ರಾಹುಲ್ ಗಾಂಧಿಯನ್ನು ಉಳಿಸಿಕೊಳ್ಳಲು ದಿಗ್ವಿಜಯ್ ಬಲಿ, ಇದು ಕಾಂಗ್ರೆಸ್ ನಾಯಕತ್ವ!

ದಿಗ್ವಿಜಯ್ ಸಿಂಗ್ ರ ಕಾಂಗ್ರೆಸ್ ಪಕ್ಷ ನಿಷ್ಠೆ ಹಾಗೂ ನೆಹರೂ-ಗಾಂಧಿ ಕುಟುಂಬದ ಬಗ್ಗೆ ಅವರು ತೋರಿಸುವ ವಿಶ್ವಾಸದ ಕಾರಣಕ್ಕೆ ಕರ್ನಾಟಕ-ಗೋವಾ ಉಸ್ತುವಾರಿಯಲ್ಲಿ ಮುಂದುವರಿಸಲು ಸಾಧ್ಯವಾಗಿಲ್ಲ. ರಾಹುಲ್ ಬದಲು ದಿಗ್ವಿಜಯ್ ತಲೆದಂಡವಾಗಿದೆ.

ಬೆಂಗಳೂರು, ಮೇ 1: ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಉಸ್ತುವಾರಿ ವಹಿಸಿದ್ದ ದಿಗ್ವಿಜಯ್ ಸಿಂಗ್ ಜಾಗಕ್ಕೆ ಕೆಸಿ ವೇಣುಗೋಪಾಲ್ ಅವರನ್ನು ಕರೆತಂದಿದೆ ಕಾಂಗ್ರೆಸ್. ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಪರಿಸ್ಥಿತಿ ಸರಿಯಾಗಿ ನಿಭಾಯಿಸಿಲ್ಲ ಎಂಬ ಕಾರಣಕ್ಕೆ ದಿಗ್ವಿಜಯ್ ತಲೆ ದಂಡವಾಗಿದೆ.

ರಾಹುಲ್ ಗಾಂಧಿಯ ಮೇಲೆ ಬರಬೇಕಿದ್ದ ಸೋಲಿನ ಹೊಣೆಯನ್ನು ದಿಗ್ವಿಜಯ್ ಮೈ ಮೇಲೆ ಹಾಕಲಾಗಿದೆ. ದಿಗ್ವಿಜಯ್ ಮೇಲೆ ಗೋವಾದ ಕಾಂಗ್ರೆಸ್ ಮುಖಂಡರಿಗೆ ಅದ್ಯಾವ ಪರಿ ಸಿಟ್ಟಿತ್ತೋ ಅಷ್ಟೇ ಆಕ್ರೋಶ ರಾಹುಲ್ ಮೇಲೆ ಸಹ ಇತ್ತು. ಅದರೆ ಕಾಂಗ್ರೆಸ್ ಕಲ್ಲು ಒಗಾಯಿಸಿದ್ದು ದಿಗ್ವಿಜಯ್ ಮೇಲೆ.[ಅನಿರೀಕ್ಷಿತ ಬೆಳವಣಿಗೆ: ಉಸ್ತುವಾರಿ ಸ್ಥಾನದಿಂದ ದಿಗ್ವಿಜಯ್ ಸಿಂಗ್ ಎತ್ತಂಗಡಿ]

The loyalist that he is, Digvijaya Singh took the fall for Rahul Gandhi

ಗೋವೆಯಲ್ಲಿ ಕಾಂಗ್ರೆಸ್ ಸರಕಾರ ರಚನೆಗೆ ಇದ್ದ ಅವಕಾಶ ಕೈ ಚೆಲ್ಲಿದ ಮೇಲೆ ಪಕ್ಷ ತೊರೆದ ವಿಶ್ವಜಿತ್ ರಾಣೆ ಅದಕ್ಕಾಗಿ ರಾಹುಲ್ ಬಗ್ಗೆಯೇ ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ಅಭಿಪ್ರಾಯ ಹೇಳಿಕೊಳ್ಳುವುದಕ್ಕೆ ಅವಕಾಶ ಕೇಳಿದರೆ ಅದಕ್ಕೆ ಕೂಡ ರಾಹುಲ್ ತಮ್ಮ ಭೇಟಿಗೆ ಒಪ್ಪಲಿಲ್ಲ.

ರಾಣೆ ಕಾಂಗ್ರೆಸ್ ಬಿಟ್ಟ ನಂತರ ಸಾವಿಯೋ ರೋಡ್ರಿಗಸ್ ಕೂಡ ಪಕ್ಷ ತೊರೆದರು. ಆಗ ಅವರು ಹೇಳಿದ್ದು, 'ರಾಹುಲ್ ಗಾಂಧಿಯ ನಾಯಕತ್ವ ಒಪ್ಪಲು ಸಾಧ್ಯವಿಲ್ಲ' ಎಂದಿದ್ದರು. ಕಾಂಗ್ರೆಸ್ ಉಪಾಧ್ಯಕ್ಷರು ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ. ದಿಗ್ವಿಜಯ್ ಈ ಸೋಲಿಗೆ ಹೊಣೆ ಎಂದು ಅವರು ಹೇಳಿದ್ದರು.[ಕಾಂಗ್ರೆಸ್ಸಿಗೆ ಹೊಸ ಬಾಸ್, ಆದರೆ ಅವರಲ್ಲ ರಾಹುಲ್!]

