Toll Price increases: ಇಂದು ಮಧ್ಯರಾತ್ರಿಯಿಂದಲೇ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಟೋಲ್‌ ದರ ಹೆಚ್ಚಳ, ಮಾಹಿತಿ

ಬೆಂಗಳೂರು, ಆಗಸ್ಟ್‌, 31: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಆದಾಗಿನಿಂದ ಪ್ರಯಾಣಿಕರಿಗೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಆಗುತ್ತಲೇ ಇದ್ದವು. ಅಲ್ಲದೆ ಈ ಹೆದ್ದಾರಿಯ ಟೋಲ್‌ ಶುಲ್ಕವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪದೇ ಪದೇ ಏರಿಸುತ್ತಲೇ ಬಂದಿದೆ. ಹಾಗೆಯೇ ಇಂದು ಮಧ್ಯರಾತ್ರಿಯಿಂದ (ಆಗಸ್ಟ್‌ 31) ನೆಲಮಂಗಲ ತಾಲೂಕಿನ ದೇವಿಹಳ್ಳಿ ಎಕ್ಸ್ ಪ್ರೆಸ್ ಹೈವೇಯಲ್ಲಿನ ಲ್ಯಾಂಕೋ ಟೋಲ್ ಸೇರಿದಂತೆ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿನ ಟೋಲ್ ಶುಲ್ಕವನ್ನು ಏರಿಕೆ ಮಾಡಲು ಮುಂದಾಗಿದೆ.

ಇಂದು (ಗುರುವಾರ, ಸೆಪ್ಟೆಂಬರ್‌ 31) ಮಧ್ಯರಾತ್ರಿಯಿಂದಲೇ ನೆಲಮಂಗಲ-ಹಾಸನ ರಸ್ತೆಯಲ್ಲಿ ವಾಹನ ಸವಾರರಿಗೆ ದುಬಾರಿ ಟೋಲ್ ದರದ ಬರೆ ಎಳೆಯಲು ರಾಷ್ಟ್ರ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಸೆಪ್ಟೆಂಬರ್ 1ರ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವ ವಾಹನಕ್ಕೆ ಎಷ್ಟು ದರ ಹೆಚ್ಚಳ ಮಾಡಿದ್ದಾರೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

toll-price-increases-effective

ಸೆಪ್ಟೆಂಬರ್‌ 1ರಿಂದ ಜಾರಿಯಾಗುವ ಹೊಸ ಟೋಲ್ ದರ

1. ಕಾರು - 50 ರಿಂದ 55 ರೂಪಾಯಿಗೆ ಹೆಚ್ಚಳ.

2. ಲಘು ಮೋಟಾರು ವಾಹನಳು- 90 ರಿಂದ 100 ರೂಪಾಯಿ ಹೆಚ್ಚಳ.

3. ಬಸ್, ಟ್ರಕ್‌ಗಳು - 185 ರಿಂದ 200 ರೂಪಾಯಿ ಏರಿಕೆ.

4. ಮಲ್ಟಿ ಆಕ್ಸಲ್ ವೆಹಿಕಲ್, ಬೃಹತ್ ನಿರ್ಮಾಣ ಯಂತ್ರೋಪಕರಣ ಅಥವಾ ಅರ್ಥ್ ಮೂವಿಂಗ್ ಸಾಧನಗಳಿಗೆ ವಿಧಿಸಲಾಗುತ್ತಿದ್ದಂತ ಶುಲ್ಕವನ್ನು 320 ರಿಂದ 485ಕ್ಕೆ ಏರಿಕೆ ಮಾಡಲಾಗಿದೆ.

5. ಕಾರು, ವ್ಯಾನ್, ಜೀಪ್, ಎಲ್‌ಎಂವಿ ವಾಹನಗಳಿಗೆ ತಿಂಗಳಲ್ಲಿ 60 ಸಿಂಗಲ್ ಪ್ರಯಾಣಗಳಿಗೆ ಮಾಸಿಕ ಪಾಸ್ ದರ 1720 ರೂಪಾಯಿ, ಲಘು ವಾಣಿಜ್ಯ ವಾಹನ ಅಂದರೇ ಎಲ್‌ಎಂವಿಗಳಿಗೆ 3005 ರೂ., ಟ್ರಕ್, ಬಸ್‌ಗಳಿಗೆ 6010 ರೂಪಾಯಿ, ಮಲ್ಟಿ ಆಕ್ಸಲ್ ವೆಹಿಕಲ್‌ಗಳಿಗೆ ತಿಂಗಳಲ್ಲಿ 60 ಸಿಂಗಲ್ ಪ್ರಯಾಣಗಳಿಗೆ ಮಾಸಿಕ ಪಾಸ್ ದರವನ್ನು 9665 ರೂಪಾಯಿ ನಿಗದಿಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+