Tomato Price: ಟೊಮೆಟೊ ಬೆಲೆ ಮತ್ತೆ ಕುಸಿತ, ಇಂದಿನ ಬೆಲೆ ಎಷ್ಟು?

ಟೊಮೆಟೊ ಅಂದ್ರೆ ಕೆಂಪು ಚಿನ್ನ ಅನ್ನೋ ಮಾತು ಕೇಳಿಬರುತ್ತೆ. ಕಳೆದ ಕೆಲ ವಾರದಿಂದ ಟೊಮೆಟೊಗೆ ನಿಜವಾಗಿಯೂ ಚಿನ್ನದ ಬೆಲೆ ಬಂದಿತ್ತು. ಹೀಗಾಗಿಯೇ ರೈತರು ಜೀವನದಲ್ಲೇ ಕಾಣದಷ್ಟು ಹಣ ಗಳಿಸಿದ್ದರು. ಹೀಗೆ ದಿನದಿಂದ ದಿನಕ್ಕೆ ಟೊಮೆಟೊ ಬೆಲೆ ಏರುತ್ತಿರುವುದು ಕೃಷಿಕರಿಗೂ ಖುಷಿ ಕೊಟ್ಟಿತ್ತು, ಆದ್ರೆ ಈ ಖುಷಿಯೆಲ್ಲಾ ಮಾಯವಾಗಿದೆ. ಯಾಕೆ ಅಂದ್ರಾ? ಟೊಮೆಟೊ ಬೆಲೆ ಕುಸಿತ ಇದ್ದಕ್ಕೆ ಪ್ರಮುಖ ಕಾರಣ. ಹಾಗಾದರೆ ಟೊಮೆಟೊ ಈಗ ಎಷ್ಟಕ್ಕೆ ಮಾರಾಟವಾಗುತ್ತಿದೆ? ಮುಂದೆ ಓದಿ.

ಟೊಮೆಟೊ ಬೆಳೆ ಮಾರುಕಟ್ಟೆಗೆ ಬರುವುದು ತಡವಾಗಿದ್ದ ಕಾರಣ & ಪ್ರಾಕೃತಿಕ ವಿಕೋಪ ಹಿನ್ನೆಲೆ ಟೊಮೆಟೊ ಬೆಲೆ ಗಗನಕ್ಕೆ ಜಿಗಿದಿತ್ತು. ಆದರೆ ಈಗ ಪರಿಸ್ಥಿತಿ ಸರಿಯಾಗುತ್ತಿದೆ. ಈ ಸಂದರ್ಭದಲ್ಲೇ ಬೇರೆ ಬೇರೆ ಭಾಗಗಳಿಂದ ಬರುತ್ತಿರುವ ಟೊಮೆಟೊ ಕೂಡ ಮಾರುಕಟ್ಟೆಗೆ ತಲುಪುತ್ತಿದೆ. ಈ ಕಾರಣಕ್ಕೆ ಭಾರಿ ಬೆಲೆಗೆ ಮಾರಾಟವಾಗುತ್ತಿದ್ದ ಟೊಮೆಟೊ ಇದೀಗ ಹಿಂದೆ ಉಳಿದಿದೆ. ದಿನದಿಂದ ದಿನಕ್ಕೆ ಟೊಮೆಟೊ ಬೆಲೆ ಕುಸಿಯುತ್ತಿದೆ. ನಿನ್ನೆ ಕೂಡ ಟೊಮೆಟೊ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿತ್ತು, ಇಂದು ಕೂಡ ತನ್ನ ಕುಸಿತವನ್ನು ಮುಂದುವರಿಸಿದೆ ಕೆಂಪು ಚಿನ್ನ. ದಿಢೀರ್ 1200 ರೂಪಾಯಿಗೆ ಬೆಲೆ ಕುಸಿತ ಕಂಡಿದೆ.

Tomato price getting low day by day in Karnataka

ಶಾಕ್ ಕೊಡುತ್ತಿದೆ ಟೊಮೆಟೊ ಬೆಲೆ

ಅಂದಹಾಗೆ 15 ಕೆಜಿ ತೂಕದ ಬಾಕ್ಸ್‌ಗೆ ಕಳೆದ ಕೆಲವು ವಾರದಿಂದ 2500 ಬೆಲೆ ಇತ್ತು. ಇನ್ನೇನು 3000 ರೂಪಾಯಿಗು ಬೆಲೆ ಮುಟ್ಟಲಿದೆ ಅಂತಾ ರೈತರು ಕಾಯುತ್ತಿದ್ದರು. ಆದ್ರೆ ಇದೀಗ ದಿಢೀರ್ ಬೆಲೆ ಕುಸಿತ ಕಾಣುತ್ತಿದ್ದು, ಟೊಮೆಟೊ ಬೆಳೆದ ರೈತರು ಕಂಗಾಲಾಗಿ ಹೋಗಿದ್ದಾರೆ. ಕೆಲ ದಿನದ ಹಿಂದೆ ಟೊಮೆಟೊ 15 ಕೆಜಿ ತೂಕದ ಬಾಕ್ಸ್‌ಗೆ ₹2500ರಿಂದ ₹2600 ಬೆಲೆ ಇತ್ತು. ಆದ್ರೆ ನಿನ್ನೆಯ ಗರಿಷ್ಠ ಬೆಲೆ ₹1550ಕ್ಕೆ ಕುಸಿತ ಕಂಡಿತ್ತು. ಈ ಆಘಾತದಿಂದ ರೈತರು ಹೊರಬರುವ ಮೊದಲೇ ಮತ್ತೆ ಇಂದು ಕೂಡ ಟೊಮೆಟೊ ಬೆಲೆ ಕುಸಿತ ಕಂಡಿದೆ. ನಿನ್ನೆ 1550 ರೂಪಾಯಿ ಇದ್ದ ಟೊಮೆಟೊ ಬೆಲೆ ಇಂದು 1200 ರೂಪಾಯಿಗೆ ದಿಢೀರ್ ಕುಸಿದಿದೆ.

