ಬೆಲ್ಲ ತಿನ್ನುವವರೇ ಎಚ್ಚರ! ಇದರಲ್ಲಿ ಪತ್ತೆಯಾಗಿದ್ದೇನು ಗೊತ್ತಾ?
ಸಕ್ಕರೆಗಿಂತ ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ವೈದ್ಯರು. ಆದರೆ ಬೆಲ್ಲದ ಬಗ್ಗೆಯೂ ಶಾಕಿಂಗ್ ವಿಚಾರ ಹೊರಬಿದ್ದಿದ್ದು, ಬೆಲ್ಲದಲ್ಲಿಯೂ ಕಲಬೆರಕೆ ವಸ್ತುಗಳು ಬಳಕೆ ಮಾಡುವುತ್ತಿರುವುದು ದೃಢವಾಗಿದೆ. ಇಂತಹ ಬೆಲ್ಲ ಸೇವಿಸುವುದರಿಂದ ಜನರ ಆರೋಗ್ಯ ಹದಗೆಡುವುದು ಗ್ಯಾರಂಟಿ ಎನ್ನಲಾಗುತ್ತಿದೆ.
ಆಹಾರ ಹಾಗೂ ಗುಣಮಟ್ಟ ಇಲಾಖೆಯು ಇತ್ತೀಚೆಗೆ ವಿವಿಧ ಮಾದರಿಯ ಬೆಲ್ಲವನ್ನ ಸಂಗ್ರಹಿಸಿತ್ತು. ಇದರ ಪರೀಕ್ಷೆಗೆ ಒಳಪಡಿಸಲು ಲ್ಯಾಬ್‌ಗೆ ಕೂಡ ಕಳುಹಿಸಿತ್ತು. ಈ ವರದಿಯಲ್ಲಿ ಬೆಲ್ಲದಲ್ಲಿ ಕೃತಕ ಬಣ್ಣ ಬಳಸಿರುವುದು ದೃಢವಾಗಿದೆ. ಇದು ಆರೋಗ್ಯಕ್ಕೆ ಮಾರಕ ಎಂದೂ ಹೇಳಲಾಗಿದೆ.

ಬೆಲ್ಲವನ್ನು ಹೆಚ್ಚಾಗಿ ದೇವಸ್ಥಾನಗಳಲ್ಲಿ ಪ್ರಸಾದಕ್ಕೆ ಹಾಗೂ ಇನ್ನಿತರ ಸಿಹಿ ಉದ್ದೇಶಗಳಿಗೆ ಪ್ರಧಾನವಾಗಿ ಬಳಕೆ ಮಾಡಲಾಗುತ್ತಿದ್ದು, ಬೆಲ್ಲವನ್ನು ಬಳಸುವಾಗ ಜಾಗ್ರತೆ ಇರಲಿ ಎಂದು ಮುಜರಾಯಿ ಇಲಾಖೆ ಧಾರ್ಮಿಕ ಹಾಗೂ ದತ್ತಿ ಇಲಾಖೆಗೆ ಆಹಾರ ಸುರಕ್ಷತೆ ಆಯುಕ್ತರು ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಇನ್ನು ಬೆಲ್ಲದಲ್ಲಿ ಕಲಬೆರಕೆಯ ಬಣ್ಣ ಬಳಸಿರುವ ವಿಚಾರ ಬೆಳಕಿಗೆ ಬಂದ ಕೂಡಲೇ ಸಿಹಿ ಅಡುಗೆಗಳಿಗೆ ಹೆಚ್ಚಾಗಿ ಬೆಲ್ಲವವರೆಲ್ಲ ಆತಂಕಕ್ಕೆ ಒಳಗಾಗಿದ್ದಾರೆ. ಬೆಲ್ಲವನ್ನು ಆರೋಗ್ಯಕರ ಎಂದು ಹೇಳಲಾಗಿತ್ತು. ಇದರಲ್ಲೂ ಕಲಬೆರಕೆ ವಸ್ತುಗಳನ್ನು ಬಳಸಿದರೆ ಏನು ಮಾಡುವುದು ಎಂಬ ಗೊಂದಲದಲ್ಲಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಈ ಕಲಬೆರಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಎಲ್ಲೆಡೆ ದಾಳಿ ನಡೆಸಬೇಕು ಎಂದು ಹೇಳುತ್ತಿದ್ದಾರೆ.
ಆರೋಗ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆಯು ಈ ಹಿಂದೆ ಕಲಬೆರಕೆ ಆಹಾರ ಪದಾರ್ಥಗಳ ವಿರುದ್ಧ ಸಮರ ಸಾರಿತ್ತು. ಬಳಿಕ ಗೋಬಿ, ಕಬಾಬ್, ಕಾಟನ್ ಕ್ಯಾಂಡಿ, ಪಾನಿಪುರಿ ಸೇರಿದಂತೆ ವಿವಿಧ ತಿನಿಸುಗಳ ಮೇಲೆ ಆಹಾರ ಇಲಾಖೆ ನಿರ್ಬಂಧಗಳನ್ನೂ ಹೇರಿತ್ತು. ಈ ಸಂಬಂಧ ಹೋಟೆಲ್‌ಗಳು, ಬೀದಿಬದಿ ವ್ಯಾಪಾರಿಗಳಿಗೂ ಖಡಕ್ ಸೂಚನೆ ನೀಡಿತ್ತು.

ಆಹಾರ ಪದಾರ್ಥಗಳಲ್ಲಿ ಕೆಮಿಕಲ್ ಹಾಗೂ ಕೃತಕ ಬಣ್ಣ ಬಳಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿತ್ತು. ಬಾಯಿ ಚಪ್ಪರಿಸಿ ತಿನ್ನುತ್ತಿದ್ದ ಪಾನಿಪುರಿ, ಕಾಫಿಪುಡಿ, ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಕಬಾಬ್‌ನಲ್ಲಿ ಕೆಮಿಕಲ್ ಬಳಕೆ ಪತ್ತೆಯಾಗಿತ್ತು. ಈ ಕುರಿತಾಗಿ ಆಹಾರ ಗುಣಮಟ್ಟ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಈಗ ಬೆಲ್ಲದ ವಿಚಾರವನ್ನೂ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಲಾಗುತ್ತಿದೆ.
ಆಹಾರ ಇಲಾಖೆಯು ಈಗಾಗಲೇ ಹಾನಿಕಾರ ಕಲರ್ ನಿಷೇಧಿಸಿದೆ. ಆದರೂ ಕೆಲವು ಹೋಟಲ್ಗಳಲ್ಲಿ ಈ ಮಾರಕ ಬಣ್ಣ ಬಳಕೆ ಮಾಡುತ್ತಿದ್ದು, ಆಹಾರ ಇಲಾಖೆ ದಾಳಿ ನಡೆಸಿತ್ತು. ನಿಷೇಧಿತ ಕಲರ್ ಬಳಕೆ, ಸ್ವಚ್ಛತೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಹಲವು ಹೋಟೆಲ್‌ಗಳಿಗೆ ದಂಡ ಕೂಡ ವಿಧಿಸಿತ್ತು..












Click it and Unblock the Notifications