The loyalist that he is, Digvijaya Singh took the fall for Rahul Gandhi

ಕಾಂಗ್ರೆಸ್ ಹಾಗೂ ಗೋವೆ ಹೊಣೆಯಿಂದ ದಿಗ್ವಿಜಯ್ ಸಿಂಗ್ ನ ತೆಗೆದು ಹಾಕಿದಾಗ ತಮ್ಮ ಪಕ್ಷ ನಿಷ್ಠೆ ಹಾಗೂ ಕುಟುಂಬ ನಿಷ್ಠೆಯನ್ನು ಟ್ವಿಟ್ಟರ್ ನಲ್ಲಿ ಹೊರಹಾಕಿದರು. ಈ ಎಲ್ಲ ನಿಷ್ಠೆ ಹೊರತಾಗಿಯೂ ರಾಹುಲ್ ಗಾಂಧಿ ಹೊರಬೇಕಿದ್ದ ಸೋಲಿನ ಹೊಣೆಯನ್ನು ದಿಗ್ವಿಜಯ್ ಮೇಲೆ ಬಿದ್ದಿದೆ.

The loyalist that he is, Digvijaya Singh took the fall for Rahul Gandhi

ನಾನು ಪಕ್ಷ ಹಾಗೂ ನೆಹರೂ-ಗಾಂಧಿ ಕುಟುಂಬದ ನಿಷ್ಠ. ನನ್ನ ಸ್ಥಾನಕ್ಕಾಗಿ ಪಕ್ಷ ಹಾಗೂ ಅವರಿಗೆ ಋಣಿ ಎಂದಿದ್ದಾರೆ. ಇನ್ನು ಕರ್ನಾಟಕದಲ್ಲಿ ದಿಗ್ವಿಜಯ್ ಸಿಂಗ್ ಕಾರ್ಯವೈಖರಿಗೆ ಕಾರ್ಯಕರ್ತರು ಅಸಮಾಧಾನಗೊಂಡಿದ್ದರು. ದೊಡ್ಡ ಚಿಂತೆ ವಿಷಯ ಏನು ಅಂದರೆ ರಾಹುಲ್ ಗಾಂಧಿ ಮಾತನಾಡೋಕೆ ಸಿಗಲ್ಲ ಅನ್ನೋದು.[ಒಳ್ಳೆ ಕಾಮಿಡಿ ಕಣ್ರಿ; ರಾಹುಲ್ ಬಂದಿಲ್ವಂತೆ, ಅದ್ಕೆ ಕೈಗೆ ಜೈ ಅಂದ್ರಂತೆ]

The loyalist that he is, Digvijaya Singh took the fall for Rahul Gandhi

ಇದೀಗ ಕೆಸಿ ವೇಣುಗೋಪಾಲ್ ಅದೇ ತಪ್ಪು ಮಾಡಲ್ಲ ಎಂಬ ನಿರೀಕ್ಷೆಯಲ್ಲಿ ಕಾರ್ಯಕರ್ತರಿದ್ದಾರೆ. ಇನ್ನು ಈ ನಡೆಯಿಂದ ಮತ್ತೊಂದು ಸಲ ರಾಹುಲ್ ಗಾಂಧಿ ಅವರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಸಾಮೂಹಿಕ ನಾಯಕತ್ವ ಅಂತ ಏನೇ ಬೊಬ್ಬೆ ಹೊಡೆದರೂ ದಿಗ್ವಿಜಯ್ ಸ್ಥಾನಕ್ಕೆ ಕಲ್ಲು ಬಿದ್ದಿದೆ ಅಷ್ಟೇ. ಈ ಮೂಲಕ ಕಾರ್ಯಕರ್ತರ ಕೋಪ ಶಮನ ಆಗುತ್ತದೆ ಎಂದು ಕಾಂಗ್ರೆಸ್ ನ ಕೇಂದ್ರ ನಾಯಕರಿದ್ದಾರೆ.

ಕೆಲವರಿಗೆ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯುಷ್ಯ. ಇನ್ನೂ ಕೆಲವರಿಗೆ ಸಾವಿರ ವರ್ಷ ಆಯುಷ್ಯ ಇರಲಿ ಅನ್ನೋ ಕಾರಣಕ್ಕೆ ಅಕ್ಕಪಕ್ಕದವರಿಗೆ ಭರ್ತಿ ಒದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+