ಉಪ ಚುನಾವಣೆ : ಕಣದಲ್ಲಿರುವ ಅಭ್ಯರ್ಥಿಗಳು ಯಾರು?
ಬೆಂಗಳೂರು, ಆ.13 : ಕರ್ನಾಟಕ ವಿಧಾನಸಭೆಯ ಮೂರು ಕ್ಷೇತ್ರಗಳಿಗೆ ಆ.21ರಂದು ಉಪ ಚುನಾವಣೆ ನಡೆಯಲಿದೆ. ಶಾಸಕರಾಗಿದ್ದ ಬಿ.ಎಸ್.ಯಡಿಯೂರಪ್ಪ, ಪ್ರಕಾಶ್ ಹುಕ್ಕೇರಿ, ಬಿ.ಶ್ರೀರಾಮುಲು ಅವರು ಸಂಸದರಾಗಿ ಆಯ್ಕೆಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ನಡೆಯುತ್ತಿದೆ.
ಶಿಕಾರಿಪುರ, ಚಿಕ್ಕೋಡಿ-ಸದಲಗಾ ಮತ್ತು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಆ.21ರ ಗುರುವಾರ ಮತದಾನ ನಡೆಯಲಿದ್ದು, ಆ.25ರ ಸೋಮವಾರ ಮತ ಎಣಿಕೆ ನಡೆಯಲಿದೆ. ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜೆಡಿಎಸ್ ಪಕ್ಷ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿಲ್ಲ.

ಶಿಕಾರಿಪುರ ಕ್ಷೇತ್ರದ ಶಾಸಕರಾದ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ ಸಂಸದರಾಗಿ ಆಯ್ಕೆಯಾಗಿದ್ದಾರೆ. ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕರಾಗಿದ್ದ ಪ್ರಕಾಶ್ ಹುಕ್ಕೇರಿ ಚಿಕ್ಕೋಡಿ ಸಂಸದರಾಗಿದ್ದಾರೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕರಾಗಿದ್ದ ಬಿ.ಶ್ರೀರಾಮುಲು ಬಳ್ಳಾರಿ ಸಂಸದರಾಗಿ ಆಯ್ಕೆಯಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಗಳ ಭರ್ತಿಗೆ ಚುನಾವಣೆ ನಡೆಯುತ್ತಿದೆ. [ಲೋಕಸಭೆ ಚುನಾವಣಾ ಫಲಿತಾಂಶ]
ಶಿಕಾರಿಪುರದಲ್ಲಿ ಅಭ್ಯರ್ಥಿಗಳು
ಬಿ.ವೈ.ರಾಘವೇಂದ್ರ - ಬಿಜೆಪಿ
ಶಾಂತವೀರಪ್ಪ ಗೌಡ - ಕಾಂಗ್ರೆಸ್
ಗೂಳಿಹಟ್ಟಿ ಶೇಖರ್ - ಪಕ್ಷೇತರ
ಸಕಲೇಶ್ ಹುಲ್ಮಾರ್ - ಕರ್ನಾಟಕ ಜನತಾ ಪಕ್ಷ ಸೇರಿದಂತೆ 8 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಳ್ಳಾರಿ ಗ್ರಾಮಾಂತರದ ಅಭ್ಯರ್ಥಿಗಳು
ಓಬಳೇಶ್ - ಬಿಜೆಪಿ
ಎನ್.ವೈ.ಗೋಪಾಲಕೃಷ್ಣ - ಕಾಂಗ್ರೆಸ್
ಬಿ.ರಘು - ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ
ಜಿ.ಚಂದ್ರಶೇಖರ - ಪಕ್ಷೇತರ
ಬಿ.ರಾಮುಡು - ಪಕ್ಷೇತರ ಸೇರಿ ಒಟ್ಟು 5 ಅಭ್ಯರ್ಥಿಗಳು.
ಚಿಕ್ಕೋಡಿ-ಸದಲಗಾ ಅಭ್ಯರ್ಥಿಗಳು
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ - ಬಿಜೆಪಿ
ಗಣೇಶ್ ಪ್ರಕಾಶ ಹುಕ್ಕೇರಿ -ಕಾಂಗ್ರೆಸ್
ಬಿ.ವೆಂಕಟೇಶ್ -ಕರುನಾಡ ಪಾರ್ಟಿ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.












Click it and Unblock the Notifications