ದೀಪಾವಳಿಯೊಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಭವಿಷ್ಯ ನುಡಿದ ಸಿ ಟಿ ರವಿ

ಹುಬ್ಬಳ್ಳಿ, ಸೆಪ್ಟೆಂಬರ್‌ 09: ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ. ಸರ್ಕಾರ ಪತನಕ್ಕೆ ಟೈಮ್‌ ಬಾಂಬ್ ಫಿಕ್ಸ್ ಆಗಿದೆ.‌ ಸಂಕ್ರಾಂತಿ ದೂರ ಆಯ್ತು, ದೀಪಾವಳಿ ಒಳಗೆ ಕಾಂಗ್ರೆಸ್, ಸಿದ್ದರಾಮಯ್ಯ ಸರ್ಕಾರ ಢಮಾರ್ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹೊಸ ಮುಖ್ಯಮಂತ್ರಿ,ಹೊಸ ಸರ್ಕಾರನಾ ಅಂದ್ರೆ ಕಾಲ ನಿರ್ಣಯ ಮಾಡುತ್ತದೆ. ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್ ಮುಹೂರ್ತ ನಿಗದಿ ಮಾಡಿದೆ. ಹೊರಗಡೆ ಸಿದ್ದರಾಮಯ್ಯ ಅವರ ಹಿಂದೆ ಬಂಡೆಯಂತೆ ನಿಂತಿದಿವಿ ಅಂತಾರೆ. ಸಿದ್ದರಾಮಯ್ಯ ಹೋಗೋದು ಫಿಕ್ಸ್ ಆಗಿದ್ದು, ಹೀಗಾಗಿ ಕಾಂಪಿಟೇಶನ್ ಶುರುವಾಗಿದೆ. ಒಂದು ಡಜನ್ ಗೆ ಹೆಚ್ಚು ಜನ ಆಕಾಂಕ್ಷಿಗಳಾಗಿದ್ದಾರೆ. ಸಿಎಂ ಸಂಗೊಳ್ಳಿ ರಾಯಣ್ಣ ಪಿತೂರಿಗೆ ಬಲಿಯಾಗಿದ್ದಾರೆ ಎಂದಿದ್ದರು. ನೀವು ಸಂಗೊಳ್ಳಿ ರಾಯಣ್ಣ ಅಂತಾ ನಾನು ಭಾವಿಸಲ್ಲ ಎಂದು ಸಿ ಟಿ ರವಿ ಹೇಳಿದರು.

The Siddaramaiah Government Will Fall By Diwali Says CT Ravi

ಕಾಂಗ್ರೆಸ್ ಸರ್ಕಾರದಲ್ಲಿ ಹಗರಣ ನಡೆದಿರೋದು ಸ್ಪಷ್ಟ. ಸರ್ಕಾರದಲ್ಲಿ ಬರೀ ಹಗರಣಗಳೇ ಸುದ್ದಿ. ಇದು ಬ್ರಷ್ಟಾಚಾರದ ಸರ್ಕಾರ.‌ಉಪ್ಪು ತಿಂದವರು ನೀರು ಕುಡಿಯಲಬೇಕು. ಕಳ್ಳನ ಹೆಂಡತಿ ಡ್ಯಾಶ್ ಡ್ಯಾಶ್ ಎಂದು‌ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಗುಡುಗಿದರು.

ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಸಿದ್ಧರಾಮಯ್ಯಾ ಹೋಗುವುದನ್ನೇ ಕಾಯ್ತಾ ಇದ್ದಾರೆ. ವಿರೋಧ ಪಕ್ಷದವರಗಿಂತ ಅವರದೇ ಕುತೂಹಲ ಜಾಸ್ತಿ ಆಗಿದ್ದುನಾವು ವಿರೋಧ ಪಕ್ಷದವರು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡತಾ ಇದ್ದೇವೆ. ಭ್ರಷ್ಟಾಚಾರಿಗಳು ಮನೆಗೆ ಹೋಗಬೇಕು ಅಂತಾ ಹೋರಾಟ ಮಾಡುತ್ತಿದ್ದೇವೆ. ಒಳೊಳಗೆ ಯಾವಾಗ ಮನೆಗೆ ಹೋಗುತ್ತಾರೆ ಅಂತಾ ಸ್ಕೇಚ್ ಹಾಕುತ್ತಿದ್ದಾರೆ. ಸಚಿವರಾದ ಸತೀಶ ಜಾರಕಿಹೋಳಿ, ಆರ್ ವಿ ದೇಶಪಾಂಡೆ, ಎಂ.ಬಿ ಪಾಟೀಲ್, ಡಿ ಕೆ ಶಿವಕುಮಾರ್, ಪರಮೇಶ್ವರ ಉದ್ದ ಹಣಮಂತನ ಬಾಲದಂತೆ ಬೆಳೆಯುತ್ತಿದೆ. ಈಗಾಗಲೇ ಕಾಂಗ್ರೆಸ್ ಒಳಗೆ ನಾನು ನಾನು ಅಂತಾ ಶುರುವಾಗಿದ್ದು, ಇನ್ನೊಂದು ಎರಡು ವಾರ ಕಳೆದರೆ ಇನ್ನೂ ಇಪ್ಪತ್ತು ಜನರು ಹುಟ್ಟಿಕೊಳ್ಳುತ್ತಾರೆ. ನಾನು ನಾನು ಸಿಎಂ ಎನ್ನುತ್ತಿದ್ದಾರೆ. ನಾನೇ ಮುಂದೆ ಅಂತಾ ಈಗಾಗಲೇ ಒಂದು ಡಜನ್ ಜನ ಹುಟ್ಟಿಕೊಂಡಿದ್ದಾರೆ ಎಂದರು.

