Get Updates
Get notified of breaking news, exclusive insights, and must-see stories!

Vande Bharat Express: ಕರ್ನಾಟಕದ ವಂದೇ ಭಾರತ್ ರೈಲುಗಳ ಪಟ್ಟಿ, ಕಾರ್ಯಾಚರಣೆ ವಿವರ

Vande Bharat Express Trains: ಭಾರತೀಯ ರೈಲ್ವೆ ಜಾಲದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು (Vande Bharat Express Train) ಕ್ರಾಂತಿ ಉಂಟು ಮಾಡಿವೆ. ದೇಶಾದ್ಯಂತ ಒಟ್ಟು 150 ವಂದೇ ಭಾರತ್ ರೈಲುಗಳು ಸೇವೆ ನೀಡುತ್ತಿವೆ. ಇದರಲ್ಲಿ ಕರ್ನಾಟಕಕ್ಕೂ ಈ ರೈಲುಗಳ ಸಂಚಾರ ಸಂಖ್ಯೆ ಎರಡಂಕಿ ದಾಟಿದೆ. ಕರ್ನಾಟಕದ ವಿವಿಧ ಭಾಗಗಳಿಗೂ ಈ ಆರಾಮದಾಯಕ, ವೇಗದ ಸಾರಿಗೆ ಲಭ್ಯವಾಗಿದೆ. ಇನ್ನಷ್ಟು ಹೊಸ ರೈಲುಗಳು, ಇತರ ಮಾರ್ಗಗಳಲ್ಲಿ ಕಾರ್ಯಾಚರಣೆ ಆರಂಭಿಸಬೇಕಿದೆ.

2025 ರ ಅಕ್ಟೋಬರ್ ಹೊತ್ತಿಗೆ, ಕರ್ನಾಟಕ ರಾಜ್ಯದಲ್ಲಿ ವಿವಿಧ ಮಾರ್ಗಗಳಲ್ಲಿ ಹಾಲಿ 11 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸೇವೆಗಳ ಲಭ್ಯವಿದೆ. ಈ ರೈಲುಗಳು ರಾಜ್ಯದ ಒಳಗೆ ಮತ್ತು ಹೊರಗಿನ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಈ ಮಾರ್ಗಗಳು ಬೆಂಗಳೂರು, ಮೈಸೂರು, ಕಲಬುರಗಿ, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಚೆನ್ನೈ, ಕೊಯಮತ್ತೂರು, ಮಧುರೈ, ಹೈದರಾಬಾದ್ ಮತ್ತು ಪುಣೆಗಳನ್ನು ಸಂಪರ್ಕಿಸುತ್ತವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ರಾಜ್ಯದಲ್ಲಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ, ಮಾರ್ಗವಾರು ವಿವರ ಇಲ್ಲಿದೆ.

Total List of Vande Bharat Express Trains in Karnataka Routes details

ಕರ್ನಾಟಕದಲ್ಲಿ ವಂದೇ ಭಾರತ್ ರೈಲಿನ ಪಟ್ಟಿ

ಬೆಂಗಳೂರಿನಿಂದ ಬೆಳಗಾವಿ ವಂದೇ ಭಾರತ್ ರೈಲು: 2025 ರ ಆಗಸ್ಟ್ ತಿಂಗಳಲ್ಲಿ ಈ ರೈಲು ಸಂಚಾರವನ್ನು ಉದ್ಘಾಟಿಸಲಾಯಿತು. ಈ ಹೊಸ ವಂದೇ ಭಾರತ್ ಸೇವೆಯು ರಾಜ್ಯ ರಾಜಧಾನಿಯನ್ನು ಉತ್ತರ ನಗರವಾದ ಬೆಳಗಾವಿಯೊಂದಿಗೆ ಸಂಪರ್ಕಿಸುತ್ತದೆ. ತುಮಕೂರು, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳು ಹಾಗೂ ಅಕ್ಕಪ್ಪಕ್ಕ ಭಾಗದ ಜನರಿಗೆ ಅನುಕೂಲವಾಗಿದೆ.

* ಬೆಂಗಳೂರಿನಿಂದ ಧಾರವಾಡ: ವಂದೇ ಭಾರತ್ ಎಕ್ಸ್‌ಪ್ರೆಸ್, ಇದು ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್ ಅನ್ನು ಧಾರವಾಡದೊಂದಿಗೆ ಸಂಪರ್ಕಿಸುತ್ತದೆ. ಯಶವಂತಪುರ, ತುಮಕೂರು, ದಾವಣಗೆರೆ, ಹಾವೇರಿ ಮತ್ತು ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ.

* SMVT ಬೆಂಗಳೂರ- ಕಲಬುರಗಿ ವಂದೇ ಭಾರತ್ ರೈಲು: ಈ ರೈಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು ಕಲಬುರಗಿಗೆ ಸಂಪರ್ಕಿಸುತ್ತದೆ, ಉತ್ತರ ಕರ್ನಾಟಕದ ಗಡಿಭಾಗದ ಜಿಲ್ಲೆಗೂ ಸಂಪರ್ಕ ಸೇತುವೆ ಆಗಿದೆ.

