ಸಿದ್ದರಾಮಯ್ಯ ರಾಜೀನಾಮೆ: ಯಡಿಯೂರಪ್ಪ ನೀಡಿದ ಸಲಹೆ ಏನು?
ಶಿವಮೊಗ್ಗ , ಸೆಪ್ಟೆಂಬರ್ 04: ಮುಡಾ ಹಗರಣದ ಕುರಿತು ಬಹುತೇಕ ಸಿದ್ದರಾಮಯ್ಯ ತೀರ್ಪು ಬಂದ ಬಳಿಕ 100 ಕ್ಕೆ 100 ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತದೆ. ತೀರ್ಪು ಬರುವ ಮುನ್ನವೇ ಗೌರವಿತವಾಗಿ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಲಹೆ ನೀಡಿದರು.
ಈ ಕುರಿತು ಬುಧವಾರ ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಹಗರಣದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇಲ್ಲ. ಇದು ಜಗಜ್ಜಾಯರಾಗಿರುವ ಸಂಗತಿ, ನೋಡೋಣ ನಾಳೆ ಏನೇನು ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಕೋವಿಡ್ ನಲ್ಲಿ ಅವ್ಯಹಾರ ವಿರುದ್ಧ ಕೇಸ್ ದಾಖಲಿಸು ಕಾಂಗ್ರೆಸ್ ಸಿದ್ಧತೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಇದರಲ್ಲಿ ಅರ್ಥ ಇಲ್ಲ. ಸರ್ಕಾರ ಸರ್ವ ಸ್ವಾತಂತ್ರ್ಯ ಇದ್ದಾರೆ, ಅವರು ಏನು ಬೇಕಾದ್ರು ಕ್ರಮ ಕೈಗೊಳ್ಳಲಿ. ಕಾನೂನು ರೀತಿಯಲ್ಲಿ ಎದುರಿಸೋಣ, ನಾವು ಯಾವುದೇ ಹೋರಾಟ ಮಾಡುವುದಿಲ್ಲ. ಅಂತಿಮ ಹಂತಕ್ಕೆ ಬಂದಿರುವುದರಿಂದ ಸಹಜವಾಗಿ ಸಿಎಂ ಅವರೇ ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತದೆ. ನೋಟಿಸ್ ಕೊಟ್ಟಿರುವುದು ರಾಜ್ಯಪಾಲರಿಗೆ ಬಿಟ್ಟ ವಿಚಾರ, ಅವರು ಏನು ಮಾಡ್ತಾರೋ ನೋಡೋಣ. ರಾಜ್ಯಪಾಲರು ಏನು ಮಾಡ್ತಾರೆ ಊಹೆ ಮಾಡಲು ಸಾಧ್ಯವಿಲ್ಲ ಎಂದರು.
ಈ ವೇಳೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸಂಸತ್ ಅಧಿವೇಶನ ಸಮಯದಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದೆ. ಶಿವಮೊಗ್ಗಕ್ಕೆ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ನೀಡುವಂತೆ ಮನವಿ ಮಾಡಿದ್ದೆ, ಎಂಎಸ್‌ಎಂಈ ಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದ್ದೇ, ಅದಕ್ಕೆ ಆಗಸ್ಟ್ 18 ರಂದು ಧನಾತ್ಮಕ ಪ್ರತಿಕ್ರಿಯೆ ಬಂದಿದೆ. ನಾಳೆ ಎಸ್ಐಡಿಬಿ ರೀಜನಲ್ ಮ್ಯಾನೇಜರ್ ಇಂಡಸ್ಟ್ರಿಯಲ್ ಏರಿಯಾಗೆ ಭೇಟಿ ನೀಡಲಿದ್ದಾರೆ.
ಸುರಂಗ ಮಾರ್ಗದ ಸರ್ವೆಗೆ ಟೆಂಡರ್ ಕರೆಯಲಾಗಿತ್ತು. ಅದನ್ನು ಕ್ಯಾನ್ಸಲ್ ಮಾಡಿ ಮತ್ತೆ ಟೆಂಡರ್ ಕರೆಯಲಾಗಿದೆ, ನನ್ನ ಅಭಿಪ್ರಾಯದಂತೆ ಘಾಟ್‌ನಲ್ಲಿ ಸುರಂಗ ಮಾರ್ಗ ಸುರಕ್ಷಿತ ಎಂಬುದು ನನ್ನ ಅಭಿಪ್ರಾಯ. ಅರಣ್ಯ ಭೂಮಿ ನಾಶವಾದರೆ ಕಂದಾಯ ಭೂಮಿ ನೀಡುತ್ತಿದ್ದೇವೆ. ಪರಿಸರವಾದಿಗಳು ನಮಗೆ ಸಹಕಾರ ನೀಡಬೇಕು. ವಿಮಾನ ನಿಲ್ದಾಣದ ಪರವಾನಗಿ ಪ್ರತಿ ವರ್ಷ ನವೀಕರಣವಾಗಬೇಕು. ಈ ಬಾರಿ ಒಂದು ತಿಂಗಳಿಗೆ ಮಾಡಿದ್ದಾರೆ, ಈ ತಿಂಗಳ ಸೆ.27ರ ಒಳಗೆ ನಿಯಮಗಳನ್ನು ಪೂರೈಸಬೇಕು.
