ನಿಗಮ ಮಂಡಳಿಗಳ ಹರಾಜು ಪ್ರಕ್ರಿಯೆ ಆರಂಭ: ಅರ್ಹತೆ ಉಳ್ಳವರು ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸಬಹುದು..!

ಬೆಂಗಳೂರು, ನವೆಂಬರ್‌ 29: 2024 ರ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್‌ ಹಾಕಿಕೊಂಡಿರುವ ಕೈ ಪಡೆ, ಪಕ್ಷದಲ್ಲಿ ಅಸಮಾಧಾನವನ್ನ ಶಮನಗೊಳಿಸಲು ನಿಗಮ ಮಂಡಳಿ ರಚನೆಗೆ ಮುಂದಾಗಿದ್ದು, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರು ಮಂಗಳವಾರ ಸಭೆ ನಡೆಸಿ ನಿಗಮ ಮಂಡಳಿ ಕುರಿತು ಚರ್ಚಿಸಿದ್ದಾರೆ.

ಇತ್ತ ಕಾಂಗ್ರೆಸ್‌ ನಿಗಮ ಮಂಡಳಿ ಆಯ್ಕೆ ಕುರಿತು ಟ್ವೀಟ್‌ ಮೂಲಕ ಬಿಜೆಪಿ ವ್ಯಂಗ್ಯವಾಗಿದ್ದು, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅವರಿಂದ ನಿಗಮ ಮಂಡಳಿಗಳ ಹರಾಜು ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದೆ.

The BJP Has Lashed Out At The Selection Of The Corporation Board

▪ ಪಕ್ಷ ನಿಷ್ಠೆ ಅವಶ್ಯಕತೆ ಇಲ್ಲ ಹಣ ಇದೆಯೇ, ಕಾಂಗ್ರೆಸ್ ಸರ್ಕಾರಿ ಸವಾಲು ಒಂದು ಬಾರಿ

▪ ನಕಲಿ ಗಾಂಧಿ ಕುಟುಂಬಕ್ಕೆ ನಿಷ್ಠಾವಂತರಾಗಿರಬೇಕು ಹಣ ಇದೆಯೇ, ಕಾಂಗ್ರೆಸ್ ಸರ್ಕಾರಿ ಸವಾಲು ಎರಡನೇ ಬಾರಿ

▪ ಹೈಕಮಾಂಡ್ ಕೇಳಿದಾಗೆಲ್ಲಾ ಹಣ ಕಳಿಸಲು ತಾಕತ್ತು ಇದೆಯೇ, ಕಾಂಗ್ರೆಸ್ ಸರ್ಕಾರಿ ಸವಾಲು ಮೂರನೇ ಬಾರಿ.

ಕೆಪಿಸಿಸಿ ಅಧ್ಯಕ್ಷ ಚುನಾವಣೆಗೂ ಮುನ್ನ ಮಾಡಿದ ಕೆಲಸವನ್ನು ಚಾಚೂ ತಪ್ಪದೆ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅವರು ನಿರ್ವಹಿಸುತ್ತಿದ್ದಾರೆ. ಮೇಲಿನ ಅರ್ಹತೆ ಉಳ್ಳವರು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸಬಹುದು ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕರ್ನಾಟಕ ಬಿಜೆಪಿ ವ್ಯಂಗ್ಯವಾಡಿದೆ.

ನಿಗಮ ಮಂಡಳಿ ಸ್ಥಾನಕ್ಕೆ ಕಾರ್ಯಕರ್ತರು ಪಟ್ಟು!

ಹೌದು, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಕಾರಣರಾಗಿರುವ ಕಾರ್ಯಕರ್ತರಿಗೆ ಈ ಬಾರೀ ನಿಮಗ ಮಂಡಳಿಯಲ್ಲಿ ಸ್ಥಾನ ನೀಡಬೇಕು ಎಂದು ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದು, ನಮಗೂ ಸಹ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇತ್ತ ಸಂಭಾವ್ಯರ ಪಟ್ಟಿಯಲ್ಲಿರುವ ಶಾಸಕರು ಹಾಗೂ ನಾಯಕರ ಅಭಿಪ್ರಾಯಗಳನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸಂಗ್ರಹಿಸಿದ್ದು, ಈ ಅಭಿಪ್ರಾಯಗಳನ್ನು ಆಧಾರವಾಗಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೊಂದಿಗೆ ಸುರ್ಜೇವಾಲಾ ಅವರು ಅಂತಿಮ ಸಭೆಯಲ್ಲಿ ಪಟ್ಟಿಯನ್ನ ಪೈನಲ್‌ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೂ ಮೊದಲ ಹಂತದಲ್ಲಿ 25 ಮಂದಿ ಸಂಭಾವ್ಯರ ಪಟ್ಟಿ ಈಗಾಗಲೇ ಸಿದ್ಧವಾಗಿದೆ.ಇದರಲ್ಲಿ ಕೆಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು ನಿಗಮ-ಮಂಡಳಿ ಹುದ್ದೆ ಬೇಡ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ನಾಯಕರು ಹಾಗೂ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ.

ಮೊದಲ ಹಂತದ ಪಟ್ಟಿಯಲ್ಲಿರುವ 25 ಮಂದಿಯೂ ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರೇ ಆಗಿದ್ದಾರೆ. ಇನ್ನು ಲೋಕಸಭೆ ಚುನಾವಣೆ ದೃಷ್ಟಿಯಿಂದ 15 ಕಾರ್ಯಕರ್ತರ ಪಟ್ಟಿಯನ್ನೂ ಅಂತಿಮಗೊಳಿಸುವ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಸಚಿವ ಸ್ಥಾನದಿಂದ ವಂಚಿತರಾದ ಶಾಸಕರ ಜೊತೆಗೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಉಸ್ತುವಾರಿ ಸುರ್ಜೆವಾಲಾ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ನಿಗಮ ಮಂಡಳಿಯ ಸಂಭಾವ್ಯ ಪಟ್ಟಿ ಇಲ್ಲಿದೆ?

ಪಿ.ಎಂ ನರೇಂದ್ರ ಸ್ವಾಮಿ

ರಮೇಶ್ ಬಾಬು ಬಂಡಿಸಿದ್ದೇಗೌಡ

ಅನಿಲ್ ಚಿಕ್ಕಮಾದು

ಟಿ.ಡಿ ರಾಜೇಗೌಡ

ಶಿವಲಿಂಗೇಗೌಡ

ಬಿ.ಕೆ ಸಂಗಮೇಶ್

ಬಂಗಾರಪೇಟೆ ನಾರಾಯಣಸ್ವಾಮಿ

ಕೆ.ವೈ ನಂಜೇಗೌಡ

ಬಿ.ಆರ್ ಪಾಟೀಲ್

ಗಣೇಶ್ ಹುಕ್ಕೇರಿ

ಮಹಾಂತೇಶ್ ಕೌಜಲಗಿ

ಯಶವಂತ್ ರಾಯ್ ಗೌಡ ಪಾಟೀಲ್

ಬಿ.ಜಿ ಗೋವಿಂದಪ್ಪ

ರಾಘವೇಂದ್ರ ಹಿಟ್ನಾಳ್

ರಘುಮೂರ್ತಿ

ಭೀಮಣ್ಣ ನಾಯ್ಕ್

ಸತೀಶ್ ಸೈಲ್

ಪ್ರಸಾದ್ ಅಬ್ಬಯ್ಯ

ಜಿ.ಟಿ ಪಾಟೀಲ್

ಡಿ.ಆರ್ ಪಾಟೀಲ್

ಬಸನಗೌಡ ತುರುವಿಹಾಳ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+