Traffic Police; ಸವಾರರೇ ದಂಡ ಕಟ್ಟುವ ಮುನ್ನ ಇದನ್ನು ತಿಳಿಯಿರಿ
ಬೆಂಗಳೂರು, ಡಿಸೆಂಬರ್ 18; ವಾಹನ ಸವಾರರು ಸಂಚಾರಿ ನಿಯಮ ಪಾಲಿಸುವಂತೆ ಸಂಚಾರಿ ಪೊಲೀಸರು ಸದಾ ಜಾಗೃತಿ ಮೂಡಿಸುತ್ತಾರೆ. ನಿಯಮ ಉಲ್ಲಂಘನೆ ಮಾಡಿದರೆ ದಂಡ ಪ್ರಯೋಗ ಮಾಡುತ್ತಾರೆ. ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಸದ್ಯ 2 ಭಾಗವಾಗಿ ವಿಭಾಗಿಸಲಾಗಿದೆ.
ಸೀಮಾಂತ್ ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಸಂಚಾರ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು. ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯು ಮೋಟಾರ್ ವಾಹನ ನಿಯಮ/ ಕಾಯ್ದೆ ಅಡಿಯಲ್ಲಿ ದಾಖಲಿಸುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ವರ್ಗೀಕರಿಸಿರುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಸುತ್ತೋಲೆಯಲ್ಲಿ ರಾಜ್ಯದ ಎಲ್ಲಾ ನಗರ/ ಜಿಲ್ಲಾ ಪೊಲೀಸ್ ಘಟಕಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪೊಲೀಸರು ಮತ್ತು ಸಂಚಾರ ಪೊಲೀಸರು ಒಳಗೊಂಡಂತೆ ತಮ್ಮ ಕರ್ತವ್ಯಗಳಲ್ಲಿ ವಾಹನ ಚಾಲಕರು/ ಸವಾರರು ಸಂಚಾರಿ ನಿಯಮ ಪಾಲಿಸುವಂತೆ ಜಾರಿಗೊಳಿಸುವುದು ಪ್ರಮುಖ ಜವಬ್ದಾರಿಯುತ ಕರ್ತವ್ಯವಾಗಿರುತ್ತದೆ.
ಈ ಜವಾಬ್ದಾರಿಯು ವಾಹನ ಚಾಲಕರು/ ಸವಾರರು ಮಾಡುವ ಮೋಟಾರ್ ವಾಹನ ನಿಯಮ ಉಲ್ಲಂಘನೆಗಳು ಮತ್ತು ಇದರಿಂದ ಉಂಟಾಗುವ ಸಂಚಾರ ಸಮಸ್ಯೆಗಳನ್ನು ತಡೆಗಟ್ಟಲು ಸಂಚಾರ ನಿಯಮಾವಳಿ ಹಾಗೂ ಕಾಯ್ದೆಯನ್ನು ಜಾರಿಗೊಳಿಸುವುದು ಹಾಗೂ ಇದನ್ನು ಸಮರ್ಪಕವಾಗಿ ನಿರ್ವಹಿಸಲು ಅನುಸರಿಸುವ ಪದ್ಧತಿ ಮತ್ತು ಉದ್ದೇಶವನ್ನು ಅಧಿಕಾರಿಗಳು ಅರಿತಿರುವುದು ಒಳ್ಳೆಯದು ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ನಗರ ಮತ್ತು ಜಿಲ್ಲಾ ಘಟಕಗಳಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಿ ಸಾಗಲು ಹಾಗೂ ಅಪಘಾತಗಳ ನಿಯಂತ್ರಣ ಮಾಡಲು ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜೊತೆಗೆ ನಿಯಮಾವಳಿ ಹಾಗೂ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದಾಗಲೇ ಅಪಘಾತಗಳ ನಿಯಂತ್ರಣಕ್ಕೆ ಕಡಿವಾಣ ಹಾಕಲು ಸಾಧ್ಯವಾಗುವುದರ ಜೊತೆಗೆ ಸಹ ಸುಗಮಗೊಳಿಸಬಹುದಾಗಿದೆ. ವಾಹನ ನಿಯಮ ಜಾರಿ ವೇಳೆಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಚಾಲಕರು/ ಸವಾರರ ವಿರುದ್ಧ ಮೋಟಾರ್ ವಾಹನ ನಿಯಮ/ ಕಾಯ್ದೆ ಅಡಿಯಲ್ಲಿ ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಉಲ್ಲಂಘನೆಗಳಲ್ಲಿ ಗುರುತರ ಉಲ್ಲಂಘನೆಗಳು ಯಾವುದು? ಎಂಬುದರ ಬಗ್ಗೆ ಸರಿಯಾದ ಅರಿವು ಮೂಡಿಸಿಕೊಂಡು ಮತ್ತು ಕ್ರಮಬದ್ಧ ವಿಧಾನಗಳ ಸೂಕ್ತ ಪಾಲನೆ ಮಾಡಿದಲ್ಲಿ ಮಾತ್ರ ನಿಯಮ ಜಾರಿಯ ಉದ್ದೇಶ ಸಫಲವಾಗುವುದು. ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ದಾಖಲಿಸುತ್ತಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ಬಗ್ಗೆ ವಿಸ್ತಾರವಾಗಿ ಅರಿತುಕೊಳ್ಳುವ ಸಲುವಾಗಿ ಈ ಉಲ್ಲಂಘನೆಗಳನ್ನು 2 ವರ್ಗಗಳಲ್ಲಿ ವಿಂಗಡಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ವರ್ಗ-1 ರ ಅಡಿಯಲ್ಲಿನ ಉಲ್ಲಂಘನೆಗಳು: ಈ ಉಲ್ಲಂಘನೆಗಳು ಗುರುತರ ಉಲ್ಲಂಘನೆಗಳಾಗಿರುತ್ತದೆ. ಮದ್ಯಪಾನ ಮಾಡಿ ಚಾಲನೆ, ಅತೀ ವೇಗದ ಚಾಲನೆ, ಅಜಾಗರೂಕ ಚಾಲನೆ, ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು, ಜಂಪಿಂಗ್ ಟ್ರಾಫಿಕ್ ಸಿಗ್ನಲ್, ಫ್ರೀ ವಿಲ್ಹಿಂಗ್, ರೇಸಿಂಗ್ ಮತ್ತು ವೇಗದ ಪ್ರಯೋಗ, ಶಿಸ್ತು ಪಥ ಚಾಲನೆ ಮಾಡದೇ ಇರುವುದು
ಜಿಗ್‌ಜಾಗ್ (ಅಡ್ಡಾದಿಡ್ಡಿ) ವಾಹನ ಚಾಲನೆ, ಹೆದ್ದಾರಿಗಳಲ್ಲಿ ಅಡ್ಡಾದಿಡ್ಡಿ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನಗಳನ್ನು ನಿಲ್ಲಿಸುವುದು. ವಾಹನಗಳನ್ನು ತಪ್ಪು ಮತ್ತು ಅಪಾಯಕಾರಿ ರೀತಿಯಲ್ಲಿ ನಿಲ್ಲಿಸುವುದು. ಇಂಟರ್ ಸೆಕ್ಷನ್‌ನಲ್ಲಿ ವಾಹನ ನಿಲುಗಡೆ, ಬಿ.ಎಂ.ಟಿ.ಸಿ ನಿಲ್ದಾಣದಲ್ಲಿ ಇತರೆ ವಾಹನಗಳ ನಿಲುಗಡೆ ಮಾಡುವುದು ಶಿರಸ್ತ್ರಾಣ (ಹೆಲ್ಮೆಟ್) ಧರಿಸದೆ ದ್ವಿಚಕ್ರ ವಾಹನ ಚಾಲನೆ, ದ್ವಿಚಕ್ರ ವಾಹನದಲ್ಲಿ ಸವಾರರು/ ಹಿಂದಿನ ಸವಾರರ ಶಿರಸ್ತ್ರಾಣ (ಹೆಲ್ಮೆಟ್) ಧರಿಸದಿರುವುದು, ಸುರಕ್ಷತೆಯ ಸೀಟ್ ಬೆಲ್ಟ್ ಧರಿಸದಿರುವುದು.