* ಯಶವಂತಪುರ-ಕಾಚೆಗುಡ (ಹೈದರಾಬಾದ್) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು: ಈ ಮಾರ್ಗವು ಬೆಂಗಳೂರಿನ ಯಶವಂತಪುರ ಟರ್ಮಿನಲ್ ಅನ್ನು ಹೈದರಾಬಾದ್‌ನ ಕಾಚೆಗುಡವರೆಗೆ ಸೇವೆ ನೀಡುತ್ತದೆ. ಕರ್ನಾಟಕದಿಂದ ತೆರಳುವವರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಇದಾಗಿದೆ.

* ಬೆಂಗಳೂರು ಕಂಟೋನ್ಮೆಂಟ್‌ನಿಂದ ಕೊಯಮತ್ತೂರು ವಂದೇ ಭಾರತ್ ರೈಲು: ಇದು ಬೆಂಗಳೂರು ಕಂಟೋನ್ಮೆಂಟ್ ಅನ್ನು ಕೊಯಮತ್ತೂರು ಜಂಕ್ಷನ್‌ಗೆ ಸೇವೆ ನೀಡುತ್ತದೆ.

* ಬೆಂಗಳೂರು ಕಂಟೋನ್ಮೆಂಟ್‌ನಿಂದ ಮಧುರೈ ವಂದೇ ಭಾರತ್ ಎಕ್ಸ್‌ಪ್ರೆಸ್‌: ಈ ರೈಲು ಬೆಂಗಳೂರು ಕಂಟೋನ್ಮೆಂಟ್ ಅನ್ನು ದೇವಾಲಯ ನಗರಿ ಮಧುರೈನೊಂದಿಗೆ ಸಂಪರ್ಕಿಸುತ್ತದೆ. ಕರ್ನಾಟಕದಿಂದ ತಮಿಳುನಾಡು ಹಾಗೂ ಪ್ರವಾಸಿ ತಾಣಗಳಿಗೆ ತೆರಳುವವರಿಗೆ ಉತ್ತಮ ಸಾರಿಗೆಯಾಗಿದೆ.

* ಮೈಸೂರು-ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್: ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಇದಾಗಿದೆ. ಇದು ಸಾಂಸ್ಕೃತಿಕ ನಗರಿ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಚೆನ್ನೈಗೆ ಸಂಪರ್ಕ ಕಲ್ಪಿಸುತ್ತದೆ. ಕೆ.ಎಸ್‌.ಆರ್‌ ಬೆಂಗಳೂರು ಸೇರಿ ಇತರ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ.

* ಹುಬ್ಬಳ್ಳಿ- ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್: ಈ ರೈಲು ವಾರದಲ್ಲಿ ಮೂರು ಬಾರಿ ಸಂಚಾರ ಮಾಡುತ್ತದೆ. ಹುಬ್ಬಳ್ಳಿಯಿಂದ ಪುಣೆಗೆ ಉತ್ತಮ ಸಾರಿಗೆ ಸೇತುವೆಯಾಗಿದೆ. ಕರ್ನಾಟಕದಿಂದ (ಮಹಾರಾಷ್ಟ್ರ) ಅಂತರರಾಜ್ಯ ರೈಲು ಸೇವೆ ಒದಗಿಸುವ ಮತ್ತೊಂದು ರೈಲಾಗಿದೆ.

* ಮಂಗಳೂರಿನಿಂದ ಮಡಗಾಂವ್ (ಗೋವಾ) ವಂದೇ ಭಾರತ್ ಎಕ್ಸ್‌ಪ್ರೆಸ್: ಈ ರೈಲು ಮಂಗಳೂರು ಸೆಂಟ್ರಲ್ ಅನ್ನು ಗೋವಾದ ಮಡಗಾಂವ್‌ನೊಂದಿಗೆ ಸಂಪರ್ಕಿಸುತ್ತದೆ. ಗೋವಾ ಪ್ರವಾಸಿಗರಿಗೆ, ಕೇರಳ ಪ್ರವಾಸಿಗರುಗೆ ಈ ರೈಲು ಸೇವೆ ಸಹಕಾರಿಯಾಗಿದೆ.

* ಮಂಗಳೂರಿನಿಂದ ತಿರುವನಂತಪುರಂ: ಮಂಗಳೂರು ಸೆಂಟ್ರಲ್ ಅನ್ನು ಕೇರಳದ ರಾಜಧಾನಿ ತಿರುವನಂತಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಈ ರೈಲುಗಳ ಪೈಕಿ ಕೆಲವು ವಂದೇ ಭಾರತ್ ರೈಲುಗಳು ರಾಜ್ಯದ ಒಳಗೆ ಸೇವೆ ನೀಡುತ್ತವೆ. ಇನ್ನೂ ಕೆಲವು ಕರ್ನಾಟಕದಿಂದ ಬೇರೆ ಬೇರೆ ರಾಜ್ಯಗಳಲ್ಲಿ ಸೇವೆ ಕೊನೆಗೊಳಿಸುತ್ತವೆ. ಬೆಂಗಳೂರು, ಯಶವಂತಪುರ ಮತ್ತು ಮೈಸೂರಿನಂತಹ ಪ್ರಮುಖ ನಗರಗಳಿಗೆ ಸೇವೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ IRCTC ಆಪ್ ನೋಡಬಹುದು. https://indianrailways.gov.in/ ಅಧಿಕೃತ ವೆಬ್‌ಸೈಟ್‌ಗೂ ಭೇಟಿ ನೀಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+