ಏಪ್ರಿಲ್ 14ರ ಬಳಿಕ ಮದ್ಯ ಮಾರಾಟ ಮಾಡುವ ಚಿಂತನೆ: ಸಿಎಂ ಬಿಎಸ್‌ವೈ

ಬೆಂಗಳೂರು,

ಏ.
13:
ಕೊರೊನಾ
ವೈರಸ್
ಹರಡದಂತೆ
ತಡೆಯಲು
ಇಡೀ
ದೇಶಾದ್ಯಂತ
ಲಾಕ್‌ಡೌನ್
ಜಾರಿಗೆ
ತರಲಾಗಿದೆ.
ಮನೆಯಿಂದ
ಜನರು
ಹೊರಗೆ
ಬರದಂತೆ
ತಡೆಯಲಾಗಿದೆ.
ಮೊದಲ
ಹಂತದಲ್ಲಿ
21
ದಿನಗಳ
ಲಾಕ್‌ಡೌನ್
ಜಾರಿ
ಮಾಡಲಾಗಿತ್ತು.
ಈಗ
ಮತ್ತೆ
ಏಪ್ರಿಲ್
30ರ
ವರೆಗೆ
ಲಾಕ್‌ಡೌನ್
ಜಾರಿ
ಮಾಡಲಾಗಿದೆ.
ಕೊರೊನಾ
ವೈರಸ್
ಹರಡದಂತೆ
ತಡೆಯಲು
ಇಡೀ
ದೇಶಾದ್ಯಂತ
ಲಾಕ್‌ಡೌನ್
ಜಾರಿಗೆ
ತರಲಾಗಿದೆ.
ಆದರೂ
ಭಾರತದಲ್ಲಿ
8844
ಜನರಿಗೆ
ಸೋಂಕು
ತಗುಲಿದ್ದು,
308
ಜನರು
ಕೊರೊನಾ
ವೈರಸ್‌ಗೆ
ಬಲಿಯಾಗಿದ್ದಾರೆ.
ರಾಜ್ಯದಲ್ಲಿಯೂ
232
ಜನರಿಗೆ
ಸೋಂಕು
ತಗುಲಿದ್ದು,
6
ಜನರು
ಕೊರೊನಾ
ವೈರಸ್‌ಗೆ
ಬಲಿಯಾಗಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಕೊರೊನಾ

ಸೋಂಕು
ತಗುಲಿ
ಮೃತರಾದವರಿಗಿಂದ
ಮದ್ಯ
ಸಿಗದೆ
ಸತ್ತವರ
ಸಂಖ್ಯೆ
ಹೆಚ್ಚಾಗಿದೆ
ಎಂಬ
ವರದಿಗಳಿಗೆ.
ಅದು
ಸೂಕ್ತ
ತನಿಖೆಯಿಂದಷ್ಟೆ
ಹೊರಗೆ
ಬರಬೇಕಿದೆ.
ಮಧ್ಯೆ
ಮುಖ್ಯಮಂತ್ರಿ
ಬಿ.ಎಸ್.
ಯಡಿಯೂರಪ್ಪ
ಅವರು
ಎಂಎಸ್‌ಐಎಲ್
ಮೂಲಕ
ಮದ್ಯ
ಮಾರಾಟ
ಮಾಡುವ
ಚಿಂತನೆ
ಇದೆ
ಎಂದು
ಹೇಳಿಕೆ
ಕೊಟ್ಟಿದ್ದಾರೆ.
ಆದರೆ
ಇದಕ್ಕೆ
ಮದ್ಯ
ಮಾರಾಟಗಾರರ
ಸಂಘಟನೆ
ವಿರೋಧ
ವ್ಯಕ್ತಪಡಿಸಿದೆ.

