Lok Sabha Election 2024: ಇಂದು ಕಾಂಗ್ರೆಸ್‌ ಪಟ್ಟಿ ಬಿಡುಗಡೆ; ನಾಲ್ಕು ಕ್ಷೇತ್ರಗಳ ಅಭ್ಯರ್ಥಿ ಫೈನಲ್‌ ಮಾಡಿದ ಹೈಕಮಾಂಡ್?

ಬೆಂಗಳೂರು, ಮಾರ್ಚ್‌ 25: ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡ ಕಾಂಗ್ರೆಸ್‌ ಗೆ ಲೋಕಸಭಾ ಚುನಾವಾಣೆ ಪರಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್‌ ಗೆ ಸೋಲಿನ ಪಾಠ ಕಲಿಸಲು ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದ್ದು, ಪ್ರಬಲ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ರೆ, ಇತ್ತ ಕಾಂಗ್ರೆಸ್‌ ಸಹ ಸಮರ್ಥ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಟಿಕೆಟ್‌ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಹೌದು, ಕಾಂಗ್ರೆಸ್‌ ಈಗಾಗಲೇ 28 ಲೋಕಸಭಾ ಕ್ಷೇತ್ರಗಳ ಫೈಕಿ 24 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿದ್ದು, ಕಾಂಗ್ರೆಸ್‌ ಹೈಕಮಾಂಡ್ ನಾಲ್ಕು ಕ್ಷೇತ್ರದ ಅಭ್ಯರ್ಥಿಗಳ‌ ಆಯ್ಕೆಯೇ ದೊಡ್ಡ ತಲೆನೋವಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಆಯ್ಕೆಯನ್ನ ಕಾಂಗ್ರೆಸ್ ಹೈಕಮಾಂಡ್ ಬಾಕಿ ಉಳಿಸಿಕೊಂಡಿತ್ತು. ಆದರೆ, ಇದೀಗ ನಾಲ್ಕು ಕ್ಷೇತ್ರಗಳಲ್ಲೂ ಅಭ್ಯರ್ಥಿಯನ್ನ ಅಂತಿಮಗೊಳಿಸಿದೆ ಎಂದು ತಿಳಿದು ಬಂದಿದೆ.

Today list of Congress Lok Sabha candidates is released

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಯುವ ನಾಯಕ ರಕ್ಷಾ ರಾಮಯ್ಯ ಅವರಿಗೆ ಬಹುತೇಕ ಟಿಕೆಟ್‌ ಸಿಗಲಿದ, ಚಿಕ್ಕಬಳ್ಳಾಪುರ ಟಿಕೆಟ್‌ಗಾಗಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಸಚಿವರಾದ ಶಿವಶಂಕರ್‌ ರೆಡ್ಡಿ ಪಟ್ಟು ಹಿಡಿದಿದ್ರು. ಆದರೆ, ಅಂತಿಮವಾಗಿ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್‌ ನೀಡಲಿದೆ ಎಂದು ತಿಳಿದು ಬಂದಿದೆ. ಕೋಲಾರ ಲೋಕಸಭಾ ಕ್ಷೇತ್ರದಿಂದ ಚಿಕ್ಕಪೆದ್ದಣ್ಣ ಹಾಗೂ ಎಲ್‌.ಹನುಮಂತಯ್ಯ ಅವರು ಟಿಕೆಟ್‌ ಲಾಬಿ ನಡೆಸಿದ್ದು, ಎಲ್‌.ಹನುಮಂತಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್‌ ಮಣೆ ಹಾಕುವ ಸಾಧ್ಯತೆ ಇದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಹೆಚ್‌ ಮಹಾದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಹಾಗೂ ದರ್ಶನ್ ಧ್ರುವ ನಾರಾಯಣ ಅವರ ಹೆಸರು ಕೇಳಿ ಬರುತ್ತಿದೆ. ಈಗಾಗಲೇ ಸಚಿವರ ಮಕ್ಕಳಿಗೆ ಟಿಕೆಟ್‌ ನೀಡಿರುವುದರಿಂದ ಹೆಚ್‌ ಮಹಾದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರಿಗೆ ಟಿಕೆಟ್‌ ಸಿಗಲಿದೆ ಎಂದು ತಿಳಿದು ಬಂದಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ತುಕಾರಾಂ ಅವರ ಪುತ್ರಿ ಸೌಪರ್ಣಿಕಾ ತುಕಾರಾಂ ಅವರಿಗೆ ಹೈಕಮಾಂಡ್‌ ಟಿಕೆಟ್‌ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ!

