ಮುಖ್ಯಮಂತ್ರಿ ಬದಲಾವಣೆ ಕುರಿತು ಇಂಧನ ಸಚಿವ ಕೆಜೆ ಜಾರ್ಜ್‌ ಹೇಳಿದ್ದೇನು?

ಕೋಲಾರ, ಆಗಸ್ಟ್‌ 31: ಐದು ವರ್ಷ ಮಾತ್ರವಲ್ಲ, 10 ವರ್ಷಗಳ ಕಾಲ ರಾಜ್ಯದಲ್ಲಿ ನಾವೇ ಅಧಿಕಾರದಲ್ಲಿ ಇರುತ್ತೇವೆ. ನಾವೆಲ್ಲರೂ ಸಿಎಂ ಸಿದ್ದರಾಮಯ್ಯ ಪರ ಇದ್ದೇವೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಹೈಕಮಾಂಡ್ ಸಹ ಸಿದ್ದರಾಮಯ್ಯ ಪರ ಇದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದರು.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇರೋವರೆಗೂ ಕಾಂಗ್ರೆಸ್ ಪಕ್ಷವನ್ನು ಯಾರೂ ಏನೂ ಮಾಡೋಕೆ ಆಗೋದಿಲ್ಲ. ಬಿಜೆಪಿ - ಜೆಡಿಎಸ್ ನವರು ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ನಾವು 136 ಕಾಂಗ್ರೆಸ್ ಶಾಸಕರು ಬಂಡೆ ಕಲ್ಲಿನಂತೆ ಇದ್ದೇವೆ ಎಂದು ಕೋಲಾರದಲ್ಲಿ ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದರು.

There is no change of CM for any reason Said Minister KJ George

ಬಡವರಿಗೆ ಕಾಂಗ್ರೆಸ್ ಪಕ್ಷ ಅನುಕೂಲ ‌ಮಾಡಿದಷ್ಟು ಯಾವುದೇ ಪಕ್ಷ ಮಾಡಿಲ್ಲ. ಬಿಜೆಪಿಯವರು ಬಡವರಿಗಾಗಿ ಏನಾದ್ರು ಮಾಡಿದ್ದಾರಾ? ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರೂಪಾಯಿ ಕೊಡುತ್ತಿರುವುದು ಬಡವರಿಗಾಗಿ ಅಲ್ವಾ? 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಬಡವರಿಗಾಗಿ ಏನು ಯೋಜನೆಗಳನ್ನು ಕೊಟ್ಟಿದೆ ಎಂದು ಪ್ರಶ್ನಿಸಿದರು.

ಈಗ ಮೂಡಾ ವಿಚಾರದಲ್ಲಿ ವಿರೋಧ ಪಕ್ಷಗಳು ಏನು ಮಾಡುತ್ತಿದ್ದಾರೋ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲೂ ಹೀಗೆ ನಡೆದಿದ್ದು. ನೂರು ಸುಳ್ಳುಗಳನ್ನು ಹೇಳಿ ಏನು ಮಾಡಿದ್ರು? ಪ್ರಕರಣ ಸಿಐಡಿ, ಸಿಬಿಐ, ಹೈಕೋರ್ಟ್ ನಂತರ ಸುಪ್ರೀಂಕೋರ್ಟ್ ವರೆಗೂ ಹೋಗಿತ್ತು. ಕೊನೆಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಅದೇ ರೀತಿ ಮೂಡ ವಿಚಾರದಲ್ಲೂ ಸುಳ್ಳಿನ ಕಂತೆಗಳನ್ನು ಹೇಳುತ್ತಿದ್ದಾರೆ ಅಷ್ಟೇ. ಕಾನೂನು ಪ್ರಕಾರ ಏನಾದ್ರು ಎವಿಡೆನ್ಸ್ ಇಟ್ಟಿದ್ದಾರಾ? ಎಂದು ಕೆಜೆ ಜಾರ್ಜ್ ಪ್ರಶ್ನಿಸಿದರು.

ಈ ಹಿಂದೆ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಇದ್ದಾಗ ಆಪರೇಷನ್ ಕಮಲ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿತು. ಆದ್ರೆ ಈಗ ಆಗಲ್ಲ, ನಮಗೆ ಜನಾದೇಶವಿದೆ. ಬಿಜೆಪಿ ಪಕ್ಷವು ನೂರು ಸುಳ್ಳುಗಳನ್ನು ಹೇಳಿ ಒಂದು ಸತ್ಯ ಮಾಡಲು ಹೊರಟಿದ್ದಾರೆ ಈಗಾಗಲೇ ಮೋದಿಯವರ ವರ್ಚಸ್ಸು ಮುಗಿದಿದೆ ಇನ್ನೂ ನಾಲ್ಕು ತಿಂಗಳಲ್ಲಿ ಕೇಂದ್ರ ಸರಕಾರವು ಪತನವಾಗಿ ಮೋದಿಯವರು ಅಧಿಕಾರ ಕಳೆದುಕೊಳ್ಳಲಿದ್ದು ದೇಶದಲ್ಲಿ ಮುಂದಿನ 15 ವರ್ಷ ರಾಹುಲ್ ಗಾಂಧಿಗೆ ಒಳ್ಳಯ ಕಾಲ ಬರಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.

ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕೆ.ವಿ ಗೌತಮ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಬಾಬು, ಸೀಸಂದ್ರ ಗೋಪಾಲಗೌಡ, ಪದವೀಧರ ಘಟಕದ ಜಿಲ್ಲಾ ಅಧ್ಯಕ್ಷ ಪಿ.ಎಸ್ ಸುಧೀರ್, ಮುಖಂಡರಾದ ಜಯದೇವ್, ರವಿರಾಮಸ್ವಾಮಿ, ಒಬಿಸಿ ಮಂಜುನಾಥ್, ರತ್ನಮ್ಮ, ಮೈಲಾಂಡಹಳ್ಳಿ ಮುರಳಿ, ಅಶ್ವಥ್ ರೆಡ್ಡಿ, ರಾಮಯ್ಯ, ಮುಂತಾದವರು ಇದ್ದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+