Channapatna Constituency: ಚನ್ನಪಟ್ಟಣ ಟಿಕೆಟ್‌ ಫೈಟ್: ಯಾರಿಗೆ ಮಣೆ ಹಾಕಲಿದೆ ಬಿಜೆಪಿ ಹೈಕಮಾಂಡ್?‌

ಬೆಂಗಳೂರು,ಆಗಸ್ಟ್‌ 26: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬ ವಿಚಾರ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ತೀವ್ರ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಸಿಪಿ ಯೋಗೇಶ್ವರ್‌ ಬಿಜೆಪಿಯಿಂದ ಟಿಕೆಟ್‌ಗಾಗಿ ನಾನಾ ಕಸರತ್ತು ನಡೆಸುತ್ತಿದ್ದು, ಇತ್ತ ಜೆಡಿಎಸ್‌ ನಿಂದಲೂ ಹಲವು ಕಾರ್ಯಕರ್ತರು ಟಿಕೆಟ್‌ ಬೇಡಿಕೆ ಇಟ್ಟಿದ್ದಾರೆ. ಇದೀಗ ಚನ್ನಪಟ್ಟಣ ಟಿಕೆಟ್‌ ಕುರಿತು ನಿಖಿಲ್‌ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ವಿಚಾರ ಅಂತಿಮವಾಗಿ ದೆಹಲಿಯ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈಗಾಗಲೇ ವರದಿ ಸಹ ದೆಹಲಿಯ ಬಿಜೆಪಿ ಹೈಕಮಾಂಡ್ ಸೇರಿದೆ. ಕೆಲವೇ ದಿನಗಳಲ್ಲಿ NDA ಅಭ್ಯರ್ಥಿಯನ್ನ ಘೋಷಣೆ ಮಾಡುತ್ತಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

The High Command Will Decide On The Channapatna Ticket Says Nikhil Kumaraswamy

ಹೆಚ್‌ ಡಿ ಕುಮಾರಸ್ವಾಮಿ ಅವರ ಸ್ವ ಕ್ಷೇತ್ರ. ಕಳೆದ ಎರಡು ಬಾರಿ ಜನ ಶಾಸಕರಾಗಿ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ಹಾಗಾಗಿ ಪಕ್ಷದ ಧ್ವನಿಯಾಗಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುವುದು ನನ್ನ ಜವಾಬ್ದಾರಿ. ಅತೀ ಶೀಘ್ರದಲ್ಲೇ ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಉಪಚುನಾವಣೆ ಪ್ರಕಟವಾಗುತ್ತದೆ. ಆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಜವಾಬ್ದಾರಿ ಕೊಟ್ಟು ಕೆಲಸ ಮಾಡಬೇಕು.ಅಲ್ಲಿನ ಕಾರ್ಯಕರ್ತರ ಬಯಕೆ ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಇನ್ನೂ ಚನ್ನಪಟ್ಟಣ ಕ್ಷೇತ್ರ ಟಿಕೆಟ್ ಗೊಂದಲ, ಕಾಂಗ್ರೆಸ್‌ಗೆ ಲಾಭ ಆಗುತ್ತಾ ಎಂಬ ವಿಚಾರದ ಕುರಿತು ಮಾತನಾಡಿದ ಅವರು, ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಪಕ್ಷದ ಭದ್ರಕೋಟೆ. ವರದೇಗೌಡರು ಇವತ್ತು ನಮ್ಮ ಜೊತೆಯಲಿಲ್ಲ. ಆದ್ರೆ ಅವರು ಪಕ್ಷದಲ್ಲಿ ಇದ್ದಂತಹ ಸಂದರ್ಭದಲ್ಲಿ ಪಕ್ಷಕ್ಕೆ ಜನ ಆಶೀರ್ವಾದ ಮಾಡಿದ್ದಾರೆ. ಜೊತೆಯಲ್ಲಿ ನಾಗರಾಜಣ್ಣ ನಮನ್ನ ಅಗಲಿದ್ದಾರೆ.

ಸರಳ ವ್ಯಕ್ತಿಗೆ ಬೆಂಬಲ ನೀಡಿ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತ ಸ್ಪರ್ಧೆ ಮಾಡಿದರೂ 55ರಿಂದ 6೦ ಸಾವಿರ ಜೆಡಿಎಸ್ ಮತಗಳಿವೆ. ಆಗಿದ್ದಾಗ ಒಂದು ಕಡೆ ಜೆಡಿಎಸ್ ಶಕ್ತಿ ಮತ್ತೊಂದು ಕಡೆ ಸಿ.ಪಿ ಯೋಗಿಶ್ವರ್ ಅವರು ಸಹ ವೈಯಕ್ತಿಕ ವರ್ಚಸ್ಸು ಕ್ಷೇತ್ರದಲ್ಲಿ ಇಟ್ಟುಕೊಂಡಿದ್ದಾರೆ. ಇವೆಲ್ಲವನ್ನ ನೋಡಿದಾಗ ಕಾಂಗ್ರೆಸ್‌ಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ನೆಲೆ ಇಲ್ಲ. ಇತಿಹಾಸ ತೆಗೆದು ನೋಡಿದಾಗ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪ್ರಭಾವವಿಲ್ಲ ಎಂದು ಹಿಂದಿನ ಮಾಹಿತಿ ನೋಡಿದಾಗ ತಿಳಿಯುತ್ತೆ ಎಂದರು.