1. ಹಾಸನ: ಶ್ರೇಯಸ್‌ ಪಟೇಲ್‌

2.ಬೆಂಗಳೂರು ಗ್ರಾಮಾಂತರ: ಡಿಕೆ ಸುರೇಶ್‌

3.ಶಿವಮೊಗ್ಗ ಕ್ಷೇತ್ರ: ಗೀತಾ ಶಿವರಾಜ್‌ಕುಮಾರ್

4.ಹಾವೇರಿ: ಆನಂದಸ್ವಾಮಿ ಗಡ್ಡದೇವರಮಠ

5.ಮಂಡ್ಯ ಕ್ಷೇತ್ರ : ಸ್ಟಾರ್‌ ಚಂದ್ರು

6.ತುಮಕೂರು: ಮುದ್ದಹನುಮೇಗೌಡ

7.ವಿಜಯಪುರ: ರಾಜು ಅಲಗೂರು

8.ಕಲಬುರಗಿ: ರಾಧಾಕೃಷ್ಣ ದೊಡ್ಮನಿ

9.ಚಿತ್ರದುರ್ಗ: ಬಿಎನ್‌ ಚಂದ್ರಪ್ಪ-ಎಸ್‌ಸಿ

10.ಬೆಳಗಾವಿ: ಮೃಣಾಲ್‌ ಹೆಬ್ಬಾಳ್ಕರ್‌

11.ಚಿಕ್ಕೋಡಿ: ಪ್ರಿಯಾಂಕಾ ಜಾರಕಿಹೊಳಿ

12.ಬಾಗಲಕೋಟೆ: ಸಂಯುಕ್ತಾ ಪಾಟೀಲ್

13.ಧಾರವಾಡ: ವಿನೋದ್‌ ಅಸೂಟಿ

14.ಕೊಪ್ಪಳ: ರಾಘವೇಂದ್ರ ಹಿಟ್ನಾಳ್‌

15.ದಾವಣಗೆರೆ: ಡಾ ಪ್ರಭಾ ಮಲ್ಲಿಕಾರ್ಜುನ್‌

16.ಬೀದರ್‌: ಸಾಗರ್‌ ಖಂಡ್ರೆ

17.ದಕ್ಷಿಣ ಕನ್ನಡ: ಪದ್ಮರಾಜ್‌

18.ಉಡುಪಿ - ಚಿಕ್ಕಮಗಳೂರು: ಡಾ ಜಯಪ್ರಕಾಶ್‌ ಹೆಗ್ಡೆ

19.ಬೆಂಗಳೂರು ದಕ್ಷಿಣ: ಸೌಮ್ಯ ರೆಡ್ಡಿ

20.ಬೆಂಗಳೂರು ಕೇಂದ್ರ: ಮನ್ಸೂರ್‌ ಅಲಿಖಾನ್‌

21.ಬೆಂಗಳೂರು ಉತ್ತರ: ಪ್ರೋ. ರಾಜೀವ್‌ ಗೌಡ

22.ಮೈಸೂರು: ಎಂ ಲಕ್ಷ್ಮಣ್‌

23.ರಾಯಚೂರು: ಜಿ ಕುಮಾರ್‌ ನಾಯ್ಕ್‌

24.ಉತ್ತರ ಕನ್ನಡ:ಅಂಜಲಿ ನಿಂಬಾಳ್ಕರ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+