ಟಿಪ್ಪು ಕರ್ನಾಟಕದಲ್ಲಿ ಅತ್ಯಾಚಾರ ಮಾಡ್ಲಿಲ್ವಲ್ಲಾ: ಏನಿದು ಕಾರ್ನಾಡರೇ?

ಟಿಪ್ಪು ಜಯಂತಿ ಆಚರಣೆಯ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡರ ತಂಟೆಗೆ ಹೋಗಿ, ನಾಡಿನಾದ್ಯಂತ ವ್ಯಾಪಕ ಟೀಕೆಗೊಳಗಾಗಿರುವ ಸಾಹಿತಿ ಗಿರೀಶ್ ಕಾರ್ನಾಡ್, ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಹೋಗಿ ಮತ್ತಷ್ಟು ವಿವಾದಕಾರಿ ಹೇಳಿಕೆಯನ್ನು ನೀಡುತ್ತಿದ್ದಾರೆ.

ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಕಾರ್ನಾಡ್, ಟಿಪ್ಪು ಸುಲ್ತಾನ್ ಕೊಡಗು ಮತ್ತು ಕೇರಳದಲ್ಲಿ ಮತಾಂತರ ಮಾಡಿರಬಹುದು. ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಟಿಪ್ಪು ಕರ್ನಾಟಕದಲ್ಲಿ ಮತಾಂತರ ಮಾಡಲಿಲ್ಲ ಎನ್ನುವುದು ಎಂದು ಹೇಳಿದ್ದಾರೆ. (ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ)

ಟಿಪ್ಪು ಸುಲ್ತಾನ್ ಒಬ್ಬ ರಾಜ್ಯ ಕಂಡ ಉತ್ತಮ ರಾಜ, ಆತ ಹಲವಾರು ಹಿಂದೂ ದೇವಾಲಯಗಳಿಗೆ ಸಹಾಯ ಮಾಡಿದ್ದಾನೆ. ಬ್ರಿಟಿಷರು ಶ್ರೀರಂಗಪಟ್ಟಣವನ್ನು ಧ್ವಂಸ ಮಾಡಲಿಲ್ಲವೇ? ಟಿಪ್ಪು ಮತಾಂತರ ಮತ್ತು ಅತ್ಯಾಚಾರ ನಡೆಸಿದರೂ, ಅದು ಕರ್ನಾಟಕದ ವ್ಯಾಪ್ತಿಯಲ್ಲಿ ಆಗಿರಲಿಲ್ಲ ಎಂದು ಕಾರ್ನಾಡರು ಸಂದರ್ಶನದಲ್ಲಿ ಹೇಳಿದ್ದಾರೆ.

ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಟ್ಟರೆ ಸೂಕ್ತವಾಗುತ್ತಿತ್ತು ಎಂದು ಹೇಳಿದ್ದೇನೇ ಹೊರತು, ಅದಕ್ಕಾಗಿ ಒತ್ತಡ ತಂದಿಲ್ಲ. ಕೆಂಪೇಗೌಡ ವಿಮಾನ ನಿಲ್ದಾಣದ ಹೆಸರನ್ನು ಟಿಪ್ಪು ಹೆಸರಿಗೆ ಬದಲಾಯಿಸಿ ಎಂದು ಹೇಳುವಷ್ಟು ದಡ್ಡನಾನಲ್ಲ ಎಂದು ಕಾರ್ನಾಡ್ ಹೇಳಿದ್ದಾರೆ.

ಮೋದಿಯವರಂತಹ ನಾಯಕರಿಂದ ಅಸಹಿಷ್ಣುತೆ ಹೆಚ್ಚುತ್ತಿದೆ, ಮುಂದೆ ಓದಿ..

