Chetan Ahimsa: ಹಿಂದೂ ರಾಷ್ಟ್ರ ಎಂಬ RSS ಸಿದ್ಧಾಂತವೇ ಸರಿ ಇಲ್ಲ: ನಟ ಚೇತನ್ ಅಹಿಂಸಾ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 27: ಆರ್ ಎಸ್ ಎಸ್ ಚಟುವಟಿಕೆಗಳಿಗೆ ಸರ್ಕಾರಿ ಸ್ಥಳಗಳಲ್ಲಿ ನಿಷೇಧ ಹೇರುವ ಬಗ್ಗೆ ಸರ್ಕಾರದ ತೀರ್ಮಾನ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಧಾರ ಕೈಗೊಂಡು ಸಂಘಕ್ಕೆ ಪರೋಕ್ಷವಾಗಿ ಮೂಗುದಾರ ಹಾಕಿದೆ. ಆರ್‌ಎಸ್‌ಎಸ್ ಬ್ಯಾನ್ ಗೆ ನನ್ನ ವಿರೋಧ ಇದೆ. ಆದರೆ, ಆರ್‌ಎಸ್‌ಎಸ್ ಸಿದ್ಧಾಂತದ ವಿರೋಧ ಕುರಿತು ಸಿನಿಮಾ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಒನ್ ಇಂಡಿಯಾಗೆ ಸಂದರ್ಶನವನ್ನ ನೀಡಿದ್ದು, ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಆರ್‌ಎಸ್‌ಎಸ್ ಸಿದ್ದಾಂತದ ಬಗ್ಗೆ ವಿರೋಧದ ಕುರಿತು ನಟ ಚೇತನ್ ಮಾತನಾಡಿ, ವೀರ ಸಾವರ್ಕರ್ ಬಗ್ಗೆ ಓದಿದಿದ್ದೇನೆ. 1925ರಿಂದ ಆರ್‌ಎಸ್‌ಎಸ್ ವಿಚಾರ ಹಾಗೂ ವಾದವನ್ನ ಓದಿದ್ದೇನೆ. ಅವರ ವಿಚಾರಗಳು, ನ್ಯಾಯದ ಪರಿಕಲ್ಪನೆ ಹಾಗೂ ಉತ್ತಮ ಸಮಾಜದ ಕನಸಿಗೂ ನನಗೂ ಬಹಳ ವ್ಯತ್ಯಾಸ ಇದೆ. ನಾನು ಇತಿಹಾಸದನ್ನ ಸರಳೀಕರಣವಾಗಿ ನೋಡುವುದಿಲ್ಲ. ನಾನು ವೈಜ್ಞಾನಿಕವಾಗಿ ನೋಡುತ್ತೇವೆ. ಹಿಂದೂ ರಾಷ್ಟ್ರದ ಕನಸನ್ನ ಅವರೇ ವ್ಯಾಖ್ಯಾನಿಸಬೇಕು. ಧಾರ್ಮಿಕ ಅಲ್ಪಸಂಖ್ಯಾತರನ್ನ ಇತರರು ಎಂದು ಬಿಂಬಿಸುತ್ತಾರೆ.

ನನಗೆ ಉತ್ತಮ ಸಮಾಜ, ಉತ್ತಮ ಕರ್ನಾಟಕದ ಕಡೆ ನಾವು ನಡೆಯಬೇಕು ಆಗ ಮಾತ್ರ ಉತ್ತಮವಾದ ರಾಜ್ಯವಾಗುತ್ತದೆ. ಅವರು ಹೇಳಿದ್ದೇಲ್ಲಾ ತಪ್ಪಲ್ಲ. ವಕ್ಫ್ ತಿದ್ದುಪಡಿ ಕಾಯ್ದೆ ಬಿಜೆಪಿಬಹುಮತದಿಂದ ತಂದಿದಲ್ಲ. ನನಗೂ ಇದರ ಬಗ್ಗೆ ಸಹಮತ ಇದೆ. ವಕ್ಫ್ ತಿದ್ದುಪಡಿ ಕಾಯ್ದೆ ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲ, ಮುಸ್ಲಿಂರಿಗೆ ಅನುಕೂಲವಾಗುತ್ತದೆ ಎಂಬುದು ನನ್ನ ವಾದ ಎಂದು ಹೇಳಿದರು. ಆರ್‌ಎಸ್‌ಎಸ್ ಬಿಜೆಪಿ ಪರವಾಗಿದೆ ಎಂದು ಸಿನಿಮಾ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಹೇಳಿದರು.