ಬೇರೆ ಬೇರೆ ಭಾಗದಿಂದ ಟೊಮೆಟೊ ಎಂಟ್ರಿ!

ಹೀಗೆ ದಿಢೀರ್ ಟೊಮೆಟೊ ಬೆಲೆ ಕುಸಿತ ಕಾಣಲು ಹಲವು ಕಾರಣ ಇದೆ. ಕೋಲಾರದಲ್ಲಿನ ಎಪಿಎಸಿಂ ಮಾರುಕಟ್ಟೆಗೆ ಚಿತ್ರದುರ್ಗದ ಚಳ್ಳಕೆರೆ ಸೇರಿ ಮಂಡ್ಯ ಮತ್ತು ನೆರೆ ರಾಜ್ಯ ಆಂಧ್ರದಿಂದ ಟೊಮೆಟೊ ಬರುತ್ತಿದೆ. ಹೀಗಾಗಿ ಬೆಲೆ ಕುಸಿದಿದೆ ಎಂದು ಕೂಡ ಹೇಳಲಾಗ್ತಿದೆ. ಮತ್ತೊಂದ್ಕಡೆ ಬೇಡಿಕೆ ಕುಸಿತ ಕೂಡ ಇದಕ್ಕೆ ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಇಷ್ಟೆಲ್ಲದರ ನಡುವೆ ರೈತರು ಕೂಡ ಕಂಗಾಲಾಗಿ ಹೋಗಿದ್ದಾರೆ. ಭಾರಿ ಬೆಲೆ ಬಂದ ಹಿನ್ನೆಲೆ ಹಲವೆಡೆ ರೈತರು ಹೊಸದಾಗಿ ಟೊಮೆಟೊ ಬೆಳೆ ಹಾಕಿದ್ದರು. ಆದರೆ ಈಗ ಪರಿಸ್ಥಿತಿ ಉಲ್ಟಾ ಆಗುವ ಮುನ್ಸೂಚನೆ ಕಾಣುತ್ತಿದೆ.

Tomato price getting low day by day in Karnataka

ಸಂಸತ್ ಅಧಿವೇಶನದಲ್ಲಿ ಟೊಮೆಟೊ ಹಾರ!

ದಿಢೀರ್ ಟೊಮೆಟೊ ಬೆಲೆ ಡಬಲ್ ಸೆಂಚ್ಯುರಿ ಭಾರಿಸಿದ್ದೇ ಭಾರಿಸಿದ್ದು ದೇಶದಲ್ಲಿ ಆಕ್ರೋಶ ಮೊಳಗಿತ್ತು. ಅದರಲ್ಲೂ ಬೆಲೆ ಏರಿಕೆಯನ್ನೇ ಅಸ್ತ್ರ ಮಾಡಿಕೊಂಡು ವಿಪಕ್ಷಗಳ ನಾಯಕರು ಕೇಂದ್ರ ಸರ್ಕಾರಕ್ಕೆ ಚಳಿ ಬಿಡಿಸುತ್ತಿದ್ದಾರೆ. ಇದೇ ವೇಳೆ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್‌ ಗುಪ್ತಾ ರಾಜ್ಯಸಭೆಗೆ ಟೊಮೆಟೊ & ಶುಂಠಿಯ ಹಾರ ಹಾಕಿಕೊಂಡು ಎಂಟ್ರಿ ಕೊಟ್ಟಿದ್ದರು. ಇದನ್ನ ಕಂಡ ತಕ್ಷಣ ಸದನದಲ್ಲಿ ತಿಕ್ಕಾಟವೂ ಜೊರಾಗಿತ್ತು. ಹೀಗೆ ಎಲ್ಲೆಲ್ಲೂ ಟೊಮೆಟೊ ಸದ್ದು ಮಾಡುವಾಗಲೇ ಕುಸಿತ ಕಾಣುತ್ತಿದೆ.

ಒಟ್ನಲ್ಲಿ ಇಷ್ಟುದಿನ ಭಾರಿ ಬೆಲೆ ಕಂಡಿದ್ದ ಟೊಮೆಟೊ ಈಗ ಕುಸಿತದ ಹಾದಿ ಹಿಡಿದೆ. ಆದ್ರೆ ಇಂತಹ ಬೆಳವಣಿಗೆ ಗ್ರಾಹಕರು ಹಾಗೂ ರೈತರಿಗೆ ಆಕ್ರೋಶ ತರಿಸಿದೆ. ಏಕೆಂದರೆ ಬೆಲೆ ಏರಿಕೆ ಕಂಡರೆ ಆಕಾಶ ಮುಟ್ಟುತ್ತದೆ, ಬೆಲೆ ಕುಸಿತ ಕಂಡರೆ ಪಾತಾಳ ಸೇರುತ್ತದೆ. ಇದರ ಬದಲಾಗಿ ರೈತರು ಹಾಗೂ ಗ್ರಾಹಕರಿಗೆ ಅನುಕೂಲ ಆಗುವ ರೀತಿಯಲ್ಲಿ ಟೊಮೆಟೊ ಬೆಲೆ ನಿರ್ದಿಷ್ಟ ಹಂತದಲ್ಲೇ ಇರಲಿ ಅನ್ನೋದು ಜನರ ಆಗ್ರಹ. ಆದರೆ ಈ ಆಗ್ರಹಕ್ಕೆ ಮನ್ನಣೆ ಸಿಗುತ್ತಾ? ಅಂತಾ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+