Janardhan Reddy: ನಾನು ಕಂಡಂತೆ ಬಿಜೆಪಿಯಲ್ಲಿ ಆ ಸಂಸ್ಕೃತಿ ಇಲ್ಲ ಬಿಡ್ರಿ: ಜನಾರ್ದನರೆಡ್ಡಿ ಹೇಳಿದ್ದೇನು?

ಕೊಪ್ಪಳ, ಸೆಪ್ಟೆಂಬರ್‌ 18: ನಾನು ಕಂಡಂತೆ ಹಣ ಪಡೆದು ಟಿಕೆಟ್‌ ಕೊಡೋ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ ಎಂದು ಶಾಸಕ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ ಜನಾರ್ದನರೆಡ್ಡಿ ಹೇಳಿದರು.

ಈ ಕುರಿತು ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚೈತ್ರಾ ಕುಂದಾಪುರ ರೀತಿಯ ವಂಚನೆ ಪ್ರಕರಣಗಳು ಎಲ್ಲ ರಾಜಕೀಯ ಪಕ್ಷದಲ್ಲಿಯೂ ನಡೆಯುತ್ತಲೆ ಇರುತ್ತೆ. ಪಕ್ಷಗಳಲ್ಲಿ ವಂಚನೆ ಇದೇನು ಹೊಸದಲ್ಲ. ಆದರೆ ಬಿಜೆಪಿಯಲ್ಲಿ ನಾನು ಕಂಡಿರುವ ಹಾಗೆ ಹಣ ಪಡೆದು ಟಿಕೆಟ್ ನೀಡುವ ಸಂಸ್ಕೃತಿ ಇಲ್ಲ.ಇದೇ ಮೊದಲ ಬಾರಿ ಬಿಜೆಪಿಯಲ್ಲಿ ಈ ರೀತಿ ಮಾತುಗಳನ್ನು ಕೇಳುತ್ತಿದ್ದೇನೆ ಎಂದು ಹೇಳಿದ ಅವರು, ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸುತ್ತಾರೆ, ಚೈತ್ರಾ ಕುಂದಾಪುರ ಪ್ರಕರಣದ ಸಂಪೂರ್ಣ ಮಾಹಿತಿ ನನಗಿಲ್ಲ ಎಂದರು.

There Is A Cheating In Every Political Party MLA Janardhana Reddy Said

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಸೆಂಬರ್, ಜನವರಿಯಲ್ಲಿ ನಿರ್ಧರಿಸಲಾಗುವುದು. ಈಗಾಗಲೇ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಗಂಗಾವತಿಯು ಕಿಷ್ಕಿಂದಾ ಜಿಲ್ಲೆಯಾಗಬೇಕೆಂಬ ಹೋರಾಟ ನಡೆದಿದೆ. ನಾನು ಜಿಲ್ಲೆಯ ಜನರ ಅಭಿಪ್ರಾಯದಂತೆ ಇರುತ್ತೇನೆ, ಅಂಜನಾದ್ರಿ ಅಭಿವೃದ್ಧಿಗೆ ಹಿಂದಿನ ಸರಕಾರ ಅನುದಾನ ಘೋಷಿಸಿತ್ತು. ನಾನು ವಿಧಾನಸಭೆಯಲ್ಲಿ ಚರ್ಚೆಯ ನಂತರ ಈಗ ಅಭಿವೃದ್ದಿ ಕಾರ್ಯಗಳು ನಡೆದಿವೆ. ಹಿಟ್ನಾಳದಿಂದ ಮರಳಿಯವರೆಗೂ ಚತುಷ್ಪಥ ರಸ್ತೆ ಕೇಂದ್ರ ಸರಕಾರದಿಂದ 1800 ಕೋಟಿ ರೂಪಾಯಿಯ ಯೋಜನೆಗೆ ಟೆಂಡರ್ ಕರೆಯಲಾಗುತ್ತಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+