Bengaluru Bandh: ಬಂದ್ ಬೆಂಬಲವನ್ನ ವಾಪಸ್ ಪಡೆದ ಹೋಟೆಲ್ ಮಾಲೀಕರ ಸಂಘ! ಕಾರಣವೇನು?

ಬೆಂಗಳೂರು, ಸೆಪ್ಟೆಂಬರ್‌ 25: ಕಾವೇರಿ ನೀರಿಗಾಗಿ ನಾಡಿನಾದ್ಯಂತ ಹೋರಾಟ ನಡೆಯುತ್ತಿದೆ. ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ಅಲ್ಲ, ಒಂದೇ ಒಂದು ಹನಿಯೂ ನಾವು ಬಿಡಲು ಸಿದ್ದರಿಲ್ಲ ಎಂದು ರೈತರು, ಸಂಘಟನೆಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇತ್ತ ಸೆಪ್ಟೆಂಬರ್‌ 25 ರಂದು ಬೆಂಗಳೂರು ಬಂದ್‌ ಗೆ ವಿವಿಧ ಸಂಫಟನೆಗಳು ಕರೆ ನೀಡಿ ಕರೆ ನೀಡಿದೆ. ಬೆಂಗಳೂರು ಬಂದ್‌ ಗೆ ಹಲವು ಸಂಘಟನೆಗಳು ಕೂಡ ಬೆಂಬಲವನ್ನ ಸೂಚಿಸಿದ್ದು, ಓಲಾ ಉಬರ್‌ ಸಂಘಟನೆಗಳು ಬಂದ್‌ ಬೆಂಬಲವನ್ನ ವಾಪಸ್‌ ಪಡೆದ ಬೆನ್ನಲ್ಲೇ ಇದೀಗ ಹೋಟೆಲ್‌ ಮಾಲೀಕರ ಸಂಘ ಕೂಡ ಬೆಂಗಳೂರು ಬಂದ್‌ ಗೆ ನೀಡಿದ ಬೆಂಬಲವನ್ನ ವಾಪಸ್‌ ಪಡೆದಿದೆ.

bandh-support

ಕಾವೇರಿ ವಿಚಾರವಾಗಿ ಕರೆ ನೀಡಲಾಗಿರುವ ಬಂದ್​​ಗೆ ಹೋಟೆಲ್ ಮಾಲೀಕರ ನಡುವೆಯೇ ಒಮ್ಮತ ಮೂಡಿಬಂದಿಲ್ಲ. ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘವು ನಾಳೆಯ ಬಂದ್​ಗೆ ಬೆಂಬಲ ಸೂಚಿಸಿದರೆ, ಬೆಂಗಳೂರು ಹೋಟೆಲ್ ಮಾಲೀಕರ ಸಂಘ 29 ರಂದು ನಡೆಯುವ ಬಂದ್​ಗೆ ಬೆಂಬಲ ಸೂಚಿಸಿದೆ.

ಇನ್ನೂ ಈ ಕುರಿತು ಹೋಟೆಲ್‌ ಮಾಲೀಕರ ಸಂಘದ ಕಾರ್ಯದರ್ಶಿ ಗೋಪಾಲ ಶೆಟ್ಟಿ ಮಾತನಾಡಿ, ನಾಳೆ ಬೆಂಗಳೂರು ಬಂದ್‌ ಗೆ ನೀಡಿದ ಬೆಂಬಲ ವಾಪಸ್‌ ಪಡೆದುಕೊಂಡಿದೆ. ಸೆಪ್ಟೆಂಬರ್‌ 29 ರಂದು ನಡೆಯುವ ಕರ್ನಾಟಕ ಬಂದ್‌ ಗೆ ಹೋಟೆಲ್‌ ಮಾಲೀಕರ ಸಂಘವು ಬೆಂಬಲವಿದೆ ಎಂದು ಹೇಳಿದ್ದಾರೆ.

ಎಪಿಎಂಸಿ ಕಾರ್ಯಕರ್ತರ ಸಂಘ, ಸಮತಾ ಸೈನಿಕ ದಳ, ಉದ್ಯಮಿಗಳ ಸಂಸ್ಥೆ, ಕರ್ನಾಟಕ ಸಾಂಸ್ಕೃತಿಕ ವೇದಿಕೆ, ವಿವಿಧ ನೌಕರರ ಸಂಘ, ಬಿಎಂಟಿಸಿ ಚಾಲಕರ ಸಂಘ, ರೈತಪರ ಸಂಘಟನೆಗಳು, ಕನ್ನಡ ಪರ ಹೋರಾಟಗಾರರ ಸಂಘಟನೆಗಳು, ಆಟೋ ಚಾಲಕರ ಸಂಘಟನೆಗಳು, ಟ್ಯಾಕ್ಸಿ ಕ್ಯಾಬ್ ಚಾಲಕರ ಸಂಘಟನೆಗಳು, ಸಾರಿಗೆ ಸಂಘಟನೆಗಳು, ಐಟಿಬಿಟಿ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಗಳು, ಕಲಾವಿದರ ಸಂಘಗಳು, ಹೋಟೆಲ್ ಮಾಲಿಕರ ಸಂಘಟನೆಗಳು, ರಾಜಕೀಯ ಪಕ್ಷಗಳು, ಬೆಂಗಳೂರು ರಸ್ತೆ ಬದಿ ವ್ಯಾಪಾರಿಗಳ ಸಂಘ, ಬಿಬಿಎಂಪಿ ನೌಕರರ ಸಂಘ ಸೇರಿದಂತೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+