ಬಸ್ ಸಿಬ್ಬಂದಿ ಸ್ಟ್ರೈಕ್ : ಶೇ 10 ಮಾತ್ರ ಹೈಕ್ ಅಂದ ಸಿದ್ದು

Posted By:
Subscribe to Oneindia Kannada

ಬೆಂಗಳೂರು, ಜುಲೈ 26 : ಸರ್ಕಾರ ಮತ್ತು ಸಾರಿಗೆ ಸಂಸ್ಥೆಗಳ ನೌಕರರ ನಡುವಿನ ಹಗ್ಗಜಗ್ಗಾಟ ಮುಂದುವರೆದಿದೆ. 'ಶೇ 10ಕ್ಕಿಂತಲೂ ಹೆಚ್ಚು ವೇತನ ಪರಿಷ್ಕರಣೆ ಸಾಧ್ಯವೇ ಇಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸ್ಪಷ್ಟಪಡಿಸಿದರು.[ನಮ್ಮ ಶಾಸಕರ ಸಂಬಳ ಎಷ್ಟು ಗೊತ್ತಾ?]

ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಸಾರಿಗೆ ಇಲಾಖೆ ನೌಕರರು ತಮ್ಮ ಹಠಮಾರಿ ಧೋರಣೆಯನ್ನು ಕೈ ಬಿಟ್ಟು ಸರ್ಕಾರದ ಜೊತೆ ಮಾತುಕತೆಗೆ ಬರುವಂತೆ ಆಹ್ವಾನ ನೀಡಿದರು. ಎಸ್ಮಾ ಜಾರಿಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ' ಎಂದರು.[ಸಾರಿಗೆ ನಿಗಮದ ನೌಕರರ ಮುಷ್ಕರ ಏಕೆ, ಏನು?]

Transport strike : Siddaramaiah sticks to 10 percent hike

'ವೇತನ ಪರಿಷ್ಕರಣೆ ಮಾಡದೇ ಲಾಭ ಮಾಡುವ ಉದ್ದೇಶ ಸಾರಿಗೆ ಇಲಾಖೆಗೆ ಇಲ್ಲ. ದಯವಿಟ್ಟು ನೌಕರರು ಹಠಮಾರಿ ಧೋರಣೆ ಬಿಟ್ಟು, ಜನರ ಹಿತದೃಷ್ಠಿಯಿಂದ ಮುಷ್ಕರ ವಾಪಸ್ ಪಡೆಯಿರಿ' ಎಂದು ಸಿದ್ದರಾಮಯ್ಯ ಮನವಿ ಮಾಡಿದರು.[Live : 2ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ, ಜನರ ಪರದಾಟ]

'ಯಾವುದೇ ಸಾರಿಗೆ ಸಂಸ್ಥೆ ತನ್ನ ಸಾರ್ಮಥ್ಯಕ್ಕೆ ತಕ್ಕಂತೆ ವೇತನ ನೀಡಬಹುದು ಶೇ 30ರಷ್ಟು ಹೆಚ್ಚಳ ಮಾಡಿದರೆ ಅದನ್ನು ನೀಡುವ ಶಕ್ತಿ ಅವುಗಳಿಗಿಲ್ಲ. ಆದ್ದರಿಂದ ಶೇ 10ರಷ್ಟು ವೇತನ ಮಾತ್ರ ಹೆಚ್ಚಳ ಮಾಡಲಾಗುತ್ತದೆ. ಶೇ 12.5ರಷ್ಟು ಏರಿಕೆ ಮಾಡುವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸಂಜೆಯೊಳಗೆ ಅಂತಿಮ ನಿರ್ಧಾರ : ಮಂಗಳವಾರ ಸಂಜೆಯೊಳಗೆ ನೌಕರರು ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. 'ನೌಕರರು ಮುಷ್ಕರ ನಿಲ್ಲಿಸಿ ಮಾತುಕತೆಗೆ ಬನ್ನಿ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕರೆ ನೀಡಿದರು.

ಶೇ. 35ರಷ್ಟು ವೇತನ ಪರಿಷ್ಕರಣೆ ಸೇರಿದಂತೆ 42 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜುಲೈ 25ರಿಂದ ಸಾರಿಗೆ ಮುಷ್ಕರ ನಡೆಯುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಜನರು ಪರದಾಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah on July 26, 2016 said, He will stick to 10 percent salary hike for transport employees. Employees demanding for 35 percent salary hike.
Please Wait while comments are loading...