ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಬಗ್ಗೆ ಮಹತ್ವದ ಮಾಹಿತಿ... Karnataka Rain
ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಅನ್ನದಾತ ರೈತರು ಈ ವರ್ಷವು ಕೂಡ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ. ಯಾಕಂದ್ರೆ 2023 ವರ್ಷದಲ್ಲಿ ಭಾರಿ ಭೀಕರ ಬರಗಾಲ ಕಂಡಿದ್ದ ರೈತ ಸಮುದಾಯ ಆತಂಕದಲ್ಲೇ ದಿನ ದೂಡುವಂತೆ ಆಗಿತ್ತು. ಆದರೆ 2024 ಪೂರ್ತಿ ಭರ್ಜರಿಯಾಗಿ ಮಳೆ ಬಿದ್ದು, ಭರ್ಜರಿಯಾಗಿ ಕೃಷಿ ಕಾರ್ಯ ನಡೆದಿತ್ತು. ಅದೇ ರೀತಿಯಾಗಿ ಇದೀಗ 2025 ಕೂಡ ಕನ್ನಡ ನಾಡಿನ ರೈತರಿಗೆ ಭರ್ಜರಿ ಸುದ್ದಿ ನೀಡುವಂತೆ ಕಾಣಿಸುತ್ತಿದ್ದು, ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ...
ಹೌದು, ಕರ್ನಾಟಕ ರಾಜ್ಯದಲ್ಲಿ ಭಾರಿ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಜೂನ್ ತಿಂಗಳಲ್ಲೇ ಈ ಬಾರಿ ಜಲಾಶಯಗಳು ಅಂದ್ರೆ ಡ್ಯಾಂಗಳು ತುಂಬಿ ತುಳುಕಲು ಶುರು ಮಾಡಿವೆ. ಈ ಕಾರಣಕ್ಕೆ ರೈತರು ಹಾಗೂ ಕನ್ನಡ ನಾಡಿನ ಪ್ರಜೆಗಳು ಕೂಡ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಖುಷಿ ಖುಷಿಯಾಗಿದ್ದಾರೆ. ಅದರಲ್ಲೂ ಬೆಂಗಳೂರಿಗೆ ಕುಡಿಯುವ ನೀರು ನೀಡುವ ಕೃಷ್ಣರಾಜ ಸಾಗರ ಅಂದ್ರೆ ನಮ್ಮ ಕೆಆರ್‌ಎಸ್ ಈಗ ಫುಲ್ ತುಂಬಿ ತುಳುಕುತ್ತಿದ್ದು ಗರಿಷ್ಠ 124.80 ಅಡಿ ಇರುವ ಜಲಾಶಯ ಪೂರ್ಣವಾಗಿದೆ. ಸಿಎಂ ಕೂಡ ಬಾಗಿನ ಅರ್ಪಿಸಿದ್ದು, ಅನ್ನದಾತ ರೈತರು ಭರ್ಜರಿಯಾಗಿ ಬೆಳೆ ಬೆಳೆಯಲು ಸಿದ್ಧರಾಗಿದ್ದಾರೆ.

ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಬಗ್ಗೆ...
ಅಂದಹಾಗೆ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಪೂರೈಕೆಯಲ್ಲಿ ರೈತರಿಗೆ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಖಡಕ್ ಸೂಚನೆ ನೀಡಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಮತ್ತು ಫಸಲ್ ಬೀಮಾ ಯೋಜನೆ ಕುರಿತು ಕರೆಯಲಾಗಿದ್ದ ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಡಿಸಿ ಮಾತನಾಡಿದರು.
ಕೀಟ ನಾಶಕ ಬಳಕೆ ಬಗ್ಗೆ ಜಾಗೃತಿ
ಅಷ್ಟಕ್ಕೂ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟ ನಾಶಕಗಳನ್ನ ಗುಣ ನಿಯಂತ್ರಣಕ್ಕೆ ಒಳಪಡಿಸುವ ಜೊತೆ ರಸಗೊಬ್ಬರ ಉತ್ಪಾದಕರ ಜೊತೆಗೆ ಚರ್ಚಿಸಿ ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಲು ಕ್ರಮ ಕೈಗೊಳ್ಳಿ ಹಾಗೂ ಕೀಟನಾಶಕ ಸುರಕ್ಷಿತ ಬಳಕೆ ಬಗ್ಗೆ ರೈತರಿಗೆ ಅರಿವು ಮೂಡಿಸಿ ಎಂದು ಸೂಚನೆಯನ್ನ ನೀಡಿದರು. ಹಾಗೇ ಈ ವೇಳೆ ಜಿಲ್ಲಾಧಿಕಾರಿಗಳು ಬೆಳೆಗಳಲ್ಲಿ ಸಂಯೋಜಿತ ಪೋಷಕಾಂಶಗಳ ನಿರ್ವಹಣೆ ಮತ್ತು ಬೆಳೆ ವಿಮೆ ಮಾಹಿತಿಯ ಕರಪತ್ರ ಮತ್ತು ಪೋಸ್ಟರ್ ಬಿಡುಗಡೆ ಮಾಡಿದರು.












Click it and Unblock the Notifications