ಟಿಪ್ಪು ಸುಲ್ತಾನ್ ಒಬ್ಬ ದುಷ್ಟ ದೊರೆ ಎನ್ನುವ ಬಲಪಂಥೀಯರ ತೀರ್ಮಾನ

ಟಿಪ್ಪು ಸುಲ್ತಾನ್ ಒಬ್ಬ ದುಷ್ಟ ದೊರೆ ಎನ್ನುವ ಬಲಪಂಥೀಯರ ತೀರ್ಮಾನ

ಟಿಪ್ಪು ಸುಲ್ತಾನ್ ನನ್ನು ಒಬ್ಬ ದುಷ್ಟ ದೊರೆ ಎಂದು ಬಲಪಂಥೀಯರು ತೀರ್ಮಾನಕ್ಕೆ ಬಂದಿರುವುದರಿಂದ, ಟಿಪ್ಪುವಿನ ಬಗ್ಗೆ ಸತ್ಯ ಮಾಹಿತಿ ಇವರಿಗೆ ಬೇಕಾಗಿರುವುದಿಲ್ಲ. ಹಾಗಾಗಿ, ಟಿಪ್ಪು ಮತ್ತು ಆತನ ಕಾಲದ ಸ್ಮಾರಕಗಳ ಬಗ್ಗೆ ಚರ್ಚಿಸಲು ಸಾಧ್ಯವಾಗುವುದಿಲ್ಲ ಎಂದು ಕಾರ್ನಾಡ್ ಹೇಳಿದ್ದಾರೆ.

ಅಶಾಂತಿಗೆ ಬಿಜೆಪಿ ಮತ್ತು ಸಂಘ ಪರಿವಾರ ಕಾರಣ

ಅಶಾಂತಿಗೆ ಬಿಜೆಪಿ ಮತ್ತು ಸಂಘ ಪರಿವಾರ ಕಾರಣ

ಸರಕಾರ ಟಿಪ್ಪು ಜಯಂತಿ ಆಚರಿಸಿದೇ ಇದ್ದಲ್ಲಿ ಈಗಾಗಿರುವ ಅಶಾಂತಿ ವಾತಾವರಣವನ್ನು ತಡೆಯಬಹುದಾಗಿತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಕಾರ್ನಾಡ್, ಈಗಾಗಿರುವ ಅಶಾಂತಿಗೆ ಬಿಜೆಪಿ ಮತ್ತು ಸಂಘ ಪರಿವಾರ ಕಾರಣ. ಈ ವಿವಾದವನ್ನು ಇಪ್ಪತ್ತು ವರ್ಷದ ಹಿಂದೆ ಬಲಪಂಥೀಯರು ಹುಟ್ಟು ಹಾಕಿದ್ದು ಎಂದು ಕಾರ್ನಾಡ್ ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ, ಧರ್ಮ ಮತ್ತು ಚರಿತ್ರೆಯ ವಿಚಾರದಲ್ಲಿ ಚರ್ಚೆಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಸಾಮಾಜಿಕ ತಾಣಗಳು ಭಾರೀ ಮುಂದುವರಿದಿರುವ ಈ ಸಮಯದಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ.

ಮೋದಿಯವರಂತಹ ನಾಯಕರಿಂದ ಅಸಹಿಷ್ಣುತೆ ಹೆಚ್ಚುತ್ತೆ

ಮೋದಿಯವರಂತಹ ನಾಯಕರಿಂದ ಅಸಹಿಷ್ಣುತೆ ಹೆಚ್ಚುತ್ತೆ

ಅಸಹಿಷ್ಣುತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಕಾರ್ನಾಡ್, ಅಸಹಿಷ್ಣುತೆ ಹೆಚ್ಚಾಗುವುದು ಸರಕಾರ ಅಥವಾ ನರೇಂದ್ರ ಮೋದಿಯವರಂತಹ ನಾಯಕರಿಂದ. ದಾದ್ರಿಯಂತಹ ಘಟನೆಗಳು ಸಂಭವಿಸಿದ ಒಂದು ವಾರದವರೆಗೂ ಮೋದಿ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ.

ಜೀವ ಬೆದರಿಕೆ

ಜೀವ ಬೆದರಿಕೆ

ಸಾಮಾಜಿಕ ತಾಣದ ಮೂಲಕ ಬಂದಿರುವ ಜೀವ ಬೆದರಿಕೆಯ ಬಗ್ಗೆ ಮಾತನಾಡುತ್ತಾ, ನಾನು ಇದಕ್ಕೆಲ್ಲಾ ಭಯಪಡುವವನಲ್ಲ. ಈ ಹಿಂದೆ ಕಾವೇರಿ ನಿಯೋಗದ ವಿಚಾರದಲ್ಲೂ ಈ ರೀತಿಯಾಗಿತ್ತು, ಇದಕ್ಕಿಂತ ಹೆಚ್ಚಾಗಿ ನಾನು ಫೇಸ್ ಬುಕ್ ಮತ್ತು ಟ್ವಿಟರನ್ನು ಬಳಸುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+