಯಾಣಿಕರಿಗೆ ಪೊಲೀಸರು ಹಲವು ಸೂಚನೆಗಳನ್ನು ನೀಡಿದ್ದಾರೆ. ತುರ್ತು ಅಗತ್ಯ ಇದ್ದರೆ ಮಾತ್ರ ಸಂಚಾರ ನಡೆಸಿ ಎಂದು ಮನವಿ ಮಾಡಿದ್ದಾರೆ. ಆನ್‌ಲೈನ್ ಮೂಲಕ ಮಾತ್ರ ಪಾಸುಗಳನ್ನು ಪಡೆಯಬಹುದು ಎಂದು ಹೇಳಿದ್ದಾರೆ.

ದೆಹಲಿ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ ಕರ್ನಾಟಕಕ್ಕೆ ಯಾರೇ ಆಗಮಿಸಿದರೂ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು. ಇದೇ ನಿಯಮಗಳು ಅಕ್ಕಪಕ್ಕದ ರಾಜ್ಯದಲ್ಲಿಯೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಅಂತರರಾಜ್ಯ ಸಂಚಾರಕ್ಕೆ ಪಾಸುಗಳನ್ನು ಪಡೆಯಬಹುದಾಗಿದೆ. ಆದರೆ, ಪಾಸು ಪಡೆದವರು ಬೇರೆ ರಾಜ್ಯಕ್ಕೆ ಹೋದಾಗ ಅಲ್ಲಿನ ನಿಯಮಗಳನ್ನು ಪಾಲನೆ ಮಾಡಲೇ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಕರ್ನಾಟಕಕ್ಕೆ ಬರುವವರಿಗೆ ಮಾಹಿತಿ

ಕರ್ನಾಟಕಕ್ಕೆ ಬರುವವರಿಗೆ ಮಾಹಿತಿ

ದೆಹಲಿ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡುವಿನಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನ ಕಡ್ಡಾಯ ಕ್ವಾರಂಟೈನ್‌ ಇದೆ ಎಂದು ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರು ಟ್ವೀಟ್ ಮಾಡಿದ್ದಾರೆ. ಆದ್ದರಿಂದ, ಸಂಚಾರ ನಡೆಸುವ ಮುನ್ನ ಎಚ್ಚರ ವಹಿಸಿ.

ಅಗತ್ಯವಿದ್ದರೆ ಮಾತ್ರ ಸಂಚರಿಸಿ

ಅಂತರರಾಜ್ಯಗಳ ನಡುವೆ ತುರ್ತು ಅಗತ್ಯವಿದ್ದರೆ ಮಾತ್ರ ಸಂಚಾರ ನಡೆಸಿ. ನೀವು ರಾಜ್ಯದ ಗಡಿಯನ್ನು ದಾಟುತ್ತಲೇ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಕರ್ನಾಟಕದಿಂದ ಬೇರೆ ರಾಜ್ಯಕ್ಕೆ ಹೋಗುವವರಿಗೂ ಇದು ಅನ್ವಯ.

ವಾಹನಗಳ ದಂಡು

ವಾಹನಗಳ ದಂಡು

ಬೆಂಗಳೂರಿನ ಅತ್ತಿಬೆಲೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಪಾಸು ಪಡೆದು ನೂರಾರು ವಾಹನ ಬೆಂಗಳೂರಿನ ಕಡೆಗೆ ತಮಿಳುನಾಡಿನಿಂದ ಬರುತ್ತಿದೆ. 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಪ್ಪದ ಯಾರನ್ನೂ ರಾಜ್ಯದೊಳಗೆ ಬಿಡುತ್ತಿಲ್ಲ.

ಪೊಲೀಸ್, ಕಂದಾಯ ಅಧಿಕಾರಿಗಳು

ಪೊಲೀಸ್, ಕಂದಾಯ ಅಧಿಕಾರಿಗಳು

ಅಂತರರಾಜ್ಯ ಸಂಚಾರಕ್ಕೆ ಪಾಸು ಸಿಕ್ಕಿದೆ ಎಂದು ಅನಗತ್ಯವಾಗಿ ಸಂಚಾರ ನಡೆಸುವಂತಿಲ್ಲ. ಗಡಿಯಲ್ಲಿ ಪೊಲೀಸ್, ಕಂದಾಯ, ವೈದ್ಯಕೀಯ ಸಿಬ್ಬಂದಿ ಇರುತ್ತಾರೆ. ಅಲ್ಲಿ ತಪಾಸಣೆಗೆ ಒಳಗಾಗಲೇ ಬೇಕಾಗುತ್ತದೆ. ಕರ್ನಾಟಕದ ಗಡಿ ದಾಟಿದರೂ ಇದೇ ಪರಿಸ್ಥಿತಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+