SWR: ಬೆಂಗಳೂರಿನಿಂದ ಹೊರಡುವ ರೈಲು 2.20 ನಿಮಿಷ ವಿಳಂಬ, ಭಾಗಶಃ ರದ್ದಾದ ರೈಲುಗಳ ವಿವರ
Indian Railways: ರೈಲ್ವೆ ಟ್ರ್ಯಾಕ್‌ನಲ್ಲಿ ಕಾಮಗಾರಿ, ಹಳಿ ಡಬ್ಲಿಂಗ್ ಕೆಲಸ ಸೇರಿದಂತೆ ವಿವಿಧ ಎಂಜಿನಿಯರಿಂಗ್ ಕಾಮಗಾರಿಗಳು ನಡೆಯುತ್ತಿವೆ. ಈ ಸಂಬಂಧ ಕೆಲವು ರೈಲುಗಳನ್ನು ನಿಯಂತ್ರಿಸಲಾಗುತ್ತಿದೆ. ಇನ್ನು ಕರ್ನಾಟಕ ಬೆಂಗಳೂರಿನಿಂದ ತೆರಳುವ ರೈಲು ಪ್ರಯಾಣಿಕರಿಗೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಪ್ರಯಾಣ ವಿಳಂಬವಾಗುವ ಸಾಧ್ಯತೆ ಇದೆ. ಜೊತೆಗೆ ಕೆಲವು ರೈಲುಗಳ ಮರು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಭಾಗಶಃ ಸಂಚಾರ ರದ್ದಾದ ರೈಲುಗಳ ಪಟ್ಟಿ ಸಹ ಇಲ್ಲಿದೆ.
ಪುಣೆ ರೈಲ್ವೆ ವಿಭಾಗ ವ್ಯಾಪ್ತಿಯಲ್ಲಿ ಪುಣೆ-ಮೀರಜ್ ಟ್ರ್ಯಾಕ್‌ನಲ್ಲಿ ಡಬ್ಲಿಂಗ್ ಯೋಜನೆ ನಡೆಯುತ್ತಿದೆ. ಅದರ ಭಾಗವಾಗಿ ಲೂಪ್ ಲೈನ್ ಕಾರ್ಯಗಳು ಹಾಗೂ ಇತರ ಎಂಜಿನಿಯರಿಂಗ್ ಕಾಮಗಾರಿಗಳು ನಡೆಯುತ್ಇವೆ. ಹೀಗಾಗಿ ಬೆಂಗಳೂರು - ಗಾಂಧಿಧಾಮ್ ಎಕ್ಸ್ ಪ್ರೆಸ್ (16506) ಹಾಗೂ ಮೈಸೂರು-ಅಜ್ಮೀರ್ ಎಕ್ಸ್ ಪ್ರೆಸ್ ರೈಲು (16210) ನಿಯಂತ್ರಿಸಲಾಗುತ್ತಿದೆ. ಅದರ ವಿವರ ಮುಂದಿದೆ.

* 2025 ಜುಲೈ 19 ರಂದು ಬೆಂಗಳೂರಿನ KSR ರೈಲು ನಿಲ್ದಾಣದಿಂದ ಹೊರಡುವ ರೈಲು (16506) ಕೆಎಸ್‌ಆರ್ ಬೆಂಗಳೂರು - ಗಾಂಧಿಧಾಮ್ ಎಕ್ಸ್ ಪ್ರೆಸ್ ಮಾರ್ಗ ಮಧ್ಯ 2 ಗಂಟೆ 20 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ. ಇದೇ ರೈಲು 2025 ಜುಲೈ 26 ಹೊರಡುವ ಪ್ರಯಾಣದಲ್ಲಿ ಸಹ 1 ಗಂಟೆ 20 ನಿಮಿಷಗಳು ನಿಯಂತ್ರಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* 2025 ಜುಲೈ 22 ರಂದು ಮೈಸೂರಿನಿಂದ ಹೊರಡುವ (16210) ಮೈಸೂರು - ಅಜೀರ್ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯ 2 ಗಂಟೆ 20 ನಿಮಿಷಗಳು ನಿಯಂತ್ರಿಸಲಾಗುತ್ತದೆ. ಪ್ರಯಾಣಿಕರ ಗಮನಿಸುವಂತೆ ತಿಳಿಸಲಾಗಿದೆ.
