• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ದಿನದಲ್ಲಿ 3.5 ಲಕ್ಷ ಧ್ವಜಗಳನ್ನು ಮಾರಿದ ಅಂಚೆ ಇಲಾಖೆ

|
Google Oneindia Kannada News

ಬೆಂಗಳೂರು,ಆಗಸ್ಟ್‌.9: ಕರ್ನಾಟಕದಲ್ಲಿ ಅಂಚೆ ಕಚೇರಿಗಳ ಮೂಲಕ ಧ್ವಜಗಳ ಮಾರಾಟ ಆಗಸ್ಟ್ 3 ರಂದು ಪ್ರಾರಂಭವಾಗಿದ್ದು, ಐದು ದಿನಗಳಲ್ಲಿ 3.5 ಲಕ್ಷ ಧ್ವಜಗಳು ಮಾರಾಟವಾಗಿವೆ ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ (ಸಿಪಿಎಂಜಿ) ಎಸ್ ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಕರ್ನಾಟಕ ಅಂಚೆ ಸರ್ಕಲ್‌ ಸೂರತ್ ಪೂರೈಕೆದಾರರಿಂದ ದೋಷಪೂರಿತ ಧ್ವಜಗಳ ಒಂದು ಬಾಕ್ಸ್‌ನ್ನು ಸ್ವೀಕರಿಸಿದೆ. ಇವುಗಳನ್ನು ಆಗಸ್ಟ್ 15 ರ ನಂತರ ವಾಪಸ್ ಕಳುಹಿಸಲಾಗುತ್ತದೆ. ಆಗಸ್ಟ್ 12ರ ಮೊದಲು ಕನಿಷ್ಠ 7.5 ಲಕ್ಷ ಧ್ವಜಗಳನ್ನು ಮಾರಾಟ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಹಾಗಾಗಿ, ಉಳಿದವುಗಳನ್ನು ಗಡುವಿನ ಮೊದಲು ಸುಲಭವಾಗಿ ಮಾರಾಟ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ಆನಂದ್ ಸಿಂಗ್ ಬೇಡಿಕೆ: ಸ್ವಾತಂತ್ರ್ಯ ಧ್ವಜಾರೋಹಣಕ್ಕೆ ಜಿಲ್ಲಾ ಕೇಂದ್ರ ಬದಲಿಸಿದ ಸರ್ಕಾರಆನಂದ್ ಸಿಂಗ್ ಬೇಡಿಕೆ: ಸ್ವಾತಂತ್ರ್ಯ ಧ್ವಜಾರೋಹಣಕ್ಕೆ ಜಿಲ್ಲಾ ಕೇಂದ್ರ ಬದಲಿಸಿದ ಸರ್ಕಾರ

ಖಾದಿಯಿಂದ ಮಾಡಿದ ಧ್ವಜಗಳನ್ನು ನಾವು ಮಾರುತ್ತಿಲ್ಲ. ಭಾರತದ ಜವಳಿ ಸಚಿವಾಲಯವು ಪಾಲಿಯೆಸ್ಟರ್ ಧ್ವಜಗಳನ್ನು ರವಾನಿಸಿದೆ. ದೇಶಕ್ಕಾಗಿ ಕಡಿಮೆ ಅವಧಿಯಲ್ಲಿ ಕೋಟಿಗಟ್ಟಲೆ ಧ್ವಜಗಳನ್ನು ತಯಾರಿಸುವ ಅಗತ್ಯವಿತ್ತು. ಸಮಯದ ಕೊರತೆಯಿಂದಾಗಿ ಪಾಲಿಯೆಸ್ಟರ್ ವಸ್ತುವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಖಾದಿಯಲ್ಲಿ ಧ್ವಜಗಳನ್ನು ಸಿದ್ಧಪಡಿಸಲು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ. ಖಾದಿ ವ್ಯಾಪಾರಕ್ಕೆ ಕಡಿವಾಣ ಹಾಕುವ ಉದ್ದೇಶವಿಲ್ಲ ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಪೋಸ್ಟ್ ಮಾಸ್ಟರ್ ಜನರಲ್ ಎಲ್ ಕೆ ಡ್ಯಾಶ್ ನೇತೃತ್ವದಲ್ಲಿ ಬೆಂಗಳೂರು ಅಂಚೆ ಇಲಾಖೆಯ ವಿವಿಧ ಹಂತದ ಸಿಬ್ಬಂದಿ ರಾಜಾಜಿ ನಗರದಲ್ಲಿ ರೋಡ್ ಶೋ ನಡೆಸಲಾಯಿತು. ಭಾರತೀಯ ಅಂಚೆಯೊಂದಿಗೆ ಹರ್ ಘರ್ ತಿರಂಗಾವನ್ನು ವೀಕ್ಷಿಸಲು ಸಾರ್ವಜನಿಕರನ್ನು ಒತ್ತಾಯಿಸುವ ಬ್ಯಾನರ್‌ನೊಂದಿಗೆ ಸಿಬ್ಬಂದಿ ಧ್ವಜಗಳನ್ನು ಹಾರಿಸಿದರು.

The postal department sold 3.5 lakh tiranga flags in five days

ಇನ್ನೂ ಸ್ವಾತಂತ್ರ್ಯ ದಿನಾಚರಣೆಯವರೆಗೆ ಎಲ್ಲಾ ದಿನಗಳಲ್ಲಿಯೂ ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ. ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ರಾಷ್ಟ್ರೀಯ ಧ್ವಜಗಳ ಮಾರಾಟ ಮತ್ತು ವಿತರಣೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ರಾಷ್ಟ್ರೀಯ ಧ್ವಜಗಳ ಮಾರಾಟ ಮತ್ತು ವಿತರಣೆಯನ್ನು ಸುಲಭಗೊಳಿಸಲು, ಎಲ್ಲಾ ಅಂಚೆ ಕಚೇರಿಗಳು 2022 ಆಗಸ್ಟ್‌ 15ರವರೆಗೆ ಪ್ರತಿ ದಿನವೂ ರಜೆ ರಹಿತವಾಗಿ ಕೆಲಸ ಮಾಡಲಾಗುತ್ತದೆ. ಎಲ್ಲಾ ಅಂಚೆ ವಿತರಣೆ ಸೇವಾ ಕಚೇರಿಗಳಲ್ಲಿ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಅಂಚೆ ಇಲಾಖೆ ತಿಳಿಸಿದೆ.

Recommended Video

   ಕೋಲಾರದಿಂದ ಸ್ಪರ್ಧಿಸ್ತಾರಾ ಸಿದ್ಧರಾಮಯ್ಯ..? | *Politics | OneIndia Kannada
   English summary
   The sale of flags through post offices in Karnataka started on August 3 and 3.5 lakh flags were sold in five days, Chief Post Master General (CPMG) S Rajendra Kumar said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X