ಹೆಚ್‌ ಡಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷಸ್‌ಗೆ ಅನುಮತಿ ಕೋರಿ ಲೋಕಾಯುಕ್ತ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಅವರ ನಾಯಕತ್ವದ ಶಕ್ತಿ ಹಳೆ ಮೈಸೂರು ಪ್ರಾಂತ್ಯ ಅಲ್ಲ. ಉತ್ತರ ಕರ್ನಾಟಕದಲ್ಲಿಯೂ ಬಿಜೆಪಿ ಜೆಡಿಎಸ್ ಕಾರ್ಯಕರ್ತ ಹೊಂದಾಣಿಕೆಯಿಂದ ದುಡಿದಿದ್ದಾರೆ. ಇವೆಲ್ಲಾ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿದ್ರು. ಅಲ್ಲಿ ಮುಖ್ಯವಾದ ಚರ್ಚೆ ಕುಮಾರಸ್ವಾಮಿ ಅವರನ್ನ ಯಾವ ರೀತಿ ಕಟ್ಟಿ ಹಾಕಬೇಕು ಅಂತ ಚರ್ಚೆ ಆಗಿದೆ ಅನ್ನುವುದು ನಮ್ಮ ಅಭಿಪ್ರಾಯ ಎಂದರು.

ಗಣಿಗಾರಿಕೆ ಪ್ರಕರಣ ಸುಪ್ರೀಂಕೋರ್ಟ್ ಅಂಗಳಕ್ಕೆ ಹೋಗಿ 7 ವರ್ಷಗಿದೆ. ಸುಪ್ರೀಂ ಕೋರ್ಟ್ ಡೇರೆಕ್ಷನ್ ಕೊಟ್ಟಿದೆ. ಲೋಕಾಯುಕ್ತ ಮತ್ತು SITಗೆ ಮೂರು ತಿಂಗಳ ಗಡುವಿನಲ್ಲಿ ಏನಂದ್ರು ವರದಿಯನ್ನ ಕೊಡಿ ಅಂತ ಕೇಳಿತ್ತು.ಅದರೆ ಯಾವುದೇ ರೀತಿಯ ವರದಿಗಳು ಬಂದಿಲ್ಲ ಎಂದರು.

ಇನ್ನು ಕಾಂಗ್ರೆಸ್ ನಾಯಕರನ್ನ ಪ್ರಶ್ನಿಸಿದ ಅವರು ಇಷ್ಟೆಲ್ಲಾ ಕುಮಾರಣ್ಣ ಬಗ್ಗೆ ಆರೋಪ ಮಾಡುತಿರಲ್ಲ 2018ರಲ್ಲಿ ಕುಮಾರಸ್ವಾಮಿ ಅವರನ್ನ ಸಿಎಂ ಮಾಡೋಕೆ ಬಂದ್ರು ಆಗ ಇವರಿಗೆ ಮಾಹಿತಿ ಇರಲಿಲ್ಲಾ? ಈಗ ಯಾಕೆ ಇದನ್ನ ಪ್ರಶ್ನೆ ಮಾಡ್ತಾ ಇದ್ದಾರೆ. ಅವತ್ತು ಅವರಿಗೆ ಪರಿಜ್ಞಾನ ಇರಲಿಲ್ವಾ? ಇಗ್ಯಾಕೆ ಹೊಸದಾಗಿ ಚರ್ಚೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಕುಮಾರಸ್ವಾಮಿಯವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರೋದು ಜನರನ್ನ ದಿಕ್ಕು ತಪ್ಪಿಸುವ ಕೆಲಸ ಅಷ್ಟೇ. ಇದರಿಂದ ಕುಮಾರಸ್ವಾಮಿರನ್ನ ಸಚಿವ ಸ್ಥಾನದಿಂದ ಇಳಿಸೋಕೆ ಸಾಧ್ಯವಿಲ್ಲ ನಾವು ಆತ್ಮವಿಶ್ವಸದಿಂದ ಹೇಳುತ್ತಿದ್ದೇವೆ, ಕುಮಾರಣ್ಣನವರು ಗಣಿಗಾರಿಕೆಗೆ ಸಹಿ ಹಾಕಿಲ್ಲ. ಮುಡಾ ಹಗರಣವನ್ನು ಮುಚ್ಚಿಹಾಕಲು ಕಾಂಗ್ರೆಸ್ ಪ್ಲಾನ್ ಅಷ್ಟೇ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.

ಸಿಎಂ ಪತ್ನಿ ವಿಜಯನಗರದಲ್ಲಿ ಸೈಟ್ ಪತ್ರ ಬಿಡುಗಡೆ ವಿಚಾರಕ್ಕೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು ನಿಮ್ಮ ಕಣ್ಣ್ಮುಂದೆ ಇದೆ. ಆ ಪತ್ರದಲ್ಲಿ ಏನ್ ಬರೆದಿದ್ದಾರೆ? 40:90 ನಿವೇಶನ ನಮಗೆ ಬೇಡ ಇಂತಹ ಜಾಗ ಬೇಕು ಅಂತ ವೈಟ್ನರ್ ಹಾಕಿ ಅಳಿಸಿ ಹಾಕಿದ್ದಾರೆ. ಅದರಲ್ಲಿ ಏನು ಬರೆದಿದ್ರು? ಎಲ್ಲಿ ಕೇಳಿದ್ರು ಬದಲಿ ಜಾಗವನ್ನ? ಇದೇ ವಿಜಯನಗರ ಬಡಾವಣೆ ಬರೆದಿದ್ರು ಎಂದು ಸಿಎಂ ಸಿದ್ದರಾಮಯ್ಯಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+