KS Eshwarappa: ಬಿಜೆಪಿ ಪಕ್ಷ ನನ್ನ ತಾಯಿರೀ, ಕೆಲವು ದ್ರೋಹಿಗಳ ನನ್ನನ್ನು ದೂರ ಮಾಡಿದ್ದಾರೆ: ಕೆ ಎಸ್ ಈಶ್ವರಪ್ಪ ವಾಗ್ದಾಳಿ
ಹುಬ್ಬಳ್ಳಿ, ಡಿಸೆಂಬರ್ 17: ಬಿಜೆಪಿ ಪಕ್ಷ ನನ್ನ ತಾಯಿರೀ. ಕೆಲವು ದ್ರೋಹಿಗಳ ನನ್ನನ್ನು ದೂರ ಮಾಡಿದ್ದಾರೆ, ಬಿಜೆಪಿ ಪಕ್ಷ ನನ್ನನ್ನು ದೂರ ಮಾಡಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಗುರುತರ ಆರೋಪಗಳಿದ್ದು, ಅದನ್ನು ಡೈವರ್ಟ್ ಮಾಡಲು ಈ ರೀತಿಯ ಆರೋಪಗಳು ಮಾಡುತ್ತಿದ್ದಾರೆ. ಅನ್ವಾರ್ ಮನಪ್ಪಾಡಿ ವರದಿಯನ್ನು ಅಂಗೀಕರಿಸಿ ನಾನು ಅಂದೇ ಹೇಳಿದ್ದೆ. ಸಿದ್ದರಾಮಯ್ಯನವರೇ ಈಗ ಅನ್ವರ್ ಮನಪ್ಪಾಡಿ ವರದಿ ಸದನದ ಮುಂದೆ ಮಂಡಿಸಿ. ಸಿಬಿಐ ಕಂಡ್ರೆ ಕಾಂಗ್ರೆಸ್ ಬೆಂಕಿನೋಡಿದಂತೆ ಆಡುತ್ತಿದ್ದರು ಎಂದು ಹೇಳಿದರು.

ವಿಜಯೇಂದ್ರ ಯಡಿಯೂರಪ್ಪ ಸಿಬಿಐ ಕೊಡಲು ಸಾದ್ಯನಾ..? ಸರ್ಕಾರವೇ ಸಿಬಿಐಗೆ ಕೊಡಬೇಕು, ಕೇಂದ್ರ ನೇರವಾಗಿ ಸಿಬಿಐಗೆ ತನಿಖೆಗೆ ತೆಗೆದುಕೊಳ್ಳಲು ಬರುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೇಲಿನ ಆರೋಪ ತಪ್ಪಿಸಿಕೊಳ್ಳಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ತಮ್ಮ ಆರೋಪ ನಿಜವಾಗಿದ್ದರೆ ಸಿಬಿಐಗೆ ಕೊಡಿ. ವಿಜಯೇಂದ್ರ ಸಹ ಹೇಳಿದ್ದಾರೆ, ಸಿಬಿಐ ಕೊಡಿ ಎಂದಿದ್ದಾರೆ, ಸರ್ಕಾರ ಯಾಕೆ ತಡ ಮಾಡುತ್ತಿದೆ, ಕೊಡಲಿ ಸಿಬಿಐಗೆ ಎಂದು ಕೆ ಎಸ್ ಈಶ್ವರಪ್ಪ ಅವರು ಹೇಳಿದರು.
ಕ್ರಾಂತಿ ವೀರ ಬ್ರಿಗೇಡ್ ಮಾರ್ಗದರ್ಶಕ ಮಂಡಳಿ ರಚಿಸಲಾಗಿದೆ. 1008 ಸಾದು ಸಂತರ ಪಾದ ಪೂಜೆ ಮಾಡುವ ಮೂಲಕ ಉದ್ಘಾಟನೆ ಮಾಡುತ್ತೇವೆ, ಫೆಬ್ರವರಿ4 ರಂದು ಕ್ರಾಂತಿವೀರ ಬ್ರಿಗೇಡ್ ಅಧಿಕೃತ ಉದ್ಘಾಟನೆಯಾಗಲಿದೆ. ಪಂಚಮಸಾಲಿ ಮೀಸಲಾತಿ ಹೋರಾಟ ಸೇರಿದಂತೆ ಯಾವುದೇ ಮೀಸಲಾತಿ ಹೋರಾಟಕ್ಕೆ ಕ್ರಾಂತಿ ವೀರ ಬ್ರಿಗೇಡ್ ಬೆಂಬಲವಿಲ್ಲ ಎಂದರು. ಸೋಮೇಶ್ವರ ಸ್ವಾಮೀಜಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.