ಪ್ರೊಸಿಜರ್ ಮಾಡುವಲ್ಲಿ ಸಮಯ ಕಳೆಯುತ್ತಿದೆ. ಈ ಬಗ್ಗೆ ರಾಜ್ಯ ಸರಕಾರಕ್ಕೂ ಮನವಿ ಮಾಡಿದ್ದೇವೆ, ಫೈರ್ ಜೆಟ್ ವಾಹನಕ್ಕೆ ಮೆಕಾನಿಕ್ ಇಲ್ಲ. ನೈಟ್ ಲ್ಯಾಂಡಿಂಗ್ ಕಾಮಗಾರಿಗೆ ಅನುಮತಿ ಸಿಕ್ಕಿದೆ, ಲೈಸನ್ಸ್ ನವೀಕರಣಕ್ಕೆ ಅನೇಕ ನಿಯಮ ಪೂರೈಸಬೇಕಿದೆ. ಈ ಬಗ್ಗೆ ವರದಿ ಸಿದ್ದವಾಗುತ್ತಿದೆ ಎಂದು ಹೇಳಿದರು.
ಆಯನೂರು ಮಂಜುನಾಥ್ ಬಿಎಸ್ವೈ ಕುಟುಂಬದ ಬಗ್ಗೆ ಭ್ರಷ್ಟಾಚಾರ ಆರೋಪ ವಿಚಾರದ ಕುರಿತು ಮಾತನಾಡಿ, ಆಯನೂರು ಮಂಜುನಾಥ್ ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಜನರಿಗೆ ಸಮಾಜಕ್ಕೆ ಈ ಬಗ್ಗೆ ಗೊತ್ತಿದೆ, ಇದರಲ್ಲಿ ನಮ್ಮ ತಪ್ಪಿಲ್ಲ ಎಂಬುದು ಜನರಿಗೆ ಗೊತ್ತಿದೆ. ನಮ್ಮ ಆಸ್ಪತ್ರೆ ಬಗ್ಗೆ ಮಾತನಾಡಿದ್ದಾರೆ, ಕೆ ಐ ಎ ಡಿ ಪಿ ಮೂಲಕ ರೈತರಿಂದ ಜಮೀನನ್ನು ತೆಗೆದುಕೊಂಡಿದ್ದೇನೆ. ರೈತರಿಂದ ಜಮೀನನ್ನು ಕೆ ಐ ಡಿ ಬಿ ಗೆ ಕೊಡಿಸಿ ನಾವು ಪಡೆದಿದ್ದೇವೆ. ಏಕ ಗವಕ್ಷಿ ಮೂಲಕ ಎಲ್ಲಾ ಸೌಲಭ್ಯ ಸಿಗುತ್ತದೆ ಎಂದು ಈ ರೀತಿ ಮಾಡಿದ್ದೆವು. ಆಯನೂರು ಮಂಜುನಾಥ್ ಅಂತಹ ಹಿರಿಯರು ಯೋಚಿಸಿ ಮಾತನಾಡಬೇಕಿತ್ತು ಎಂದರು.
ನಮ್ಮ ಸರ್ಕಾರ ಇರುವವರೆಗೂ ಶಿಕಾರಿಪುರ ಮಾರ್ಗದಲ್ಲಿ ಟೋಲ್ ಹಾಕಿರಲಿಲ್ಲ. 30 ಕಿ.ಮೀ ಒಳಗೆ ಇನ್ನೊಂದು ಟೋಲ್ ಹಾಕಿದ್ದಾರೆ, ಅದು ನಿಯಮಬಾಹಿರ ಮೂರರಿಂದ ನಾಲ್ಕು ಪಟ್ಟು ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ. ಸರ್ಕಾರ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ಇದನ್ನು ತಂದಿದ್ದೇವೆ.
ಟೋಲ್ ಟೆಂಡರ್ ತಮಗೆ ಬೇಕಾದವರಿಗೆ ಕೊಡಿಸಿದ್ದಾರೆ ಎನ್ನುವ ಆರೋಪ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಆಯನೂರು ಮಂಜುನಾಥ್ ಎಲ್ಲಿ ಹೇಳುತ್ತಾರೋ ಅಲ್ಲಿ ಬಂದು ಪ್ರಮಾಣ ಮಾಡಲು ನಾನು ಸಿದ್ಧಲಿದ್ದೇನೆ ಎಂದು ಬಿ ವೈ ರಾಘವೇಂದ್ರ ಅವರು ಹೇಳಿದರು.












Click it and Unblock the Notifications