"ಕುಕ್ಕೆ ಸುಬ್ರಹ್ಮಣ್ಯ ಪೂಜೆ ದರ ಹೆಚ್ಚಳ: ದಸರಾ ವೀಕ್ಷಣೆಗೆ ಟಿಕೆಟ್ & ಪಾಸ್ ವ್ಯವಸ್ಥೆ! ಆಕ್ರೋಶ'
ಬೆಂಗಳೂರು, ಸೆಪ್ಟಂಬರ್ 20: ಸಾಹಿತಿ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನ ಕುರಿತು ಸಲ್ಲಿಕೆಯಾದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರಿಂದ ರಾಜ್ಯ ಸರ್ಕಾರದ ನಿರ್ಧಾರವನ್ನು ಕೋರ್ಟ್ ಎತ್ತಿ ಹಿಡಿದಿದೆ. ಇನ್ನೂ ದಸರಾ ವೀಕ್ಷಣೆಗೆ ಪಾಸ್ ಸೌಲಭ್ಯ ಹಾಗೂ ಟಿಕೆಟ್ ಶುಲ್ಕ ನಿಗದಿ ಮಾಡಿರುವುದು ಸೇರಿ ಕೆಲವು ವಿಚಾರಗಳ ವಿರುದ್ಧ ವಿಪಕ್ಷ ನಾಯಕರು ದೂರಿದ್ದಾರೆ.
""ಹಿಂದೂಗಳ ದೇವಸ್ಥಾನ, ಹಬ್ಬ, ಆಚರಣೆಗಳಿಗೆ ಅಡಚಣೆ ಉಂಟು ಮಾಡುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅದೆಂತಹ ವಿಕೃತ ಸಂತೋಷ ಸಿಗುತ್ತೋ ಗೊತ್ತಿಲ್ಲ'' ವಿಪಕ್ಷ ನಾಯಕ ಆರ್.ಅಶೋಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸರ್ಕಾರ ದಸರಾ ಹಬ್ಬದ ಉದ್ಘಾಟನೆಗೆ ಬಾನು ಮುಷ್ಕಾಕ್ ಅವರನ್ನು ಆಹ್ವಾನಿಸಿದೆ. ''ತಾಯಿ ಚಾಮುಂಡೇಶ್ವರಿ, ತಾಯಿ ಭುವನೇಶ್ವರಿ, ನಮ್ಮ ಸಂಸ್ಕೃತಿಯ ಪ್ರತೀಕವಾದ ಅರಿಷಿಣ, ಕುಂಕುಮದ ಮೇಲೆ ನಂಬಿಕೆ ಇಲ್ಲದ, ಅನ್ಯಧರ್ಮೀಯರಿಂದ ದಸರಾ ಉದ್ಘಾಟನೆ ಮಾಡಿಸುವ ಹಠ ಸಾಧಿಸಿದ್ದಾಯಿತು.''
"ರಾಜ್ಯದಲ್ಲಿ ದುಬಾರಿ ಪಾಸ್ ನೆಪದಲ್ಲಿ ಜನಸಾಮಾನ್ಯರಿಗೆ ದಸರಾ ವೀಕ್ಷಣೆ ಕಷ್ಟಸಾಧ್ಯ ಮಾಡಿದ್ದಾಯ್ತು. ಈಗ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ 14 ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಸೇವಾ ಶುಲ್ಕ ಏರಿಕೆ ಮಾಡುವ ಮೂಲಕ ಹಿಂದೂಗಳಿಗೆ ಮತ್ತೊಂದು ಪೆಟ್ಟು ನೀಡಿದ್ದಾರೆ.' ಹಿಂದೂಗಳೆಂದರೆ ತಮಗೆ ಯಾಕಿಷ್ಟು ದ್ವೇಷ. ಹಿಂದೂಗಳೆಂದರೆ ಯಾಕಿಷ್ಟು ತಾತ್ಸಾರ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.
ಮಾತ್ರವಲ್ಲದೇ ಕಾಂಗ್ರೆಸ್ ನಾಯಕಿ ರಾಹುಲ್ ಗಾಂಧಿ ಅವರ ಅವರ ಸಂವಿಧಾನ ಪುಸ್ತಕದಲ್ಲಿ ಹಿಂದೂಗಳು ಎರಡನೇ ದರ್ಜೆ ಪ್ರಜೆಗಳಾ? ಎಂದು ಕಿಡಿ ಕಾರಿದ್ದಾರೆ. ಕರ್ನಾಟಕ ಸರ್ಕಾರ ಈ ಬಾರಿ ದಸರಾ ಉತ್ಸವದಲ್ಲಿ ಪ್ರಮುಖ ಕಾರ್ಯಕ್ರಮಗ ವೀಕ್ಷಣೆಗೆ ಪಾಸ್ ಹಾಗೂ ಟಿಕೆಟ್ ವ್ಯವಸ್ಥೆ ಮಾಡಿದೆ. ಇದರಿಂದ ಸಾರ್ವಜನಿಕರ ಉಚಿತ ದಸರಾ ವೀಕ್ಷಣೆಗೆ ಬ್ರೇಕ್ ಬಿದ್ದಿದೆ. ಸಾರ್ವಜನಿಕರಿಗೆ ಆರ್ಥಿಕ ಹೊರೆ ಸರ್ಕಾರ ಹೊರಿಸುತ್ತಿದೆ ಎಂದು ವಿಪಕ್ಷಗಳು ದೂರಿವೆ.

ಈ ವರ್ಷ ದಸರಾ ವೀಕ್ಷಣೆಗೆ ಟಿಕೆಟ್, ಪಾಸ್ ನಿಗದಿ
* ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ: 3500 ರೂಪಾಯಿ
* ಗೋಲ್ಡ್ ಕಾರ್ಡ್: 6500 ರೂಪಾಯಿ
* ಪಂಜಿನ ಕವಾಯತು: 1500 ರೂಪಾಯಿ
* ಯುವ ದಸರಾ: 5000 & 2000 ರೂಪಾಯಿ
* ಡ್ರೋನ್ ಷೋ: 1000 ರೂಪಾಯಿ.
ಸೆಪ್ಟಂಬರ್ 23-27ರವರೆಗೆ ದಸರಾದಲ್ಲಿ ಪಾಲ್ಗೊಳ್ಳಲು: 2000 ರೂ. ಮತ್ತು 5000 ರೂ.ಟಿಕೆಟ್ ದರ ನಿಗಿದ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಪೂಜೆ 100 ರೂಪಾಯಿ ಹೆಚ್ಚಳ ಮಾಡಲಾಗಿದೆ. ಸುಮಾರು ಒಂದೂವರೆ ದಶಕದ ಬಳಿಕ ಏರಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರಗಳು ಹಾಗೂ ದಸರಾ ಆಚರಣೆಯಲ್ಲಿ ಸರ್ಕಾರ ಕೈಗೊಂಡ ನಿರ್ಧಾರಗಳ ವಿರುದ್ಧ ವಿಪಕ್ಷ ನಾಯಕರು ಕಿರಿ ಕಾರಿದ್ದಾರೆ.












Click it and Unblock the Notifications