id='are-slot-2'
class='oiad
oi-axt
oiadv'>

ಕಳೆದ 24 ದಿನಗಳಿಂದ ಮದ್ಯವಿಲ್ಲದೆ ವ್ಯಸನಿಗಳ ಪರದಾಟ

ಕಳೆದ 24 ದಿನಗಳಿಂದ ಮದ್ಯವಿಲ್ಲದೆ ವ್ಯಸನಿಗಳ ಪರದಾಟ

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನಿಂದ 6 ಮೃತಪಟ್ಟಿದ್ದಾರೆ. ಆದರೆ ಅದಕ್ಕಿಂತ ಮೂರು ಪಟ್ಟು ಹೆಚ್ಚು ಅಂದರೆ ಸುಮಾರು 20ಕ್ಕೂ ಹೆಚ್ಚು ಜನ ಮದ್ಯವ್ಯಸನಿಗಳು ಮದ್ಯ ಸಿಗದೇ ಇದ್ದುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡಗಳು ಹೆಚ್ಚುತ್ತಿವೆ. ಮದ್ಯ ಸಿಗದೆ ಇರುವುದರಿಂದ ವ್ಯಸನಿಗಳು ಅತಿರೇಕದ ವರ್ತನೆಗಳನ್ನು ಮಾಡಿದ ಉದಾಹರಣೆಗಳು ವರದಿಯಾಗುತ್ತಿವೆ. ಈ ಹಿಂದೆಯೆ ಮದ್ಯ ಮಾರಾಟದ ಬಗ್ಗೆ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮದ್ಯ ಬೇಕಾದವರು ಏಪ್ರಿಲ್ 14ರ ವರೆಗೆ ಕಾಯಲೇ ಬೇಕು ಎಂದು ನಗುತ್ತಲೆ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ಕೊಟ್ಟಿದ್ದರು. ಇದೀಗ ನಾಳೆಗೆ ರಾಜ್ಯದಲ್ಲಿಮೊದಲ ಹಂತದ ಲಾಕ್‌ಡೌನ್ ಮುಕ್ತಾಯವಾಗಲಿದೆ.

ಏ. 14ರ ಬಳಿಕ ಮದ್ಯ ಮಾರಾಟ ಮಾಡುವ ಚಿಂತನೆ: ಸಿಎಂ

ಏ. 14ರ ಬಳಿಕ ಮದ್ಯ ಮಾರಾಟ ಮಾಡುವ ಚಿಂತನೆ: ಸಿಎಂ

ಸರ್ಕಾರದ ಒತ್ತಡ ಹೆಚ್ಚಾಗುತ್ತಿದೆ. ಮಾಜಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಕೂಡ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಆರಂಭಿಸಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಇವತ್ತು ಸುದ್ದಿಗೋಷ್ಠಿಯಲ್ಲಿ ಮದ್ಯ ಮಾರಾಟದ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಮಾಹಿತಿ ಕೊಟ್ಟಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿರುವ ಯಡಿಯೂರಪ್ಪ ಅವರು, ಎಂಎಸ್‌ಐಎಲ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ಕೊಡುವ ಚಿಂತನೆ ಇದೆ. ಏಪ್ರಿಲ್ 14ರ ಬಳಿಕ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಆದರೆ ಇದಕ್ಕೆ ಮದ್ಯ ಮಾರಾಟಗಾರರ ಸಂಘ ವಿರೋಧ ವ್ಯಕ್ತಪಡಿಸಿದೆ.

