‘ನಾಯಿಗಳು & ಕನ್ನಡಿಗರು’ ಎಂದು ಪೋಸ್ಟ್ ಶೇರ್ ಮಾಡಿದ್ದ ಹೇಡಿ ಎಸ್ಕೇಪ್?
ಕನ್ನಡಿಗರ ತಾಕತ್ ಇಡೀ ಜಗತ್ತಿಗೇ ಗೊತ್ತು, ಕನ್ನಡ & ಕನ್ನಡಿಗರು ಸಾವಿರಾರು ವರ್ಷಗಳ ಹಿಂದೆಯೇ ಭಾಗಶಃ ಪ್ರಪಂಚದಲ್ಲಿ ತಮ್ಮ ತಾಕತ್ತು ತೋರಿಸಿದ್ದರು. ಇಂತಿಪ್ಪ ನಮ್ಮ ಕನ್ನಡ ಭಾಷೆಗೆ 2500 ವರ್ಷ ಇತಿಹಾಸ ಇದೆ. ಹೀಗಿದ್ದರೂ ಕನ್ನಡ ಭಾಷೆಯ ಬಗ್ಗೆ ಕೀಳಾಗಿ ಮಾತನಾಡಿ ಒದೆ ತಿಂದು ಹೋಗುವವರೇ ಜಾಸ್ತಿ ಅಂತಾರೆ ಕನ್ನಡಿಗರು. ಹೀಗಿದ್ದಾಗಲೇ ಸೂಪರ್ ಮಾರ್ಕೆಟ್ ಒಂದರ ಎದುರು 'ನಾಯಿಗಳು ಹಾಗೂ ಕನ್ನಡಿಗರಿಗೆ ಪ್ರವೇಶವಿಲ್ಲ' ಎಂಬ ಬೋರ್ಡ್ ಹಾಕಿದ್ದ ಫೋಟೋ ವೈರಲ್ ಆಗಿತ್ತು. ಫೋಟೋ ವೈರಲ್ ಆದ ನಂತರ ಕನ್ನಡಿಗರ ತಾಕತ್ ತಿಳಿದ ಆ ಹೇಡಿಯು...
ಕನ್ನಡ ನಾಡಿನ ಬಗ್ಗೆ ಇತ್ತೀಚೆಗೆ ಬಾಯಿಗೆ ಬಂದಂತೆ ಮಾತನಾಡುವುದು & ಹಿಂಗೆ ಮಾತನಾಡಿ ಕನ್ನಡಿಗರ ಕೈಯಲ್ಲಿ ಸರಿಯಾಗಿ ಇಕ್ಕಿಸಿಕೊಳ್ಳುವುದು ಕಾಮನ್ ಆಗುತ್ತಿದೆ. ಅದೆಷ್ಟೋ ಕೇಸ್ ಬೆಳಕಿಗೆ ಬರುವುದಿಲ್ಲ, ಆದರೆ ಇನ್ನೂ ಅದೆಷ್ಟೋ ಪ್ರಕರಣಗಳು ವೈರಲ್ ಆಗುತ್ತವೆ. ಹೀಗೆ, ಕನ್ನಡಿಗರ ಬಗ್ಗೆ ಸೂಪರ್ ಮಾರ್ಕೆಟ್ ಒಂದರ ಎದುರು 'ನಾಯಿಗಳು ಹಾಗೂ ಕನ್ನಡಿಗರಿಗೆ ಪ್ರವೇಶವಿಲ್ಲ' ಎಂಬ ಬೋರ್ಡ್ ಒಂದನ್ನ ಹಾಕಲಾಗಿದೆ ಎಂದು ಫೋಟೋ ಒಂದನ್ನ ವೈರಲ್ ಮಾಡಲಾಗಿತ್ತು. ಈ ಫೋಟೋ ವೈರಲ್ ಆದ ನಂತರ ಕನ್ನಡಿಗರು ರೊಚ್ಚಿಗೆದ್ದು ಆಕ್ರೋಶ ಹೊರ ಹಾಕಿದ್ದರು. 'ಟೀಮ್ ಜಾಟ್ ಅಫೀಶಿಯಲ್' ಎಂಬ ಟ್ವಿಟ್ಟರ್ ಅಕೌಂಟ್ ಈ ರೀತಿಯ ಫೋಟೋ ಷೇರ್ ಮಾಡಿತ್ತು ಎಂಬ ಆರೋಪ ಕೇಳಿಬಂದಿತ್ತು. ಕೊನೆಗೂ, ಕೋಟಿ ಕೋಟಿ ಕನ್ನಡಿಗರ ತಾಕತ್ ಗೊತ್ತಾದ ಹೇಡಿ ಈಗ...

ಕನ್ನಡ ಭಾಷೆ & ಕನ್ನಡ ನಾಡಿನ ಬಗ್ಗೆ...
ಕರ್ನಾಟಕ & ಕನ್ನಡ ಭಾಷೆ ಎಂದರೆ ಜಗತ್ತಿನ ಮೂಲೆ ಮೂಲೆಯಲ್ಲೂ ಗೌರವ ಕೊಡುತ್ತಾರೆ. ಜಗತ್ತಿನ ಎಲ್ಲಾ ಭಾಷೆಗಳ ರಾಣಿ ಎಂದು 'ಕನ್ನಡ' ಭಾಷೆಯ ಕರೆಯುತ್ತಾರೆ. ಇಂತಿಪ್ಪ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಕೂಡ ಇದೆ. ತಮಿಳು ಭಾಷೆಯನ್ನ ಬಿಟ್ಟರೆ ಕನ್ನಡವೇ ಜಗತ್ತಿನ ಹಳೆಯದಾದ ಭಾಷೆ. ಹೀಗೆ ಕನ್ನಡಿಗರು ಮಾತನಾಡುವ ಭಾಷೆ ಕನ್ನಡ ಭಾಷೆಯಾಗಿದೆ.
