ಗಲಭೆಕೋರನೊಬ್ಬ ಗೃಹಮಂತ್ರಿಯಾದರೆ ಮೂಲಗುಣ ಬಿಡುವನೇ? ಅಮಿತ್ ಶಾ ಕುರಿತು ಕಾಂಗ್ರೆಸ್ ಟ್ವೀಟ್
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಸಂಘರ್ಷ, ಗಲಭೆಗಳಾಗುತ್ತವೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ವಿರುದ್ಧ ಕರ್ನಾಟಕ ಕಾಂಗ್ರೆಸ್ ಕಿಡಿ ಕಾರಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಅಮಿತ್ ಶಾ ರಾಜ್ಯದ ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದೆ.
ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಕರ್ನಾಟಕದ ಜನತೆಗೆ ಚುನಾವಣೆಯ ಈ ಸಂದರ್ಭದಲ್ಲಿ ಕಾಂಗ್ರೆಸ್ ಭರವಸೆಗಳ ಗ್ಯಾರಂಟಿ ನೀಡಿದರೆ ಬಿಜೆಪಿ ಪಕ್ಷವು ಬೆದರಿಕೆಗಳನ್ನು ಒಡ್ಡುತ್ತಿದೆ. ವ್ಯತ್ಯಾಸ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದಿಂದ ಅಭಿವೃದ್ಧಿ ಮತ್ತು ಬಿಜೆಪಿಯಿಂದ ಗೂಂಡಾಗಿರಿ. ಕರ್ನಾಟಕದ ಪ್ರಜ್ಞಾವಂತ ಜನತೆ ಬಿಜೆಪಿಯ ಗೂಂಡಾಗಿರಿಗೆ ತಕ್ಕ ಪಾಠ ಕಲಿಸಬೇಕಿದೆ" ಎಂದು ಹೇಳಿದೆ.

ಅಮಿತ್ ಶಾ ಹೇಳಿಕೆ ವಿರುದ್ಧ ಕಾಂಗ್ರೆಸ್ ಮುಖಂಡರು ಗುರುವಾರ ಬೆಳಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದಾರೆ. ಅಮಿತ್ ಶಾ ರಾಜ್ಯದ ಜನತೆಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೆವಾಲಾ, ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದರು.
ಕಾಗೆ ಗರಿ ಸಿಕ್ಕಿಸಿಕೊಂಡರೆ ನವಿಲಾಗುವುದೇ?
ಕಾಗೆ ಗರಿ ಸಿಕ್ಕಿಸಿಕೊಂಡರೆ ನವಿಲಾಗುವುದೇ, ಗಲಭೆಕೋರನೊಬ್ಬ ಗೃಹಮಂತ್ರಿಯಾದರೆ ಮೂಲಗುಣ ಬಿಡುವನೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದ್ದು, ಗೃಹ ಸಚಿವ ಅಮಿತ್ ಶಾ ಗಲಭೆ ಮಾಡಿಸುವ ಬಗ್ಗೆ ಬೆದರಿಕೆ ಹಾಕಿದ್ದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಕಪ್ಪು ಚುಕ್ಕೆ. ಕಾಂಗ್ರೆಸ್ ಜನರಲ್ಲಿ ಭರವಸೆ ಮೂಡಿಸಿ ಮತ ಕೇಳಿದರೆ ಬಿಜೆಪಿ ಬೆದರಿಸಿ ಮತ ಕೇಳುತ್ತಿದೆ, ಇಂತಹ ಬಿಜೆಪಿಯನ್ನು ತಿರಸ್ಕರಿಸಿ ಎಂದು ಟ್ವೀಟ್ ಮಾಡಿದೆ.
ಕರ್ನಾಟಕದ ಜನತೆಗೆ ಚುನಾವಣೆಯ ಈ ಸಂಧರ್ಭದಲ್ಲಿ ಕಾಂಗ್ರೆಸ್ ಭರವಸೆಗಳ ಗ್ಯಾರಂಟಿ ನೀಡಿದರೆ ಬಿಜೆಪಿ ಪಕ್ಷವು ಬೆದರಿಕೆಗಳನ್ನು ಒಡ್ಡುತ್ತಿದೆ.
— Karnataka Congress (@INCKarnataka) April 27, 2023
ವ್ಯತ್ಯಾಸ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದಿಂದ ಅಭಿವೃದ್ಧಿ ಮತ್ತು ಬಿಜೆಪಿಯಿಂದ ಗೂಂಡಾಗಿರಿ.
ಕರ್ನಾಟಕದ ಪ್ರಜ್ಞಾವಂತ ಜನತೆ ಬಿಜೆಪಿಯ ಗೂಂಡಾಗಿರಿಗೆ ತಕ್ಕ ಪಾಠ ಕಲಿಸಬೇಕಿದೆ #BJPvsCONGRESS pic.twitter.com/llEuzSpb00
"ದೇಶದ ರಕ್ಷಣೆಯ ಹೊಣೆ ಹೊತ್ತಿರುವ ಗೃಹಮಂತ್ರಿಯೇ 'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆಯಾಗುತ್ತದೆ' ಎಂದು ಧಮಕಿ ಹಾಕಿ ಕನ್ನಡಿಗರನ್ನು ಬೆದರಿಸುತ್ತಿರುವುದು ಅತ್ಯಂತ ಕೀಳು ನಡೆ. ಅಮಿತ್ ಶಾ ಅವರೇ, ಬಿಜೆಪಿ ಸೋತಾಗ ಗಲಭೆ ಮಾಡಿಸುವ ಯೋಜನೆ ಇದ್ದರೆ ಬಿಟ್ಟುಬಿಡಿ, ಇದು ಗುಜರಾತ್ ಅಲ್ಲ, ಕರ್ನಾಟಕ. ತಾವೊಬ್ಬ ಗೃಹಸಚಿವ ಎಂಬುದನ್ನು ಮರೆಯದಿರಿ." ಎಂದು ಟ್ವೀಟ್ ಮಾಡಿದೆ.
ಅಮಿತ್ ಶಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಕರ್ನಾಟಕದ ಭವಿಷ್ಯವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೆ ಒಪ್ಪಿಸಿ ಎಂದಿದ್ದಕ್ಕೆ ಕೂಡ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.












Click it and Unblock the Notifications