ಭಾಗಶಃ ರದ್ದಾದ ರೈಲುಗಳ ವಿವರ
ಜೋಲಾರ್‌ಪೇಟೆ ಯಾರ್ಡ್‌ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ವಿವಿಧ ಕಾಮಗಾರಿ ನಡೆಯುತ್ತಿವೆ. ಹೀಗಾಗಿ ದಕ್ಷಿಣ ರೈಲ್ವೆಯು ಈ ಕೆಳಗಿನ ರೈಲು ಸೇವೆಗಳ ಭಾಗಶಃ ರದ್ದಾಗಿದೆ. ಯಾವೆಲ್ಲ ರೈಲುಗಳು ರದ್ದಾಗಿವೆ ಎಂಬ ಮಾಹಿತಿ ಇಲ್ಲಿದೆ.
* KSR ಬೆಂಗಳೂರು ಜೋಲಾರ್‌ಪೇಟೆ ಮೆಮು ರೈಲು (ಸಂಖ್ಯೆ 66550) ಜುಲೈ 19 ರಂದು ಪ್ರಾರಂಭವಾಗುವ ಪ್ರಯಾಣ ಸೋಮನಾಯಕನಪಟ್ಟಿ ಮತ್ತು ಜೋಲಾರ್‌ಪೇಟೇ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಈ ರೈಲು ಸೋಮನಾಯಕನಪಟ್ಟಿ ರೈಲು ನಿಲ್ದಾಣದಲ್ಲಿ ಅಲ್ಪಾವಧಿಗೆ ಕೊನೆಗೊಳ್ಳಲಿದೆ.
* ಜೋಲಾರ್‌ಪೇಟೆ- ಕೆಎಸ್‌ಆರ್ ಬೆಂಗಳೂರು ಮೆಮು ರೈಲು (66549) ಜುಲೈ 19 ರಂದು ಪ್ರಯಾಣ ಆರಂಭಿಸಲಿದೆ. ಈ ರೈಲು ಜೋಲಾರ್‌ಪೇಟೆ ಬದಲಿಗೆ ಸೋಮನಾಯಕನಪಟ್ಟಿಯಿಂದ ಸಂಚಾರ ಆರಂಭಿಸುತ್ತದೆ. ಜೋಲಾರ್‌ಪೇಟೆ ಹಾಗೂ ಸೋಮನಾಯಕನಪಟ್ಟಿ ಮಧ್ಯದ ಈ ರೈಲು ಸಂಚಾರ ಮಾಡುವುದಿಲ್ಲ ಎಂದು ಅಧಿಕಾರಿಗಳ ಹೇಳಿದ್ದಾರೆ.
ರೈಲಿನ ವೇಳಾಪಟ್ಟಿ ಪರಿಷ್ಕರಣೆ
SMVT ಬೆಂಗಳೂರು-ಕಾಮಾಕ್ಯ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (12551) ಪ್ರಯಾಣ ನಾಳೆ ಶನಿವಾರ ಜುಲೈ 19 ರಂದು ಆರಂಭವಾಗಲಿದೆ. ಈ ರೈಲನ್ನು SMVT ಬೆಂಗಳೂರಿನಲ್ಲಿ 120 ನಿಮಿಷ ಮರು ಹೊಂದಿಸಲಾಗಿದೆ. ಅಷ್ಟೇ ಅಲ್ಲದೇ
ನಾರಾಯಣಗಢ ಭದ್ರಕ್ ಮೂರನೇ ಮಾರ್ಗ ಸೊರೊ ಮತ್ತು ಸಬಿರಾ ನಿಲ್ದಾಣಗಳಲ್ಲಿ ಎಂಜಿನಿಯರಿಂಗ್ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಈ ಮಾರ್ಗ ನಿಲ್ದಾಣಗಳಲ್ಲಿ 60 ನಿಮಿಷಗಳ ಕಾಲ ಈ ರೈಲು ನಿಯಂತ್ರಿಸಲ್ಪಡುತ್ತದೆ ಎಂದು ಆಗ್ನೇಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications