50% Discount: ಹೆಚ್ಚಾದ ಆನ್‌ಲೈನ್ ವಂಚಕರ ಹಾವಳಿ, ದಂಡ ಪಾವತಿ ಮುನ್ನ ವಹಿಸಬೇಕಾದ ಎಚ್ಚರಿಕೆಗಳು ಇವು
ಟ್ರಾಫಿಕ್ ನಿಯಮ ಉಲ್ಲಂಘನೆಯ ದಂಡಕ್ಕೆ ಶೇ.50 ರಷ್ಟು ರಿಯಾಯಿತಿ ಘೋಷಣೆ ಬೆನ್ನಲ್ಲೆ ಸೈಬರ್ ವಂಚಕರ ಹಾವಳಿ ಅಧಿಕ. ಸೈಬರ್ ವಂಚನೆ ಹೇಗೆ, ಪೊಲೀಸರು ನೀಡಿದ ಎಚ್ಚರಿಕೆ, ಸಲಹೆಗಳು ಅನುಸರಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು, ಫೆಬ್ರವರಿ 09: ರಾಜಧಾನಿ ಬೆಂಗಳೂರು ಸಂಚಾರಿ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘನೆಯ ದಂಡಕ್ಕೆ ಶೇ.50 ರಷ್ಟು ರಿಯಾಯಿತಿ ಘೋಷಿಸಿದ್ದು, ಜನರು ದಂಡ ಕಟ್ಟಲು ಮುಗಿಬಿದ್ದಿದ್ದಾರೆ. ಇತ್ತ ಇದೇ ಅವಕಾಶದ ಲಾಭ ಪಡೆದು ಜನರಿಗೆ ವಂಚನೆ ಮಾಡಲು ಸೈಬರ್ ಕಳ್ಳರು ಮುಂದಾಗಿದ್ದು ಎಚ್ಚರಿಕೆ ವಹಿಸುವ ಅಗತ್ಯವು ಇದೆ.
ಅರ್ಧದಷ್ಟು ರಿಯಾಯಿತಿ ಘೋಷಣೆಯಿಂದಾಗಿ ಕೋಟಿಗಟ್ಟಲೇ ಹಣ ಸರ್ಕಾರದ ಭೊಕ್ಕಸ ಸೇರುತ್ತಿದೆ. ಜನರು ಇದೇ ಉಳಿತಾಯದ ಸಮಯ ಎಂದುಕೊಂಡು ಆನ್‌ಲೈನ್, ಆಫ್‌ಲೈನ್ ವಿಧಾನದಲ್ಲಿ ದಂಡ ಕಟ್ಟಲು ಮುಂದಾಗಿದ್ದಾರೆ. ಆದರೆ ಸೈಬರ್ ವಂಚಕರು ಜನರ ಹಣ ಲಪಟಾಯಿಸಲು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ್ದ ಹಣಪಾವತಿ ಲಿಂಕ್‌ಗಳನ್ನು ವಂಚನೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆಂದು ಸ್ವತಃ ಹಿರಿಯ ಪೊಲೀಸ್ ಅಧಿಕಾರಿಗಳೇ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಘೋಷಿಸಿರುವ ಈ ಟ್ರಾಫಿಕ್ ನಿಯಮ ಉಲ್ಲಂಘನೆಯ ರಿಯಾಯಿತಿ ದಂಡ ಪಾವತಿಗೆ ಫೆಬ್ರವರಿ 11 ಕಡೆಯ ದಿನವಾಗಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಜನವರಿ 27ರಂದು ದಂಡ ರಿಯಾಯಿತಿಗೆ ನೀರ್ಧಾರ ಮಾಡಿ ಸಾರಿಗೆ ಇಲಾಖೆಯಡಿ ಈ ಶೇ. 50ರಿಯಾಯಿತಿ ಘೋಷಿಸಲಾಯಿತು.