ಸರ್ಕಾರದ ಚಿಂತನೆಗೆ ರಾಜ್ಯ ಮದ್ಯ ವ್ಯಾಪಾರಿಗಳ ಸಂಘ ಆಕ್ಷೇಪ

ಸರ್ಕಾರದ ಚಿಂತನೆಗೆ ರಾಜ್ಯ ಮದ್ಯ ವ್ಯಾಪಾರಿಗಳ ಸಂಘ ಆಕ್ಷೇಪ

ಎಂಎಸ್‌ಐಲ್‌ ಮಳಿಗೆಗಳ ಮೂಲಕ ಮದ್ಯ ಮಾರಾಟಕ್ಕೆ ಮುಂದಾಗಿರುವ ಸರ್ಕಾರದ ಚಿಂತನೆಯನ್ನು ಬೆಂಗಳೂರಿನ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ. ಕೊರೊನಾ ವೈರಸ್ ಸಮಸ್ಯೆಯಿಂದ ಸಿಎಲ್‌ 4 ಲೈಸನ್ಸ್‌ ಹೊಂದಿರುವ ಕ್ಲಬ್‌ಗಳು ಮಾರ್ಚ್‌ 14 ರಿಂದ ಮುಚ್ಚಿವೆ. ಸಿಎಲ್ 2 ಹಾಗೂ ಸಿಎಲ್ 11ಸಿ ಲೈಸನ್ಸ್‌ ಹೊರತು ಪಡಿಸಿ ಉಳಿದ ಎಲ್ಲ ವರ್ಗದ ಲೈಸನ್ಸ್‌ ಹೊಂದಿರುವ ಮದ್ಯದ ಅಂಗಡಿಗಳು ಮಾರ್ಚ್‌ 21 ರಿಂದ ಮುಚ್ಚಲ್ಪಟ್ಟಿವೆ. ಜೊತೆಗೆ ಸಿಎಲ್ 2 ಹಾಗೂ ಸಿಎಲ್ 11ಸಿ ಲೈಸನ್ಸ್ ಹೊಂದಿದ್ದ ಅಂಗಡಿಗಳು ಮಾರ್ಚ್‌ 24 ರಿಂದ ಮುಚ್ಚಲ್ಪಿಟ್ಟಿವೆ. ಸರ್ಕಾರದ ನಿಲುವಿಗೆ ಮದ್ಯದ ವ್ಯಾಪಾರಿಗಳು ಸಹಕಾರ ಕೊಟ್ಟಿದ್ದಾರೆ. ರಾಜ್ಯದಲ್ಲಿ ಸುಮಾರು 25ಕ್ಕೂ ಹೆಚ್ಚು ಮದ್ಯ ಸೇವನೆ ಮಾಡುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದೀಗ ಸರ್ಕಾರ ಎಂಎಸ್‌ಐಎಲ್‌ಗಳ ಮೂಲಕ ಮದ್ಯ ಮಾರಾಟದ ಚಿಂತನೆ ಮಾಡಿರುವುದನ್ನು ರಾಜ್ಯ ಮದ್ಯ ವ್ಯಾಪಾರಿಗಳ ಸಂಘ ವಿರೋಧಿಸಿದೆ.

MSIL ಮೂಲಕ ಮದ್ಯ ಮಾರಾಟ; ಕಾನೂನು ಸುವ್ಯವಸ್ಥೆಗೆ ಧಕ್ಕೆ

MSIL ಮೂಲಕ ಮದ್ಯ ಮಾರಾಟ; ಕಾನೂನು ಸುವ್ಯವಸ್ಥೆಗೆ ಧಕ್ಕೆ

ಎಂಎಸ್‌ಐಲ್‌ಗಳ ಮೂಲಕ ಮಾತ್ರ ಮದ್ಯ ಮಾರಾಟಕ್ಕೆ ಮುಂದಾಗಿರುವ ಸರ್ಕಾರದ ಚಿಂತನೆಗೆ ರಾಜ್ಯ ಮದ್ಯ ಮಾರಾಟಗಾರರ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವರಿಗೆ ಪತ್ರ ಬರೆದಿರುವ ರಾಜ್ಯ ಮದ್ಯ ಮಾರಾಟಗಾರರ ಸಂಘಟನೆ, ಎಲ್ಲಾ ಲೈಸನ್ಸ್‌ ಹೊಂದಿರುವವರಿಗೆ ಮದ್ಯ ಮಾರಾಟಕ್ಕೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿಕೊಂಡಿದೆ. ರಾಜ್ಯದಲ್ಲಿ ಕೇವಲ 789 ಎಂಎಸ್‌ಐಎಲ್ ಮಳಿಗೆಗಳಿವೆ, ಅವುಗಳಿಗೆ ಮಾತ್ರ ಮದ್ಯ ಮಾರಾಟದ ಅವಕಾಶ ಕೊಟ್ಟರೆ ಜನದಟ್ಟಣೆ ಹೆಚ್ಚಾಗಿ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಮದ್ಯ ಮಾರಾಟದ ಲೈಸನ್ಸ್‌ ಹೊಂದಿರುವ ಎಲ್ಲರಿಗೂ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗ್ರಾಹಕರಿಗೆ ಪಾರ್ಸೆಲ್‌ ಮಾತ್ರ ನೀಡಲು ವಿಶೇಷ ಅನುಮತಿ ಕೊಡಬೇಕೆಂದು ಸಂಘಟನೆ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+