ಸುಳ್ಳು ಲೆಕ್ಕ ಕಳ್ಳ ಬಿಲ್ಲು 100 ಪರ್ಸೆಂಟ್ ಲೂಟಿ‌. ಅವರ ಹಗರಣ ಮರೆಮಾಚೋಕೆ ಇನ್ನೊಬ್ಬರ ಕಡೆ ಬೊಟ್ಟು ಮಾಡೋದು‌.‌ತಪ್ಪು ಯಾರ ಮಾಡಿದ್ರು ತಪ್ಪೇ‌. ಅವರ ತರಹ ಜಾತಿ ಗುರಾಣಿ ಬಳಸಲ್ಲ. ಭ್ರಷ್ಟಾಚಾರ ಮುಚ್ಚಿ ಹಾಕೋಕೆ ಸಾಧ್ಯ ಇಲ್ಲ. ಸತ್ಯ ಯಾವತ್ತಾದರೂ ಹೊರಬರಲೇಬೇಕು.‌ ಭ್ರಷ್ಟರು ಬಹಳ ದಿನ ಅಧಿಕಾರದಲ್ಲಿ ಇರಬಾರದು‌. ನಾವು ಇವತ್ತು ಈದ್ಗಾ ಮೈದಾನದಲ್ಲಿ ಭಗವಾ ದ್ವಜಾ ಹಾರಿಸಿದ್ದೇವೆ.

ಮೂವತ್ತು ವರ್ಷಗಳ ಹಿಂದೆ ನಾನು ಇಲ್ಲಿ ಹೋರಾಟ ಮಾಡೋಕೆ ಬಂದಿದ್ದೆ. ಇವತ್ತು ಇಲ್ಲಿ ಭಗವಾ ದ್ವಜಾ ಹಾರಿಸಿದ್ದೇವೆ, ಇದು ನಮ್ಮ ಭೂಮಿ. ಹಿಂದುತ್ವ ಬಿಟ್ಟು ಭಾರತ ಇಲ್ಲ, ಭಾರತವನ್ನು ಬಿಟ್ಟು ಹಿಂದೂತ್ವ ಇಲ್ಲ. ರಾಣಿ ಚೆನ್ನಮ್ಮ ಮೈದಾನದಲ್ಲಿ ಇವತ್ತು ಗಣೇಶ ಪ್ರತಿಷ್ಠಾಪನೆ ಆಗಿದೆ. ಭಾರತ ಅಂದ್ರೆ ಚೈತನ್ಯ ಭೂಮಿ,ಕರ್ಮ ಭೂಮಿ ಎಂದು ಅವರು ಹೇಳಿದರು.

ಗಣೇಶೋತ್ಸವ ಆಚರಣೆ ವೇಳೆ ಎಫ್ ಎಸ್ ಎಸ್ ಐ ಪರಿಷ್ಕೃತ ಪರವಾನಗೆ ಬೇಕು ಎಂಬ ಸರಕಾರ ನಡೆ ವಿಚಾರವಾಗಿ ಮಾತನಾಡಿ, ಸರಕಾರದ ನಡೆ ನನಗೆ ಗೊತ್ತಾಗುತ್ತಿಲ್ಲ. ಇತ್ತಿಚ್ಚಿಗೆ ಈದ್ ಮೀಲಾದ್ ಮಾಡಿದರು, ಯಾವುದೇ ಕಂಡಿಷನ್ ಇರಲಿಲ್ಲ. ಹಿಂದು ಹಬ್ಬ ಬಂದ ನಂತರ ಅವರ ಕಂಡಿಷನ್ ಹೊರಗೆ ಬರುತ್ತವೆ. ಹಿಂದು ಹಬ್ಬಗಳಿಗೆ ತೊಂದರೆ ಕೊಡವುದೇ ಅವರ ಕೆಲಸನಾ? ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+