ಸೈಬರ್ ವಂಚಕರಿಂದ ಸಂದೇಶ ರವಾನೆ: ಎಚ್ಚರವಾಗಿರಿ
ಸೈಬರ್ ವಂಚಕರು ಟ್ರಾಫಿಕ್ ನಿಯಮ ಉಲ್ಲಂಘನೆ ಚಲನ್ ಕುರಿತಾದ ಸಂದೇಶಗಳನ್ನು ಜನರಿಗೆ ಕಳಿಸುತ್ತಿದ್ದಾರೆ. ಬಳಿಕ ಆನ್‌ಲೈನ್‌ನಲ್ಲಿ ದಂಡ ಕಟ್ಟಿ ಎಂದು ವೆಬ್‌ಸೈಟ್ ಲಿಂಕ್/ವಿಳಾಸವೊಂದನ್ನು ಸಂದೇಶದಲ್ಲಿ ಅಳವಡಿಸುತ್ತಿದ್ದಾರೆ. ಒಂದು ವೇಳೆ ಸಂದೇಶದಲ್ಲಿ ಲಿಂಕ್ ಕ್ಲಿಕ್ ಮಾಡಿದರೆ ಅದು ನಕಲಿ ವೆಬ್‌ಸೈಟ್ ಪ್ರವೇಶಕ್ಕೆ ದಾರಿಯಾಗುತ್ತಿದೆ ಆದ್ದರಿಂದ ದಂಡ ಪಾವತಿಸುವವರು ವಂಚಕರ ಸಂದೇಶಗಳ ಎಚ್ಚರಿಕೆ ವಹಿಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ. ಈ ಮೂಲಕ ಸಂಭವನೀಯ ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಲು ಯತ್ನಿಸುತ್ತಿದ್ದಾರೆ.

ಮೂದಲು ಅಸಲಿ ಯಾವ್ದು? ನಕಲಿ ಯಾವ್ದು? ತಿಳಿಯಿರಿ
ಸೈಬರ್ ವಂಚಕರು ಎಸ್‌ಎಂಎಸ್-ಸ್ಪೂಫಿಂಗ್ ತಂತ್ರ ಬಳಸುತ್ತಿದ್ದರಿಂದ ಚಲನ್‌ನಲ್ಲಿ ಹೆಸರು "ಸಿಟಿ ಕಂಟ್ರೋಲ್ ರೂಮ್" ಅಥವಾ 'ಇ-ಚಲನ್ ರಿಕವರಿ' ಎಂದು ಪ್ರದರ್ಶನವಾಗುತ್ತಿದೆ. ಹೀಗಾಗಿ ಜನರಿಗೆ ಯಾವುದು ಅಸಲಿ? ಯಾವುದು ನಕಲಿ? ಎಂದು ತಿಳಿಯದಂತಾಗಿದೆ. ಆದ್ದರಿಂದ ಪಾವತಿಗೂ ಮುನ್ನ ಇದು ಬಿಟಿಪಿ ನಿಜವಾದ ಚಲನ್ನಾ ಎಂದು ಪರಿಶೀಲಿಸಿಕೊಳ್ಳಿ. ಮುಖ್ಯವಾಗಿ ಲಿಂಕ್ ನಲ್ಲಿ ಎಟಿಎಂ ಇನ್ನಿತರ ಕಾರ್ಡ್ ಸಂಖ್ಯೆ, ಓಟಿಪಿ, ಪಾಸ್‌ವರ್ಡ್ ಮತ್ತು ಬ್ಯಾಂಕ್ ಖಾತೆ ವಿವರ ನಮೂದಿಸಬೇಡಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ದಂಡ ಪಾವತಿಗೆ ಲಿಂಕ್ ಪ್ರಕಟಿಸಿದ್ದಾರೆ. ವ್ಯಕ್ತಿ ದಂಡದ ಬಗ್ಗೆ ಸಂದೇಶ ಸ್ವೀಕರಿಸಿದ ಬಳಿಕ ಟ್ರಾಫಿಕ್ ಪೋಲೀಸ್ ವೆಬ್‌ಸೈಟ್‌ನಲ್ಲಿ ಎರಡು ಬಾರಿ ಪರಿಶೀಲಿಸಲು ಅವಕಾಶ ಇದೆ ಎಂದು ಎಂದು ಪಶ್ಚಿಮ ವಿಭಾಗದ ಉಪ ಪೊಲೀಸ್ (ಸಂಚಾರ) ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದರು.