ಇನ್ನೂ ಎಲ್ಲಾದಕ್ಕೂ ಹೋರಾಟವೇ ಪರಿಹಾರವಲ್ಲ. ಆದರೆ, ಉತ್ತಮ ಸಮಾಜ ಕಟ್ಟಲು ಹೋರಾಟವೂ ಒಂದು ಭಾಗ. ಹೋರಾಟದ ಜೊತೆಗೆ ಉತ್ತಮ ಸಮಾಜ ಕಟ್ಟಲು ಜನ ಜಾಗೃತಿಯೂ ಮುಖ್ಯವಾಗಿದೆ. ಹೋರಾಟವೂ ರಚನಾಲ್ಮಕವಾದ ಸಮಸ್ಯೆಗಳಿಗೆ ಪರಿಹಾರವನ್ನ ನೀಡುತ್ತದೆ. ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನ ತಂದರು. ರೈತ ವಿರೋಧ ಕಾನೂನು ತಂದಾಗ ಸಾಕಷ್ಟು ಹೋರಾಟ ನಡೆಯಿತು. ಹೋರಾಟದಿಂದ ಸರ್ಕಾರದ ಮೇಲೆ ಒತ್ತಡ ಆಯ್ತು. ಹೋರಾಟದಿಂದ ಜನರ ಮೇಲಿನ ಭರವಸೆ ಕಡಿಮೆಯಾಗುತ್ತದೆ ಎಂದು ರೈತ ವಿರೋಧಿ ಕಾನೂನುಗಳನ್ನ ಹಿಂಪಡೆದರು, ಇದು ಹೋರಾಟದಿಂದಲೇ ಆಗಿದ್ದು ಎಂದು ನಟ ಚೇತನ್ ಹೇಳಿದ್ದಾರೆ.
ಬೆಳೆ ಪರಿಹಾರದ ಕುರಿತು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಮಾತನಾಡಿ, ಬೆಳೆ ಪರಿಹಾರ ಸಮಸ್ಯೆಯನ್ನ ಪರಿಹಾರ ಮಾಡುವುದನ್ನು ಬಿಟ್ಟು ಬೇರೆ ಪಕ್ಷದ ಬಗ್ಗೆ ಆರೋಪ ಮಾಡುತ್ತಿದ್ದಾರೆ. ನಮ್ಮ ಸರ್ಕಾರದ ಹತ್ರ ಹಣ ಇದೆ. ಆ ಹಣವನ್ನ ಸರಿಯಾಗಿ ಬಳಸಿಕೊಳ್ಳದೇ ವಿವಿಧ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ತೆರಿಗೆ ಸಂಗ್ರಹ ಮಾಡುತ್ತಿದ್ದಾರೆ. ಈ ವ್ಯವಸ್ಥೆ ಉತ್ತಮವಾಗಿ ಇರಬೇಕು ಎಂದು ಹೇಳಿದರು. ಹಣದ ಕೊರತೆ ಒಂದು ಕಡೆಯಾದ್ರೆ, ಇಚ್ಚಶಕ್ತಿ ಕೊರತೆಯೂ ಸಹ ಇದೆ. ಹಣ ಕೇಂದ್ರ ಸರ್ಕಾರದಿಂದ ಹೇಗೆ ಬರ್ಬೇಕೋ ಬರಲಿ. ನ್ಯಾಯ ಅಂದ್ರೆ ಯಾರು ವಂಚಿತರೋ ಅವರಿಗೆ ಹೆಚ್ಚಿನ ಹಣವನ್ನ ಕೊಡ್ಬೇಕು ಎಂದರು.












Click it and Unblock the Notifications