ಕ್ರಾಂತಿವೀರ ಬ್ರಿಗೇಡ್ ರಥಸಪ್ತಮಿ ಅಂದ್ರೆ ಫೆಬ್ರುವರಿ 4 ರಂದು ಉದ್ಘಾಟನೆಯಾಗಲಿದೆ. ಬ್ರಿಗೇಡ್ ಗೆ ಒಂದು ಸಮಿತಿಯಾಗಬೇಕಿದೆ. ಬಸವಣಬಾಗೇವಾಡಿಯಲ್ಲಿ ಬ್ರಿಗೇಡ್ ಉದ್ಘಾಟನೆಯಾಗಲಿದೆ..
ಸದಾನಂದಗೌಡ ಹಾಗೂ ಬಸವರಾಜ್ ಬೊಮ್ಮಾಯಿ ಎರಡು ಬಾರಿ ಹಣ ಬಿಡುಗಡೆ ಮಾಡಿದರು. ಆದರೆ, ಕರ್ನಾಟಕ ರಾಜ್ಯದಲ್ಲಿ ಸಾವಿರಾರು ಸಣ್ಣ ಮಠಗಳಿವೆ. ಸಣ್ಣ ಸಣ್ಣ ಮಠಗಳಿಗೆ ಅದಾಯವೂ ಇಲ್ಲ ಸಣ್ಣ ಸಣ್ಣ ಮಠಗಳಿಗೂ ನ್ಯಾಯ ಸಿಗಬೇಕು. ಕ್ರಾಂತಿವೀರ ಬ್ರಿಗೇಡ್ ನಿಂದ ಸಣ್ಣ ಸಣ್ಣ ಮಠಗಳಿಗೆ ನ್ಯಾಯ ಕೊಡಸೋ ಕೆಲಸವಾಗಲಿದೆ. ಬ್ರಿಗೇಡ್ ಆರಂಭ ಮಾಡುತ್ತಿರುವುದು, ಮಠಾಧೀಶರು. ಹಿಂದೆ ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದಾಗ ಕೆಲವರು ಹೈಕಮಾಂಡ್ ನಾಯಕರಿಗೆ ದೂರು ಕೊಟ್ಟರು. ಕೆಲವರು ರಾಣಿ ಚೆನ್ನಮ್ಮ ಬ್ರಿಗೇಡ್ ಎಂದು ಹೇಳಿದರು.
ಬಸವನಗೌಡ ಪಾಟೀಲ್ ಯತ್ನಾಳ್ ಬರ್ತೀನಿ ಅಂದಿದ್ರು. ಬರಬಹುದು. ಯಾವಾಗ ಬರ್ತಾರೋ ಗೊತ್ತಿಲ್ಲ, ನಮ್ಮದು ಮೀಸಲಾತಿ ವಿಚಾರವಾಗಿ ನಾವು ಮಾತಾಡಲ್ಲ. ಹಿಂದೂ ಧರ್ಮದ ರಕ್ಷಣೆಗೆ ಹೋರಾಟವಾಗಿದೆ. ನಾನು ಮೀಸಲಾತಿ ಪರವೂ ಅಲ್ಲ,ವಿರೋಧವೂ ಅಲ್ಲ. ಇದು ಹಿಂದೂ ಧರ್ಮದ ರಕ್ಷಣೆ ಮಾಡಲು ಸಿದ್ಧ ಎಂದರು.












Click it and Unblock the Notifications