ಇಷ್ಟೆಲ್ಲಾ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ನಮ್ಮ ಕನ್ನಡ ಭಾಷೆ & ಕನ್ನಡ ನಾಡಿನ ಬಗ್ಗೆ ಮಾತನಾಡುವ ಉತ್ತರ ಭಾರತ ಸೇರಿದಂತೆ ಬೇರೆ ಬೇರೆ ರಾಜ್ಯದವರ ಉಪಟಳ ಕಡಿಮೆ ಆಗುತ್ತಿಲ್ಲ ಎಂಬ ಆರೋಪ ಇದೆ. ಅದೇ ರೀತಿ 'ಟೀಮ್ ಜಾಟ್ ಅಫೀಶಿಯಲ್' ಎಂಬ ಟ್ವಿಟ್ಟರ್ ಅಕೌಂಟ್ ಒಂದು ಫೋಟೋ ಷೇರ್ ಮಾಡಿತ್ತು, ಷೇರ್ ಮಾಡಿದ್ದ ಫೋಟೋದಲ್ಲಿ ಸೂಪರ್ ಮಾರ್ಕೆಟ್ ಒಂದರ ಎದುರು 'ನಾಯಿಗಳು ಹಾಗೂ ಕನ್ನಡಿಗರಿಗೆ ಪ್ರವೇಶವಿಲ್ಲ' ಎಂಬ ರೀತಿಯ ಬೋರ್ಡ್ ಹಾಕಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಹೀಗೆ ಮತಾನಡಿದ್ದವನ ಬುಡವೇ ಈಗ ಅಲ್ಲಾಡಿ ಹೋಗಿದೆ!
ಬೆಂಗಳೂರು ಪೊಲೀಸರನ್ನು ಕೂಡ...
'ನಾಯಿಗಳು ಹಾಗೂ ಕನ್ನಡಿಗರಿಗೆ ಪ್ರವೇಶವಿಲ್ಲ' ಎಂಬ ಬೋರ್ಡ್ ಫೋಟೋ ಹಾಕಿದ್ದವ ಈಗ ಕನ್ನಡಿಗರ ತಾಕತ್ ಕಂಡು ಬೆಚ್ಚಿಬಿದ್ದಿದ್ದಾನೆ, ಅಲ್ಲದೆ ಕ್ಷಮೆ ಕೇಳಿ ಒಂದು ಪೋಸ್ಟ್ ಹಾಕಿರುವ ಆತ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾನೆ. ಅಲ್ಲದೆ ಬೆಂಗಳೂರು ಪೊಲೀಸರನ್ನು ಈ ಪೋಸ್ಟ್‌ಗೆ ಟ್ಯಾಗ್ ಮಾಡಿದ್ದಾನೆ. ಅಡ್ಮಿನ್ ಬಗ್ಗೆ ಇದೀಗ ಬುದ್ಧಿ ಮಾತು ಹೇಳುತ್ತಿರುವ ಕನ್ನಡಿಗರು ಈ ರೀತಿ ಇನ್ನೊಂದು ಬಾರಿ ರಿಪೀಟ್ ಆಗಬಾರದು ಹುಷಾರ್ ಎನ್ನುತ್ತಿದ್ದಾರೆ... ಒಟ್ಟನಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು, ಇದೇ ರೀತಿ ನಡೆದರೆ ದೊಡ್ಡ ಹೊರಾಟ ಅಗತ್ಯವೆಂಬ ಮಾತು ಕೂಡ ಕೇಳಿಬರುತ್ತಿದೆ.
ಕನ್ನಡಿಗರಲ್ಲಿ ಒಗ್ಗಟ್ಟು ಮೂಡುತ್ತಾ?
ಕನ್ನಡ & ಕನ್ನಡಿಗರ ತಂಟೆಗೆ ಪದೇ ಪದೇ ಪರಭಾಷಿಕರು ಬರುತ್ತಿದ್ದು, ಇದರಿಂದ ಇದೀಗ ದೊಡ್ಡ ಗಲಾಟೆಗಳು ನಡೆಯುತ್ತಿವೆ ಎಂಬುದು ನೆಟ್ಟಿಗರ ವಾದ. ಇದರ ಜೊತೆಗೆ ಕನ್ನಡಿಗರ ನಡುವೆ ಒಗ್ಗಟ್ಟು ಮೂಡಬೇಕಿದೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಮತ್ತಷ್ಟು ಸಮಸ್ಯೆ ಗ್ಯಾರಂಟಿ ಎಂಬ ಸಲಹೆಯನ್ನ ಕೂಡ ನೆಟ್ಟಿಗರು ಇದೀಗ ನೀಡುತ್ತಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕನ್ನಡಿಗರಲ್ಲಿ ಒಗ್ಗಟ್ಟು ಮೂಡಲಿದೆಯಾ? ಅನ್ನೋದನ್ನ ಈಗ ಕಾದು ನೋಡಬೇಕಿದೆ ಎಂಬ ಮಾತನ್ನ ಕೂಡ ಆಡಲಾಗುತ್ತಿದೆ. ಹೀಗಾಗಿ ಈ ವಿಚಾರ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿದೆ.












Click it and Unblock the Notifications