ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತ ಏರಿಕೆಗೆ ಶಿಫಾರಸು

ಬೆಂಗಳೂರು, ಡಿಸೆಂಬರ್ 10 : ಎಲ್ಲೆಲ್ಲೋ ವಾಹನ ಪಾರ್ಕಿಂಗ್ ಮಾಡುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡವನ್ನು ಹೆಚ್ಚಿಸಲು ಸಾರಿಗೆ ಇಲಾಖೆ ಮುಂದಾಗಿದೆ. ದಂಡಮೊತ್ತವನ್ನು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಸಾರಿಗೆ ಇಲಾಖೆ ವಾಹನ ಸಂಚಾರದ ವೇಳೆ ಮೊಬೈಲ್ ಉಪಯೋಗ, ಡಿಎಲ್‌ ಇಲ್ಲದೇ ವಾಹನ ಚಾಲನೆ, ಅತಿ ವೇಗ ಸೇರಿದಂತೆ ವಿವಿಧ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡಮೊತ್ತವನ್ನು ಹೆಚ್ಚಿಸಲಿದೆ. ಆದರೆ, ಸರ್ಕಾರದ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ.

ಮತ್ತೊಮ್ಮೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ಮೊದಲು ದಂಡ ಮೊತ್ತವನ್ನು ಸವಾರರು ನೆನಪಿಸಿಕೊಳ್ಳಬೇಕು. ಬೆಂಗಳೂರು ನಗರದಲ್ಲಿ ಮಾತ್ರ ಈ ದಂಡ ಮೊತ್ತವನ್ನು ಹೆಚ್ಚಳ ಮಾಡಲಾಗುತ್ತದೆಯೇ?, ಎಂಬುದು ಇನ್ನೂ ಅಂತಿಮವಾಗಿಲ್ಲ.

ಕರ್ನಾಟಕ ಸರ್ಕಾರ ಸಾರಿಗೆ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ಮೊದಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡುವ ಸಾಧ್ಯತೆ ಇದೆ. ಯಾವುದಕ್ಕೆ ಎಷ್ಟು ದಂಡ ಶುಲ್ಕ ಹೆಚ್ಚಳವಾಗಲಿದೆ? ಚಿತ್ರಗಳಲ್ಲಿ ನೋಡಿ.....

ಮೊಬೈಲ್ ಬಳಕೆ ಮಾಡುವುದು

ಮೊಬೈಲ್ ಬಳಕೆ ಮಾಡುವುದು

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಿದರೆ ದ್ವಿಚಕ್ರ ವಾಹನಗಳಿಗೆ 200 ರೂ., ಇತರ ವಾಹನಗಳಿಗೆ 300, 500 ರೂ. ದಂಡವಿದೆ. ಇದನ್ನು 1000 ರೂ.ಗಳಿಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ರಿಜಿಸ್ಟರ್ ಆಗದ ವಾಹನ ಓಡಿಸುವುದು

ರಿಜಿಸ್ಟರ್ ಆಗದ ವಾಹನ ಓಡಿಸುವುದು

ರಿಜಿಸ್ಟರ್ ಆಗದ ವಾಹನವನ್ನು ಓಡಿಸಿದರೆ ಮೊದಲ ಬಾರಿ 3000 ರೂ. ಎರಡನೇ ಬಾರಿ 5000 ರೂ. ದಂಡ ಹಾಕಲಾಗುತ್ತದೆ. ಇದನ್ನು ಮೊದಲ ಬಾರಿಗೆ 5000, ಎರಡನೇ ಬಾರಿಗೆ 10,000ಕ್ಕೆ ಏರಿಸುವ ಪ್ರಸ್ತಾವನೆ ಇದೆ.

ಡಿಎಲ್‌ ಇಲ್ಲದೆ ವಾಹನ ಚಾಲನೆ

ಡಿಎಲ್‌ ಇಲ್ಲದೆ ವಾಹನ ಚಾಲನೆ

ಡಿಎಲ್ ಇಲ್ಲದೇ ವಾಹನ ಓಡಿಸಿದರೆ ಬೈಕ್ 300, ಇತರ ವಾಹನಗಳು 400, 500 ರೂ. ದಂಡ ಕಟ್ಟಬೇಕು. ಎಲ್ಲಾ ವಾಹನಗಳಿಗೂ 500 ರೂ. ದಂಡ ವಿಧಿಸಲು ಪ್ರಸ್ತಾವನೆ ಸಿದ್ಧವಾಗಿದೆ.

ಅಡ್ಡಾದಿಡ್ಡಿ ವಾಹನ ನಿಲ್ಲಿಸಿದರೆ

ಅಡ್ಡಾದಿಡ್ಡಿ ವಾಹನ ನಿಲ್ಲಿಸಿದರೆ

* insurance ಇಲ್ಲದಿದ್ದಲ್ಲಿ ಈಗಿರುವ 500 ರೂ. ದಂಡವನ್ನು 1000 ರೂ.ಗೆ ಏರಿಕೆ
* ಅತಿ ವೇಗಕ್ಕೆ 300 ರೂ. ದಂಡವಿದ್ದು 400 ರೂ.ಗೆ ಏರಿಕೆ
* ಅಡ್ಡಾದಿಡ್ಡಿ ವಾಹನ ನಿಲ್ಲಿಸಿದರೆ 100 ರೂ. ದಂಡ ಕಟ್ಟಬೇಕು. ಇದನ್ನು ಮೊದಲ ಬಾರಿಗೆ 1000, 2ನೇ ಬಾರಿಗೆ 2000 ರೂ.ಗೆ ಏರಿಕೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+