19 ನಗರಗಳಲ್ಲೇ ಬೆಂಗಳೂರಲ್ಲಿ ಅತೀ ಹೆಚ್ಚ ಸೈಬರ್ ವಂಚನೆ
ಪೊಲೀಸ್ ನಿಯಂತ್ರಣ ಕೊಠಡಿ (Police Control Room) ಕಳುಹಿಸುವ ಸಂದೇಶಗಳು ಸಹ ಲಿಂಕ್ ಹೊಂದಿವೆ. ಇಂತಹ ಸಂದೇಶ ಸ್ವೀಕರಿಸಿದಲ್ಲಿ ಲಿಂಕ್ ಅನುಮಾನಾಸ್ಪದವೆಂದು ಗೊತ್ತಾದರೆ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ. ಪಾವತಿಗೂ ಮುನ್ನ ಎಚ್ಚರಿಕೆಗಳನ್ನು ಸ್ಪಷ್ಟವಾಗಿ ಓದಿಕೊಳ್ಳಿ. ಏನಾದರೂ ಸಂದೇಹಗಳಿದ್ದಲ್ಲಿ, ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾರ್ಗದರ್ಶನ ಪಡೆಯಿರಿ ಎಂದು ಅವರು ತಿಳಿಸಿದರು.
NCRB ದತ್ತಾಂಶಗಳ ಪ್ರಕಾರ, ದೇಶದಲ್ಲೇ ಅತೀ ಹೆಚ್ಚು ಸೈಬರ್ ಅಪರಾಧ ಕೇಸುಗಳು ಬೆಂಗಳೂರಲ್ಲಿ ದಾಖಲಾಗಿವೆ. ಇದು ಒಟ್ಟು 19 ಮೆಟ್ರೋಪಾಲಿಟನ್ ನಗರಗಳಲ್ಲೇ ಅತೀ ಹೆಚ್ಚು ಎನ್ನಬಹದು. 2021ರಲ್ಲಿ 6,423 ಪ್ರಕರಣ ಬೆಳಕಿಗೆ ಬಂದಿವೆ. ಒಟ್ಟು ಎಲ್ಲ 19 ಮೆಟ್ರೋಪಾಲಿಟನ್ ನಗರಗಳಲ್ಲಿ ಇದುವರೆಗೆ 37.5 ಪ್ರತಿಶತದಷ್ಟು ಸೈಬರ್ ಅಪರಾಧ ಕೇಸ್ ದಾಖಲಾಗಿವೆ.

1,471,593 ಪ್ರಕರಣಗಳು ವಿಲೇವಾರಿ
ಇದುವರೆಗೂ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಟ್ರಾಫಿಕ್ ದಂಡ ಸಂಗ್ರಹಣೆ ಮುಂದುವರಿದೆ. ಕೇಳವ ಬೆಂಗಳೂರಲ್ಲೇ ಮಂಗಳವಾರದವರೆಗೆ 314,285 ಸಂಚಾರ ನಿಯಮ ಉಲ್ಲಂಘನೆ ಕೇಸುಗಳಿಂದ ಸುಮಾರು ₹41.20 ಕೋಟಿ ಸಂಗ್ರಹವಾಗಿದೆ.
ಒಟ್ಟು ಇದುವರೆಗೆ 1,471,593 ಪ್ರಕರಣಗಳು ವಿಲೇವಾರಿಯಾಗಿವೆ. ಇಂತಹ ಸಂದರ್ಭದಲ್ಲಿ ಆನ್‌ಲೈನ್ ವಂಚಕರ ಹಾವಳಿ ಎದ್ದಿರುವುದು ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಿಮಿಸುವ ಸಾಧ್ಯತೆ ಇದೆ. ಜನರು ಎಚ್ಚರಿಕೆ ವಹಿಸಬೇಕಿದೆ.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications