ಈ ಊರಿನದ್ದು ಸಂಸತ್‌ನಲ್ಲಿ ತ್ರಿಬಲ್ ಧಮಾಕಾ
ಒಂದು ಊರಿಗೆ ಒಬ್ಬ ಸಂಸದ ಸಿಗುವುದು ಕಷ್ಟ. ಆದರೆ ಕರ್ನಾಟಕದ ಈ ಊರಿನಲ್ಲಿ ಸಾಲು ಸಾಲು ಸಂಸದರು ಇದ್ದಾರೆ. ಅದೇನಪ್ಪಾ ಎಲ್ಲರಿಗೂ ಗೊತ್ತಿರುವುದೇ ಬೆಂಗಳೂರು ಅಂತಾ ನೀವು ಅಂದುಕೊಂಡರೆ ಅದು ತಪ್ಪು. ಇದು ರಾಜ್ಯ ರಾಜಧಾನಿಗೆ ಸಂಬಂಧಿಸಿದ ಸುದ್ದಿ ಅಲ್ಲವೇ ಅಲ್ಲ.
ಇತ್ತೀಚಿಗೆ ಭಾರತದಲ್ಲಿ 18ನೇ ಲೋಕಸಭಾ ಚುನಾವಣೆಗಳು ಮುಗಿದಿದ್ದು, ಫಲಿತಾಂಶ ಹೊರ ಬಿದ್ದಿದೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ಎಲ್ಲ ಕ್ಷೇತ್ರಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ ಕರ್ನಾಟಕದ ಈ ಕ್ಷೇತ್ರದಲ್ಲಿ ಮಾತ್ರ ತ್ರಿಬಲ್ ಖುಷಿ ಮನೆ ಮಾಡಿತ್ತು. ಈ ಊರಿನ ಜನ ತಮ್ಮ ಊರಿನಲ್ಲಿ ಮೂರು ಜನ ಸಂಸದರು ಇದ್ದಾರೆ.

ಅಂದಹಾಗೆ ಇದರಲ್ಲಿ ಒಂದು ಟ್ವೀಸ್ಟ್ ಇದೆ. ಈ ಮೂರು ಸಂಸದರು ಬೇರೆ ಬೇರೆ ಪಕ್ಷದವರು ಎಂದು ನೀವು ಯೋಚಿಸುತ್ತಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಇವರು ಮೂರು ಒಂದೇ ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧಿಸಿ ಗೆಲುವು ಸಾಧಿಸಿದ ಧೀರರು. ಹಾಗಿದರೆ ಆ ಊರು ಯಾರು ಯಾವುದು?
ಯಾವ ಊರು?
ಈ ಊರಿಗೆ ಹಾಗೂ ಉತ್ತರ ಕರ್ನಾಟಕಕ್ಕೆ ಅವಿನಾಭಾವ ಸಂಬಂಧ ಇದೆ. ಈ ಊರಿಗೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುತ್ತಾರೆ. ಎಸ್.. ನಿಮ್ಮ ಊಹೆ ನಿಜ ವಾಣಿಜ್ಯ ನಗರಿ ಹುಬ್ಬಳ್ಳಿ. ಚೋಟಾ ಮುಂಬೈನ ನಿವಾಸಿಗಳಿಗೆ ಈ ಬಾರಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ನೀಡಿತ್ತು. ಅಲ್ಲದೆ ಈ ಮೂವರು ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.
ಪ್ರಹ್ಲಾದ್ ಜೋಶಿ
ಇದರಲ್ಲಿ ಒಬ್ಬರು ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿರುವ ಪ್ರಹ್ಲಾದ್ ಜೋಶಿ. ಈಗಾಗಲೇ ಕೇಂದ್ರದಲ್ಲಿ ಸಚಿವರಾಗಿ ಅನುಭವ ಹೊಂದಿರುವ ಇವರನ್ನು ಜನ ಮತ್ತೊಮ್ಮೆ ಸಂಸತ್‌ಗೆ ಕಳುಹಿಸಿದ್ದಾರೆ. ಇವರು ತಮ್ಮ ಸಮೀಪದ ಪ್ರತಿ ಸ್ಪರ್ಧಿ ವಿನೋದ್ ಅಸೂಟಿ ವಿರುದ್ಧ 97324 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಜಗದೀಶ್ ಶೆಟ್ಟರ್
ಬಿಜೆಪಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಲಭಿಸಲಿಲ್ಲ ಎಂದು ಕಾಂಗ್ರೆಸ್‌ಗೆ ಹೋಗಿ ತಿರುಗಾ ಘರ್ ವಾಪಸಿ ಆಗಿದ್ದ ಜಗದೀಶ್ ಶೆಟ್ಟರ್‌ಗೆ ಬಿಜೆಪಿ, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿತು. ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಶೆಟ್ಟರ್ ಅವರು ತಮ್ಮ ಸಮೀಪದ ಪ್ರತಿ ಸ್ಪರ್ಧಿ ಮೃಣಾಲ್ ಹೆಬ್ಬಾಳ್ಕರ್ ವಿರುದ್ಧ 178437 ಮತಗಳಿಂದ ಗೆದ್ದರು.
ಬಸವರಾಜ್ ಬೊಮ್ಮಾಯಿ
ಇನ್ನು ಮಾಜಿ ಮುಖ್ಯಮಂತ್ರಿ ಹಾಲಿ ಶಾಸಕ ಬಸವರಾಜ್ ಬೊಮ್ಮಾಯಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಬಿಜೆಪಿಯ ಬೊಮ್ಮಾಯಿ 43513 ಮತಗಳ ಅಂತರದಿಂದ ಕಾಂಗ್ರೆಸ್‌ನ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಮಣಿಸಿದರು.
ಬರೀ ಇದೊಂದೇ ಊರಲ್ಲಾ ಇನ್ನು ಹುಡುಕಿದರೆ ದೇಶದಲ್ಲಿ ಇಂತಹ ಊರುಗಳು ಸಾಕಷ್ಟು ಸಿಗುತ್ತವೆ. ಕರ್ನಾಟಕದಲ್ಲೇ ಇನ್ನೊಂದು ಊರು ಇಬ್ಬರು ಸಂಸದರನ್ನು ನೀಡಿದೆ. ಅದುವೇ ಹಾಸನ. ಒಬ್ಬರು ಮಂಡ್ಯ ಕ್ಷೇತ್ರದ ಸಂಸದ ಎಚ್‌ಡಿ ಕುಮಾರ್‌ಸ್ವಾಮಿ, ಇನ್ನೊಬ್ಬರು ಹಾಸನದ ಸಂಸದ ಶ್ರೇಯಸ್ ಪಾಟೀಲ್.
ಈಗಾಗಲೇ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ವಿಧಾನಸಭೆಯನ್ನು ಪ್ರವೇಶಿಸುತ್ತಿದ್ದ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಸ್ಥಾನವನ್ನು ಸಹ ಅಲಂಕರಿಸಿದ್ದಾರೆ. ಇನ್ನು ಶಿಗ್ಗಾಂವ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ ಆಗಿ ಬಸವರಾಜ್ ಬೊಮ್ಮಾಯಿ ಸಹ ಸಿಎಂ ಸ್ಥಾನಕ್ಕೆ ಏರಿದ್ದಾರೆ. ಇನ್ನು 2004 ರಿಂದ ಇದೇ ಕ್ಷೇತ್ರದಿಂದ ಲೋಕಸಭೆ ಆಯ್ಕೆ ಆಗುತ್ತಿರುವ ಪ್ರಹ್ಲಾದ್ ಜೋಶಿ, ಈಗಾಗಲೇ ಕೇಂದ್ರದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ ಅನುಭವ ಹೊಂದಿದ್ದಾರೆ.












Click it and Unblock the Notifications