ಎಡಭಾಗದಿಂದ ಓವರ್ ಟೇಕ್ ಮಾಡುವುದು, ಪ್ರಯಾಣಿಕರನ್ನು ಅಪಾಯಕರ ರೀತಿಯಲ್ಲಿ ಕರೆದೊಯ್ಯುವುದು, ವಾಹನಗಳ ಮೇಲ್ಛಾವಣಿ (Roof top) ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು, ಪ್ರಯಾಣಿಕರನ್ನು ಗೂಡ್ಸ್ ವಾಹನಗಳಲ್ಲಿ ಕರೆದೊಯ್ಯುವುದು, ಮಿತಿಗಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ಯುವುದು, ಮಿತಿಗಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಶಾಲಾ ಬಸ್ ವ್ಯಾನ್‌ಗಳಲ್ಲಿ ಕರೆದೊಯ್ಯುವುದು, ಸಾರಿಗೆ ವಾಹನಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದು, ಟ್ರಿಪಲ್ ರೈಡಿಂಗ್, ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡುವುದು, ಪ್ರವೇಶ ನಿಷಿದ್ಧ
ವರ್ಗ-2 ರ ಅಡಿಯಲ್ಲಿನ ಉಲ್ಲಂಘನೆಗಳು: ಹೈಬೀಮ್ ಲೈಟ್‌ಗಳನ್ನು ವಾಹನಗಳಲ್ಲಿ ಬಳಸುವುದು, ತೀಕ್ಷ್ಣ ಬಿರುವ ಹೆಡ್‌ಲೈಟ್‌ಗಳನ್ನು ಬಳಸುವುದು, ವಾಹನ ಚಾಲನೆ ಮಾಡುವಾಗ ಕರ್ಕಶ ಹಾರ್ನ್ ಅನ್ನು ಬಳಸುವುದು, ನಿಷಿದ್ಧ ಪ್ರದೇಶಗಳಲ್ಲಿ ಹಾರ್ನ್ ಬಳಸುವುದು, ದೋಷಪೂರಿತ ಸೈಲನ್ಸರ್ ಅನ್ನು ಬಳಸುವುದು. ವಾಹನಗಳಲ್ಲಿ ಉದ್ದವಾದ ವಸ್ತು (Lengthy Material)ಗಳನ್ನು ಒಯ್ಯುವುದು, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಮಾಡುವುದು.
ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡುವುದು, ರಹದಾರಿ (ಪರ್ಮಿಟ್) ಇಲ್ಲದೇ ವಾಹನ ಚಾಲನೆ ಮಾಡುವುದು, ಆಟೋರಿಕ್ಷ ಚಾಲಕರು ನಿಗದಿಪಡಿಸಿದ ಬಾಡಿಗೆ ದರಕ್ಕಿಂತ ಹೆಚ್ಚಿನ ದರವನ್ನು ಒತ್ತಾಯಿಸುವುದು, ಆಟೋರಿಕ್ಷ ಚಾಲಕರು ಬಾಡಿಗೆಗೆ ಕರೆದೊಯ್ಯಲು ನಿರಾಕರಿಸುವುದು, ಡಿಸ್‌ಪ್ಲೇ ಕಾರ್ಡ್ ಇಲ್ಲದೇ ವಾಹನ ಚಲಾಯಿಸುವುದು, ವಾಹನಗಳ ಗ್ಲಾಸ್‌ಗಳಿಗೆ ಬ್ಲಾಕ್ ಫಿಲ್ಡ್ ಬಳಕೆ ಮಾಡುವುದು. ಡಿಫೆಕ್ಟಿವ್ ರಿಜಿಸ್ಟರ್ ಪ್ಲೇಟ್, ವಾಹನ ಚಾಲಕರು ಸಮವಸ್ತ್ರ ಧರಿಸದಿರುವುದು, ಇನ್ಸೂರೆನ್ಸ್ ಪ್ರಮಾಣ ಪತ್ರವನ್ನು ಹೊಂದದಿರುವುದು, ಪರ್ಮಿಟ್ ಅನ್ನು ಉಲ್ಲಂಘಿಸುವುದು, ಹೆಚ್.ಟಿ.ವಿ (ಭಾರೀ) ವಾಹನಗಳ ಪ್ರವೇಶವನ್ನು ಉಲ್ಲಂಘಿಸುವುದು, ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿರುವುದು, ಇತರೆ ಪ್ರಕರಣಗಳು.
ಈ ರೀತಿ ವಿಂಗಡಿಸಿರುವ ವರ್ಗಾವಾರು ವಾಹನ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ಅರಿತು ನಿಯಮ ಜಾರಿ ವೇಳೆ ಪ್ರಕರಣಗಳನ್ನು ದಾಖಲಿಸುವಾಗ ವರ್ಗ-1 ರಲ್ಲಿ ಕಾಣಿಸಿರುವ ಉಲ್ಲಂಘನೆಗಳಿಗೆ ಪ್ರಥಮ ಆದ್ಯತೆ ನೀಡುವುದು. ಈ ಪ್ರಕರಣಗಳನ್ನು ದಾಖಲಿಸುವಾಗ ವರ್ಗ-2ರಲ್ಲಿನ ಉಲ್ಲಂಘನೆಗಳ ಕಡೆಗೂ ಗಮನ ಹರಿಸಿ ನಿಯಮಗಳನ್ನು ಯಶಸ್ವಿಯಾಗಿ ಪರಿಣಾಮಕಾರಿಗೊಳಿಸಲು ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿರುತ್ತದೆ ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications